ಹಿಂದೂಗಳ ಸಾಮೂಹಿಕ ಮತಾಂತರದ ಪ್ರಕರಣದಲ್ಲಿ ಫತೆಹಪುರ (ಉತ್ತರಪ್ರದೇಶ)ದಲ್ಲಿ ಪಾದ್ರಿ ಸಹಿತ ೧೦ ಕ್ರೈಸ್ತರ ಬಂಧನ !

ಫತೆಹಪುರ (ಉತ್ತರಪ್ರದೇಶ) – ಕೆಲವು ತಿಂಗಳ ಹಿಂದೆ ಹಿಂದೂಗಳ ಸಾಮೂಹಿಕ ಮತಾಂತರ ಮಾಡಿದ ಪ್ರಕರಣದಲ್ಲಿ ಪಾದ್ರಿ ಸಹಿತ ೧೦ ಜನರನ್ನು ಬಂಧಿಸಲಾಗಿತ್ತು. ಏಪ್ರಿಲ್ ೧೪, ೨೦೨೨ ಈ ದಿನದಂದು ಇಲ್ಲಿಯ ಹರಿಹರಗಂಜದಲ್ಲಿನ ಚರ್ಚ್‌ನಲ್ಲಿ ೫೦ ಹಿಂದೂಗಳ ಮತಾಂತರ ಮಾಡಿದ ಪ್ರಕರಣದಲ್ಲಿ ಪೊಲೀಸರು ೫೫ ಜನರ ವಿರುದ್ಧ ದೂರು ದಾಖಲಿಸಿದ್ದರು. ಅದರಲ್ಲಿ ೨೬ ಜನರನ್ನು ಬಂದಿಸಲಾಗಿತ್ತು. ಆದರೆ ಸಾಕ್ಷಿಗಳ ಕೊರತೆಯಿಂದಾಗಿ ಅವರೆಲ್ಲರನ್ನು ಆಗ ಬಿಡುಗಡೆಗೊಳಿಸಲಾಗಿತ್ತು.

ಈಗ ಮಾತ್ರ ಪೊಲೀಸರು ಮತಾಂತರದ ಮುಖ್ಯ ಸೂತ್ರಧಾರ ಇರುವ ಪಾದ್ರಿ ಸಹಿತ ೧೦ ಜನರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು, ಎಂದು ಪೊಲೀಸರು ಹೇಳಿದರು. ಸಿಕ್ಕಿರುವ ಮಾಹಿತಿಯ ಪ್ರಕಾರ ಫತೆಹಪುರ ಜಿಲ್ಲೆಯಲ್ಲಿನ ಲಲೌಲಿ ಕ್ಷೇತ್ರದಲ್ಲಿನ ಚರ್ಚ್‌ನಲ್ಲಿ ಎಪ್ರಿಲ್ ೨೦೨೨ ರ ಇದೇ ರೀತಿಯಲ್ಲಿ ಒಂದು ಪ್ರಾರ್ಥನಾ ಸಭೆಯ ಆಯೋಜನೆ ಮಾಡಿ ಹಿಂದೂಗಳನ್ನು ಮತಾಂತರಗೊಳಿಸಲಾಗಿತ್ತು. ಇದಕ್ಕೆ ಹಿಂದುತ್ವನಿಷ್ಠ ಸಂಘಟನೆಗಳ ವಿರೋಧದ ನಂತರ ಪೊಲೀಸರು ೫ ಜನರ ವಿರುದ್ಧ ದೂರು ದಾಖಲಿಸಿದ್ದರು. ಅದರ ನಂತರ ಪೊಲೀಸರು ೨ ಸ್ಥಳದಿಂದ ೧೦ ಜನರನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಒಟ್ಟು ಬಂದಿಸಲಾಗಿರುವ ಜನರ ಸಂಖ್ಯೆ ೧೬ ಆಗಿದೆ.

ಸಂಪಾದಕೀಯ ನಿಲುವು

ಹಿಂದೂಗಳ ಸತತವಾಗಿ ನಡೆಯುತ್ತಿರುವ ಮತಾಂತರದಿಂದ ಕ್ರೈಸ್ತರ ಹಿಂದೂ ವಿರೋಧಿ ಷಡ್ಯಂತ್ರ ತಿಳಿಯುತ್ತದೆ. ಅಂದರೆ ಇದು ಹಿಂದೂಗಳಲ್ಲಿನ ಧರ್ಮ ಶಿಕ್ಷಣದ ಕೊರತೆಯಿಂದಾಗಿ ಕ್ರೈಸ್ತರು ಚಿಗುರುತ್ತಾರೆ ಇದು ಕೂಡ ಅಷ್ಟೇ ಸತ್ಯ !