ಮಧ್ಯಪ್ರದೇಶದ ಭಾಜಪ ಸರಕಾರದ ಸಚಿವೆ ಉಷಾ ಠಾಕೂರರ ಬೇಡಿಕೆ
ಭೋಪಾಳ (ಮಧ್ಯಪ್ರದೇಶ) – ಒಂದು ವೇಳೆ ಬಲಾತ್ಕಾರ ಪ್ರಕರಣದ ಆರೋಪಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಗಲ್ಲಿಗೇರಿಸಿದರೆ, ಇದೇ ರೀತಿ ಇತರರು ಅಪರಾಧವನ್ನು ಮಾಡುವಾಗ ಅವರು ಒಂದು ಸಾವಿರ ಸಲ ವಿಚಾರ ಮಾಡುವರು ಎಂದು ಭಾಜಪ ಸರಕಾರದ ಮಾಹಿತಿ, ಪರಿಸರ ಮತ್ತು ಸಾಂಸ್ಕೃತಿಕ ಸಚಿವೆ ಉಷಾ ಠಾಕೂರ ಇವರು ಪ್ರಸಾರ ಮಾಧ್ಯಮದೊಂದಿಗೆ ಮಾತನಾಡುವಾಗ ಹೇಳಿದರು. ರಾಜ್ಯದ ಖಾಂಡವಾ ಜಿಲ್ಲೆಯಲ್ಲಿ ಓರ್ವ ೪ ವರ್ಷದ ಬಾಲಕಿಯ ಮೇಲೆ ಆಗಿರುವ ಬಲಾತ್ಕಾರದ ಪ್ರಕರಣದ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.
‘Hang rapists publicly’: MP minister over rape of minor #MadhyaPradesh #deathpenalty https://t.co/8CXXYfrzN6
— Jagran English (@JagranEnglish) November 4, 2022
ಉಷಾ ಠಾಕೂರ ತಮ್ಮ ಮಾತನ್ನು ಮುಂದುವರಿಸುತ್ತಾ, ಮಧ್ಯಪ್ರದೇಶ ಸರಕಾರ ಇಂತಹ ಅಮಾನವೀಯ ಘಟನೆಯನ್ನು ಕಠೋರವಾಗಿ ಎದುರಿಸುತ್ತಿದೆ. ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ರೂಪಿಸಿದ ಮೊದಲ ರಾಜ್ಯ ಇದಾಗಿದೆ. ಇಲ್ಲಿಯವರೆಗೆ ಇಂತಹ ೭೨ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಆದರೂ ಈ ರೀತಿಯ ಪ್ರಕರಣಗಳ ಘಟನೆಗಳು ಮೇಲಿಂದ ಮೇಲೆ ಜರುಗುತ್ತಿದ್ದರೆ, ಇದು ನಮಗೆಲ್ಲರಿಗೂ ಚಿಂತೆಯ ವಿಷಯವಾಗಿದೆ. ನಮಗೆ ವಿವಿಧ ಮಾಧ್ಯಮಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಬೇಕು; ಆದರೆ ಇಂತಹ ಅಸಹ್ಯಕರ ಕೃತ್ಯವನ್ನು ಯಾರಾದರೂ ಹೇಗೆ ಮಾಡಬಲ್ಲರು ? ನಾನು ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾಣರಲ್ಲಿ ಇಂತಹ ಅಪರಾಧಿಗಳಿಗೆ ನಡುರಸ್ತೆಯಲ್ಲಿ ಗಲ್ಲುಶಿಕ್ಷೆ ವಿಧಿಸಬೇಕು ಎಂದು ವಿನಂತಿಸುತ್ತೇನೆ. ಆರೋಪಿಗಳಿಗೆ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ನೀಡಲಾಗುತ್ತದೆ; ಆದರೆ ಅದನ್ನು ಎಲ್ಲಿ ನೀಡಲಾಗುತ್ತದೆ ? ಎಂದು ಯಾರಿಗೂ ತಿಳಿದಿರುವುದಿಲ್ಲ ಎಂದು ಹೇಳಿದರು.