ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಅವಳ ಹತ್ಯೆ ಮಾಡಿದ ಪ್ರಕರಣದಲ್ಲಿ ಇಬ್ಬರು ಮತಾಂಧರಿಗೆ ಗಲ್ಲು ಶಿಕ್ಷೆ

ನವಾಬಗಂಜ (ಉತ್ತರಪ್ರದೇಶ) – ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಬಳಿಕ ಅವಳನ್ನು ಹತ್ಯೆಗೈದ ಪ್ರಕರಣದಲ್ಲಿ ದೋಷಿಗಳೆಂದು ನಿರ್ಧರಿಸಿ ಇಬ್ಬರು ಮತಾಂಧ ಆರೋಪಿಗಳನ್ನು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಇದಲ್ಲದೇ ಸೆಶನ್ಸ್ ನ್ಯಾಯಾಧೀಶ ಪಂಕಜ ಕುಮಾರ ಶ್ರೀವಾಸ್ತವ ಇವರ ನ್ಯಾಯಾಲಯವು ಆರೋಪಿಗಳಿಗೆ ‘ಪೋಕ್ಸೊ’ ಕಾನೂನಿನಡಿ ಇತರ ವಿವಿಧ ಕಲಂಗಳಡಿಯಲ್ಲಿಯೂ ದೋಷಿಗಳೆಂದು ತೀರ್ಮಾನಿಸಿತು.

ಉತ್ತರಪ್ರದೇಶದ ನವಾಬಗಂಜ ತಾಲೂಕಿನ ಪರಸಾಯಿ ಗ್ರಾಮದ ನಿವಾಸಿ ಹಲೀಮ ಅಲಿಯಾಸ್ ಖಡಬಡ ಮತ್ತು ರಿಜ್ವಾನ ಇವರಿಬ್ಬರಿಗೆ ಗಲ್ಲು ಶಿಕ್ಷೆ ಮತ್ತು ೫೦ ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಯಿತು. ಡಿಸೆಂಬರ ೨೭, ೨೦೨೧ ರಂದು ಇಬ್ಬರೂ ಅಪರಾಧಿಗಳು ಬಾಲಕಿಯನ್ನು ಅಪಹರಿಸಿ ಅವಳ ಮೇಲೆ ಬಲಾತ್ಕಾರ ಮಾಡಿದ್ದರು. ತದನಂತರ ಆರೋಪಿಗಳು ಬಾಲಕಿಯ ಹತ್ಯೆ ಮಾಡಿದ್ದರು. ಈ ಪ್ರಕರಣದ ಬಗ್ಗೆ ಡಿಸೆಂಬರ ೩೦, ೨೦೨೧ ರಂದು ಸಂತ್ರಸ್ತ ಬಾಲಕಿಯ ಸಹೋದರನು ನವಾಬಗಂಜ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದನು.

ಈ ಪ್ರಕರಣದ ಪರವಾಗಿ ಸರಕಾರಿ ನ್ಯಾಯವಾದಿ ನಿರ್ಭಯ ಸಿಂಹ ಇವರು ವಾದ ಮಂಡಿಸಿ, ಇಬ್ಬರೂ ಆರೋಪಿಗಳು ಬಾಲಕಿಯನ್ನು ಅಪಹರಿಸಿ, ಅವಳ ಮೇಲೆ ಬಲಾತ್ಕಾರ ಮಾಡಿದರು. ತದನಂತರ ಇಬ್ಬರೂ ಈ ಬಾಲಕಿಯ ಕಾಲುಗಳನ್ನು ಮುರಿದು ಅವಳ ಕಣ್ಣುಗಳಿಗೆ ಗಂಭೀರ ಗಾಯ ಮಾಡಿದ್ದರು. ಅಲ್ಲದೇ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.

ತೀರ್ಪು ನೀಡುವಾಗ ನ್ಯಾಯಾಲಯವು ದುಃಖ ವ್ಯಕ್ತಪಡಿಸಿತು

‘ಯಾವ ದೇಶದಲ್ಲಿ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆಯೋ, ಆ ದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಯುತ್ತದೆ’, ಎಂದು ನ್ಯಾಯಾಲಯವು ಆಲಿಕೆಯ ಸಮಯದಲ್ಲಿ ದುಃಖವನ್ನು ವ್ಯಕ್ತಪಡಿಸಿತು.