ಹಿಂದೂ ಯುವತಿಯ ಮನೆಗೆ ನುಗ್ಗಿದ ಮುಸ್ಲಿಂ ಯುವಕನನ್ನು ಥಳಿಸಿದ್ದರಿಂದ ಮೃತ್ಯು

  • ಸಹಾರನಪುರದ (ಉತ್ತರ ಪ್ರದೇಶ) ಇಸ್ಲಾಂನಗರದಲ್ಲಿ ನಡೆದ ಘಟನೆ

  • ಯುವಕನ ಮೃತ್ಯುವಿನ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ

ಸಹರಾನಪುರ (ಉತ್ತರ ಪ್ರದೇಶ) : ಇಲ್ಲಿನ ಇಸ್ಲಾಂನಗರದಲ್ಲಿ ಜಿಯಾಉರ್‌ರೆಹಮಾನ್ ಎಂಬ ಯುವಕನು ರಾತ್ರಿಯ ಸಮಯದಲ್ಲಿ ಹಿಂದೂ ಯುವತಿಯ ಮನೆಗೆ ನುಗ್ಗಿದನು. ಆದ್ದರಿಂದ ಕುಟುಂಬ ಸದಸ್ಯರು ಅವನನ್ನು ಥಳಿಸಿದ್ದಾರೆ. ಇದರಿಂದ ಅಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಆ ಯುವತಿಯನ್ನು ಜಿಯಾಉರ್‌ರೆಹಮಾನ್‌ನು ಪ್ರೀತಿಸುತ್ತಿದ್ದ’ ಎಂದು ಹೇಳಲಾಗುತ್ತಿದೆ. ಅವರ ಹೊಡೆದಾಟದಲ್ಲಿ ಗಾಯಗೊಂಡ ನಂತರ ಪೊಲೀಸರನ್ನು ಕರೆಸಲಾಯಿತು. ಪೊಲೀಸರು ಅವನನ್ನು ಆಸ್ಪತ್ರೆಗೆ ದಾಖಲಿಸಿದರು, ಆದರೆ ಅವನ ಮೇಲೆ ಚಿಕಿತ್ಸೆ ನಡೆಯುತ್ತಿದ್ದಾಗ ಸಾವನ್ನಪ್ಪಿದನು. ಇದಾದ ನಂತರ, ಆತನ ಪ್ರಿಯತಮೆ ಆಗಿದ್ದ ಹಿಂದೂ ಯವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಯುವಕ ಯುವತಿಯರು ಒಂದೇ ತರಗತಿಗೆ ಹೋಗುತ್ತಿದ್ದರು.

ಪೊಲೀಸರು, ಎರಡೂ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ, ದೂರು ನೀಡಿದರೆ ಅಪರಾಧವನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.