ಕರ್ನಾಟಕದಲ್ಲಿ ಭಾಜಪದ ಯುವ ಮೋರ್ಚಾ ಸದಸ್ಯ ಪ್ರವೀಣ ನೇಟ್ಟಾರು ಇವರ ಹತ್ಯೆಯಲ್ಲಿ ಪಿ.ಎಫ್.ಐ.ನ ೪ ಕಾರ್ಯಕರ್ತರ ಭಾಗಿ

ಈ ೪ ಜನರ ಮಾಹಿತಿ ನೀಡುವವರಿಗೆ ಎನ್.ಐ.ಎನ್. ಬಹುಮಾನ ನೀಡಲಿದೆ !

ಭಾಜಪದ ಯುವ ಮೋರ್ಚಾ ಸದಸ್ಯ ಪ್ರವೀಣ ನೇಟ್ಟಾರು (ಎಡಬದಿಗೆ) ಇವರ ಹತ್ಯೆಯಲ್ಲಿ ಪಿ.ಎಫ್.ಐ.ನ ೪ ಕಾರ್ಯಕರ್ತರು (ಬಲಬದಿಗೆ)

ಬೆಂಗಳೂರು (ಕರ್ನಾಟಕ) – ಭಾಜಪದ ಯುವ ಮೋರ್ಚಾ ಸಮಿತಿಯ ಸದಸ್ಯ ಪ್ರವೀಣ ನೆಟ್ಟಾರು ಇವರನ್ನು ಜುಲೈ ತಿಂಗಳಲ್ಲಿ ಬಳ್ಳಾರೆಯಲ್ಲಿ ಅವರ ಬ್ರಾಯಲಯ ಅಂಗಡಿ ಎದರು ರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ೩ ಮತಾಂಧ ಮುಸಲ್ಮಾನರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಈ ಹತ್ಯೆಯ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’) ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೪ ಸದಸ್ಯರ ಮಾಹಿತಿ ನೀಡುವವರಿಗೆ ನಗದು ಬಹುಮಾನ ಘೋಷಿಸಿದೆ. ಇದರಲ್ಲಿ ಮಹಮ್ಮದ್ ಮುಸ್ತಫಾ ಮತ್ತು ಥುಫೈಲ್ ಎಂ.ಹೆಚ್ ಇವರಿಬ್ಬರ ಮೇಲೆ ತಲಾ ಐದು ಲಕ್ಷ ಹಾಗೂ ಉಮರ ಫಾರೂಖ ಎಂ.ಆರ್ ಮತ್ತು ಅಬೂಬಕರ್ ಸಿದ್ಧಿಕೀ ಇವರ ಸುಳಿವು ನೀಡಿದ ವರಿಗೆ ತಲಾ ಎರಡು ಲಕ್ಷ ಪ್ರತ್ಯೇಕವಾಗಿ ಬಹುಮಾನ ಘೋಷಿಸಲಾಗಿದೆ. ಈ ಹತ್ಯೆಯ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ಶಫೀಕ್ ಬಳೆರೆ ಮತ್ತು ಜಾಕಿರ್ ಸಾವನೂರ್ ಇವರನ್ನು ಬಂಧಿಸಿದ್ದಾರೆ.