ಪ್ರಧಾನಿ ಮೋದಿ ಇವರು ಮೊರಬಿ (ಗುಜರಾತ) ಇಲ್ಲಿಯ ಅಪಘಾತ ಗೊಂಡ ಸ್ಥಳಕ್ಕೆ ಭೇಟಿ

ಗಾಯಗೊಂಡಿರುವ ಜನರ ಯೋಗಕ್ಷೇಮ ವಿಚಾರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ

ಮೊರಬಿ (ಗುಜರಾತ) – ಪ್ರಧಾನಿ ನರೇಂದ್ರ ಮೋದಿ ಇವರು ಇಲ್ಲಿ ಸೇತುವೆ ಕುಸಿದ ಘಟನೆಯಲ್ಲಿ ಸಾವನ್ನಪ್ಪಿರುವ ಕುಟುಂಬದವರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದರು. ಅದರ ಜೊತೆಗೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿರುವ ಜನರ ಯೋಗಕ್ಷೇಮ ವಿಚಾರಿಸಿದರು. ಮೊರಬಿಯಲ್ಲಿ ಮಚ್ಚು ನದಿಯ ಮೇಲೆ ಅಕ್ಟೋಬರ್ ೩೦ ರಂದು ನಡೆದಿರುವ ಸೇತುವೆ ಕುಸಿತದಲ್ಲಿ ಇಲ್ಲಿಯವರೆಗೆ ೧೩೪ ಮೃತ ದೇಹಗಳು ಹೊರತೆಗೆಯಲಾಗಿದೆ. ಈ ಮೃತರ ಸಂಖ್ಯೆ ಅಧಿಕೃತವಾಗಿದೆ. ಘಟನೆಯ ಮೂರನೆಯ ದಿನ ಅಂದರೆ ನವಂಬರ್ ೧ ರಂದು ನೌಕಾ ದಳ ಮತ್ತು ‘ಎನ್.ಡಿ.ಆರ್.ಎಫ್.’ ನ ಪಡೆಯು ಮತ್ತೊಮ್ಮೆ ಮಚ್ಚು ನದಿಯಲ್ಲಿನ ಮೃತ ದೇಹಗಳ ಹುಡುಕಾಟ ನಡೆಸುತ್ತಿದ್ದಾರೆ.

ಗುಜರಾತ್‌ನಲ್ಲಿ ಬುಧವಾರ ಒಂದು ದಿನದ ಸರಕಾರಿ ಶೋಕಾಚರಣೆ ಘೋಷಣೆ

ಗುಜರಾತ್‌ನ ಮೋರಬಿ ಸೇತುವೆ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇವರು ಸೋಮವಾರ ಸಂಜೆ ಗಾಂಧಿನಗರದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಪ್ರಧಾನಿ, ಸಂತ್ರಸ್ತರಿಗೆ ಸಾಧ್ಯ ಇರುವಷ್ಟು ಎಲ್ಲಾ ರೀತಿಯ ಸಹಾಯ ಮಾಡುವುದು. ಈ ಘಟನೆಯ ಬಗ್ಗೆ ಶೋಕಾಚರಣೆಗಾಗಿ ನವಂಬರ್ ೨ ರಂದು ಗುಜರಾತ್‌ನಲ್ಲಿ ಸರಕಾರಿ ಶೋಕಾಚರಣೆಯ ನಿರ್ಣಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಈ ದಿನದಂದು ರಾಜ್ಯದಲ್ಲಿನ ಸರಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಲಾಗುವುದು ಎಂದು ಹೇಳಿದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಭೂಪೆಂದ್ರಭಾಯಿ ಪಟೇಲ, ರಾಜ್ಯದ ಗೃಹ ಸಚಿವ ಹರ್ಷ ಸಂಘವಿ ಇವರ ಜೊತೆಗೆ ಮುಖ್ಯ ಸಚಿವ, ಪೊಲೀಸ ಅಧಿಕಾರಿ ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸೇತುವೆ ಘಟನೆಯ ಕಾನೂನು ರೀತಿಯಲ್ಲಿ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಇದರ ಬಗ್ಗೆ ನವೆಂಬರ್ ೧೪ ರಂದು ವಿಚಾರಣೆ ನಡೆಯುವುದು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಸೇತುವೆಯ ನಿರ್ವಹಣೆ ಮಾಡುತ್ತಿರುವ ಓರೆವಾ ಕಂಪನಿಯ ೨ ವ್ಯವಸ್ಥಾಪಕರು, ಸೇತುವೆ ದುರಸ್ತಿ ಮಾಡುವ ೨ ಕಾಂಟ್ರಾಕ್ಟರ್, ೨ ಟಿಕೆಟ್ ವಿತರಕರು, ಮತ್ತು ೩ ಭದ್ರತಾ ಪಡೆಗಳನ್ನು ಬಂಧಿಸಲಾಗಿದೆ.