ಸಿಎಎ ಕಾನೂನು ಇದು ಅಸ್ಸಾಂ ಒಪ್ಪಂದ ಮತ್ತು ಸ್ಥಳೀಯ ಸಂಸ್ಕೃತಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ !

ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಮಾಣಪತ್ರ

(ಸಿಎಎ ಎಂದರೆ ಪೌರತ್ವ ತಿದ್ದುಪಡಿ ಕಾಯ್ದೆ, ‘ಸಿಟಿಜನ್ ಶಿಪ್ ಅಮೆಂಡ್ಮೆಂಟ್ ಆಕ್ಟ್’)

ನವದೆಹಲಿ – ಪೌರತ್ವ ತಿದ್ದುಪಡಿ ಕಾಯ್ದೆ ೨೦೧೯ ಇದು ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳ ಸ್ಥಳೀಯ ಸಾಂಸ್ಕೃತಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ, ಎಂದು ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿರುವ ಪ್ರತಿಜ್ಞಾಪತ್ರದ ಮೂಲಕ ತನ್ನ ನಿಲುವನ್ನು ಮಂಡಿಸಿತು. ಈ ಕಾಯ್ದೆಯಲ್ಲಿ ಅಸ್ಸಾಂನ ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿ ಇದರ ಮೇಲೆ ಪರಿಣಾಮ ಬಿರುವಂತಹ ಯಾವುದೇ ನಿಬಂಧನೆ ಇಲ್ಲ, ಎಂದೂ ಸಹ ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ‘ಈ ಕಾಯ್ದೆ ಅಸ್ಸಾಂ ಒಪ್ಪಂದ ಹಾಗೂ ಅಲ್ಲಿಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರುವುದು ಹಾಗೆ ಅದು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸುವ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅದರ ಬಗ್ಗೆ ಕೇಂದ್ರ ಸರಕಾರದಿಂದ ಅದರ ಪಕ್ಷ ಮಂಡಿಸಲಾಯಿತು. ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ ೬ ರಂದು ನಡೆಯುವುದು. ‘ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್’ ಮತ್ತು ಅಸ್ಸಾಂನ ಇತರ ಕೆಲವು ಅರ್ಜಿದಾರರು ಸಿಎಎ ವಿರುದ್ಧ ಮನವಿ ದಾಖಲಿಸಿದ್ದರು.

ಕೇಂದ್ರ ಗೃಹ ಸಚಿವಾಲಯವು,

೧. ಪೌರತ್ವ ತಿದ್ದುಪಡಿ ಕಾಯ್ದೆಯು ಡಿಸೆಂಬರ್ ೩೧, ೨೦೧೪ ರ ಮೊದಲು ಅಫಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇಲ್ಲಿಂದ ಧಾರ್ಮಿಕ ಕಿರುಕುಳದಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಹಿಂದೂ, ಸಿಖ್ಖ್, ಬೌದ್ಧ, ಜೈನ್, ಪಾರಸಿ ಮತ್ತು ಕ್ರೈಸ್ತ ಸಮುದಾಯದ ಜನರಿಗೆ ಪೌರತ್ವ ನೀಡುವ ಕುರಿತಾತ ಕಾಯ್ದೆ ಇದಾಗಿದೆ.

೨. ಈ ಕಾಯ್ದೆ ಸಂವಿಧಾನದ ಕಲಂ ೨೯ ರ ಅಡಿಯಲ್ಲಿ ಈಶಾನ್ಯ ರಾಜ್ಯಗಳ ಜನರ ಸಾಂಸ್ಕೃತಿಕ ಹಕ್ಕನ್ನು ನಿರ್ಲಕ್ಷಿಸುವುದಿಲ್ಲ ಎಂದು ಹೇಳಿದೆ.