ಫತೆಹಪುರ (ಉತ್ತರ ಪ್ರದೇಶ) ಇಲ್ಲಿಯ ಚರ್ಚ್‌ನಲ್ಲಿ ಬಲವಂತವಾಗಿ ಬಡ ಹಿಂದೂಗಳ ಮತಾಂತರ : ಪಾದ್ರಿಯ ಬಂಧನ

ಮಧ್ಯದಲ್ಲಿ ಪಾದ್ರಿ ವಿಜಯ ಮಸೀಹ

ಫತೆಹಪುರ (ಉತ್ತರಪ್ರದೇಶ) – ಉತ್ತರಪ್ರದೇಶದ ಫತೆಹಪುರ ಜಿಲ್ಲೆಯಲ್ಲಿನ ಹರಿಹರಗಂಜ ಚರ್ಚ್‌ನಲ್ಲಿ ಹಿಂದೂಗಳ ಮತಾಂತರದ ಘಟನೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಈ ಚರ್ಚ್‌ನಲ್ಲಿ ವಿಜಯ ಮಸಿಹ ಈ ಪಾದ್ರಿ ಮುಚ್ಚುಮರೆಯಲ್ಲಿ ಬಡ ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸುತ್ತಿದ್ದನು. ಈ ಮಾಹಿತಿ ದೊರೆಯುತ್ತಲೇ ಪೊಲೀಸರು ಚರ್ಚ್ ಮೇಲೆ ದಾಳಿ ನಡೆಸಿ ವಿಜಯ ಮಸಿಹ ಇವನನ್ನು ಬಂಧಿಸಿದರು. ಪೊಲೀಸರು ಅವನಿಂದ ಬೇರೆ ಬೇರೆ ಹೆಸರಿನ ಮತ್ತು ವಿಳಾಸದ ೪ ಆಧಾರ ಕಾರ್ಡ್‌ಗಳು ಕೂಡ ವಶಪಡಿಸಿಕೊಂಡರು. ಪೊಲೀಸರ ತನಿಖೆಯಲ್ಲಿ ಪಾದ್ರಿ ವಿಜಯ ಮಸೀಹ ಇವನು ಮತಾಂತರಗೊಳಿಸಿರುವುದು ಒಪ್ಪಿಕೊಂಡನು.

೧. ನಗರದ ಮುಖ್ಯ ಅಧಿಕಾರಿ ವೀರ ಸಿಂಹ ಇವರು, ಎರಡುವರೆ ತಿಂಗಳ ಹಿಂದೆ ಬಡ ಹಿಂದೂಗಳ ಮನಸ್ಸನ್ನು ಬದಲಿಸಿ ಅವರನ್ನು ಮತಾಂತರಗೊಳಿಸಿರುವ ಪ್ರಕರಣದಲ್ಲಿ ಪಾದ್ರಿ ವಿಜಯ ಮಸಿಹ ಇವನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಮತಾಂತರದ ಈ ಗುಂಪಿನಲ್ಲಿ ಇನ್ನೂ ಕೆಲವ ಕ್ರೈಸ್ತರು ಸಹಭಾಗಿ ಇರುವರು. ಅವರನ್ನು ಕೂಡ ಆದಷ್ಟು ಬೇಗನೆ ಬಂದಿಸಿ ಜೈಲಿಗೆ ಕಳುಹಿಸಲಾಗುವುದು.

೨. ಫತೆಹಪುರದ ಹರಿಹರಗಂಜ ಇಲ್ಲಿಯ ಚರ್ಚ್‌ನಲ್ಲಿ ಮತಾಂತರದ ಈ ಘಟನೆ ಮೊದಲೆನಲ್ಲ. ಏಪ್ರಿಲ್ ೧೫, ೨೦೨೨ ರಂದು ಹಿಂದೂಗಳಿಗೆ ಆಮಿಷ ತೋರಿಸಿ ಮತಾಂತರಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಆ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನಿಂದ ‘ಈ ಚರ್ಚ್‌ನಲ್ಲಿ ಬಡ ಹಿಂದೂಗಳಿಗೆ ಕ್ರೈಸ್ತ ಪಂಥದ ಶಿಕ್ಷಣ ನೀಡಿ ಅವರನ್ನು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆ’, ಎಂದು ತಿಳಿಸಿ ತೋರಿಸಿ ವಿರೋಧಿಸಿದ್ದರು. ಅದರ ನಂತರ ಪೊಲೀಸರು ಒಬ್ಬ ಪಾದ್ರಿಯ ಜೊತೆಗೆ ೨೬ ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಸಂಪಾದಕೀಯ ನಿಲುವು

  • ಹಿಂದೂಗಳ ಬಡತನದ ದುರುಪಯೋಗಪಡಿಸಿಕೊಂಡು ಅವರನ್ನು ಮತಾಂತರಗೊಳಿಸುವ ಧೂರ್ತ ಕ್ರೈಸ್ತರ ನಿಜ ರೂಪ ತಿಳಿಯಿರಿ !
  • ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಹಿಂದೂಗಳ ಮತಾಂತರದ ಘಟನೆ ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಸರಕಾರವು ಇಂತಹ ಘಟನೆಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೂ ಇಂತಹ ಚರ್ಚ್‌ಗಳನ್ನು ನಿಷೇಧಿಸಬೇಕು !
  • ಹಿಂದೂಗಳು ಧರ್ಮ ಶಿಕ್ಷಣ ಪಡೆದು ತಮ್ಮಲ್ಲಿ ಧರ್ಮಾಭಿಮಾನ ಹೆಚ್ಚಿಸುವುದು, ಇದೇ ಅವರ ಮತಾಂತರ ತಡೆಯಲು ಪ್ರಭಾವಿ ಉಪಾಯವಾಗಿದೆ !