ಕರ್ನಾಟಕದಲ್ಲಿ ಭಗವದ್ಗೀತೆಯಂತೆ ಹೋಲುವ ಪುಸ್ತಕದ ಮೂಲಕ ಕ್ರೈಸ್ತರಿಂದ ಮತಾಂತರದ ಪ್ರಯತ್ನ !

ತುಮಕೂರು – ಕ್ರೈಸ್ತ ಮಿಶನರಿಗಳಿಂದ ಮತಾಂತರಕ್ಕಾಗಿ ಶ್ರೀಮದ್ ಭಗವತಗೀತೆಯನ್ನು ಹೋಲುವ ‘ಗೀತಯೇ ನಿನ್ನ ಜ್ಞಾನ ಅಮೃತ’, ಹೆಸರಿನ ಪುಸ್ತಕಗಳನ್ನು ಹಂಚಲಾಗುತ್ತಿದೆ, ಎಂದು ಬಜರಂಗದಳದಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಈ ಪುಸ್ತಕದ ಮಾರಾಟ ತಡೆಯುವುದಕ್ಕೆ ಬಜರಂಗದಳ ಒತ್ತಾಯಿಸಿದೆ. ಈ ಪುಸ್ತಕ ನವದೆಹಲಿಯ ಕಬಿರ ಪ್ರಿಂಟಿಂಗ್ ಪ್ರೆಸ್‌ನಿಂದ ಪ್ರಕಾಶಿಸಲಾಗಿದೆ. ಈ ಪುಸ್ತಕದಲ್ಲಿ ಬ್ರಹ್ಮ ದೇವರನ್ನು ‘ಬಾಬಾ ಆದಮ’, ಮಹಾದೇವರಿಗೆ ‘ಮಹಮ್ಮದ’ ಎಂಬಂತೆ ಉಲ್ಲೇಖಿಸಲಾಗಿದೆ. ಜೈನ್ ಪಂಥದಿಂದ ಪೂಜಿಸಲಾಗುವ ಆದಿನಾಥ ಇವರು ‘ಬಾಬಾ ಆದಮ’ ರೂಪದಲ್ಲಿ ಜನಿಸಿದರು. ಬಾಬಾ ಆದಮ ಬ್ರಹ್ಮನ ಗ್ರಹದಿಂದ ಬಂದಿರುವರು. ಅವರು ಬ್ರಹ್ಮನ ಅವತಾರವಾಗಿದ್ದಾರೆ, ಎಂದು ಹೇಳಲಾಗಿದೆ. ಪೊಲೀಸರ ಹೇಳಿಕೆಯ ಪ್ರಕಾರ ತುಮಕೂರಿನಲ್ಲಿ ಕ್ರೈಸ್ತ ಮಿಶನರಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮತಾಂತರಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ.

ಸಂಪಾದಕೀಯ ನಿಲುವು

ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಧೈರ್ಯ ಹೇಗೆ ಆಗುತ್ತದೆ ?, ಎಂದು ಹಿಂದೂಗಳ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತಿದೆ ! ಈಗ ಸರಕಾರವು ಇದರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !