ಗುಜರಾತ್‌ನಲ್ಲಿ ಸಮಾನ ನಾಗರಿಕ ಕಾನೂನು ಜಾರಿ ಮಾಡುವ ಸಂದರ್ಭದಲ್ಲಿ ಭಾಜಪ ಜನರಿಗೆ ಮೋಸ ಮಾಡುತ್ತಿದೆ ! – ಕೇಜ್ರಿವಾಲ್

ಭಾವನಗರ (ಗುಜರಾತ) – ಗುಜರಾತ್‌ನಲ್ಲಿ ಸಮಾನ ನಾಗರೀಕ ಕಾನೂನು ಜಾರಿ ತರುವ ಸಂದರ್ಭದಲ್ಲಿ ಭಾಜಪ ಜನರಿಗೆ ಮೋಸ ಮಾಡುತ್ತಿದೆ. ಉತ್ತರಾಖಂಡ ವಿಧಾನಸಭೆ ಚುನಾವಣೆಯ ಮೊದಲು ಅಧಿಕಾರದಲ್ಲಿರುವ ಭಾಜಪ ಇದೆ ಭರವಸೆ ನೀಡಿತ್ತು; ಆದರೆ ಚುನಾವಣೆ ಗೆದ್ದ ನಂತರ ಕಾರ್ಯರೂಪಕ್ಕೆ ತರಲಿಲ್ಲ, ಎಂದು ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಯೋಜಕ ಅರವಿಂದ ಕೇಜ್ರಿವಾಲ್ ಇವರು ಆರೋಪಿಸಿದರು. ಮುಂಬರುವ ಗುಜರಾತ ವಿಧಾನಸಭಾ ಚುನಾವಣೆಯ ಪ್ರಯುಕ್ತ ಭಾವನಗರದಲ್ಲಿ ಆಯೋಜಿಸಲಾದ ಪತ್ರಕರ್ತರ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು.

ಗುಜರಾತ್‌ನಲ್ಲಿ ಭಾಜಪ ಸರಕಾರ ರಾಜ್ಯದಲ್ಲಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವ ಸಿದ್ಧತೆಯಲ್ಲಿದೆ. ಸರಕಾರ ರಾಜ್ಯದಲ್ಲಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದಕ್ಕಾಗಿ ಒಂದು ಸಮಿತಿಯ ಸ್ಥಾಪನೆ ಮಾಡಲು ಒಪ್ಪಿಗೆ ನೀಡಿದೆ.

ಕೇಜ್ರಿವಾಲ್ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಒಂದುವೇಳೆ ಭಾಜಪ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದಿದ್ದರೇ ಅದು ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಏಕೆ ಜಾರಿ ಮಾಡುತ್ತಿಲ್ಲ ?

೨. ಸಮಾನ ನಾಗರಿಕ ಕಾನೂನಿನ ಬಗ್ಗೆ ಭಾಜಪಗೆ ನಿಜವಾದ ಆಸಕ್ತಿ ಇದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೊಳಿಸಲು ಅದು ಏಕೆ ಪ್ರಯತ್ನಿಸುತ್ತಿಲ್ಲ ? ೨೦೨೪ ರಲ್ಲಿ ಲೋಕಸಭಾ ಚುನಾವಣೆಗಾಗಿ ಭಾಜಪ ಕಾಯುತ್ತಿದೆಯೇ ?

೩. ಸಮಾನ ನಾಗರಿಕ ಕಾನೂನು ಜಾರಿಯಾಗಬೇಕು. ಸಂವಿಧಾನದ ಕಲಂ ೪೪ ರಲ್ಲಿ ಕಾನೂನು ಜಾರಿ ಮಾಡುವುದು ರಾಜ್ಯದ ಜವಾಬ್ದಾರಿ ಇರುವುದು ಸ್ಪಷ್ಟವಾಗಿ ನಮೂದಿಸಲಾಗಿದೆ; ಆದರೆ ಇದು ಎಲ್ಲರ ಒಪ್ಪಿಗೆಯಿಂದ ಆಗಬೇಕು. (ಹೀಗಿದ್ದರೆ, ಕೇಜ್ರಿವಾಲ್ ಇವರು ದೆಹಲಿಯಲ್ಲಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದರ ಬಗ್ಗೆ ಏಕೆ ಯಾವುದೇ ಪ್ರಯತ್ನ ಮಾಡಲಿಲ್ಲ ? ಇದರ ಬಗ್ಗೆ ಅವರು ಮೊದಲು ಮಾತನಾಡಬೇಕು ! – ಸಂಪಾದಕರು)