ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದು ಭಾಜಪದ ಕನಸು ಕೇವಲ ಕನಸಾಗಿಯೇ ಉಳಿಯುವುದು !’ (ಅಂತೆ)

ಸಮಾಜವಾದಿ ಪಕ್ಷದ ಶಾಸಕ ಇಕ್ಬಾಲ್ ಮೆಹಮೂದ ಇವರ ಹಿಂದೂ ದ್ವೇಷ !

ಸಮಾಜವಾದಿ ಪಕ್ಷದ ಶಾಸಕ ಇಕ್ಬಾಲ್ ಮೆಹಮೂದ

ಸಂಭಲ (ಉತ್ತರಪ್ರದೇಶ) – ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಕ್ಕಾಗಿ ಭಾಜಪ ಧರ್ಮ ಮತ್ತು ಜಾತಿಯ ರಾಜಕೀಯ ಮಾಡುತ್ತಿದೆ; ಆದರೆ ಈ ದೇಶಕ್ಕೆ ಹಿಂದೂ ರಾಷ್ಟ್ರ ಮಾಡುವುದು ಭಾಜಪದ ಕನಸು ಕೇವಲ ಕನಸಾಗಿಯೇ ಉಳಿಯುವುದು, ಎಂದು ಇಲ್ಲಿಯ ಸಮಾಜವಾದಿ ಪಕ್ಷದ ಮಾಜಿ ಸಚಿವ ಮತ್ತು ಪ್ರಸ್ತುತ ಶಾಸಕ ಇಕ್ಬಾಲ್ ಮೆಹಮೂದ ಇವರು ಹೇಳಿಕೆ ನೀಡಿದರು.

ಇಕ್ಬಾಲ್ ಇವರು ಕೇಜ್ರಿವಾಲ್ ಇವರ ಬಗ್ಗೆ ಕೂಡ ಟೀಕಿಸಿದರು. ಕೇಜ್ರಿವಾಲ್ ಇವರು ಭಾರತೀಯ ನೋಟುಗಳ ಮೇಲೆ ಶ್ರೀ ಲಕ್ಷ್ಮಿ ಮತ್ತು ಶ್ರೀ ಗಣೇಶನ ಚಿತ್ರ ಮುದ್ರಿಸಲು ಒತ್ತಾಯಿಸಿರುವದರ ಬಗ್ಗೆ ಇಕ್ಬಾಲ್, ಈ ದೇಶ ಎಲ್ಲಾ ಧರ್ಮ ಮತ್ತು ಜಾತಿಯ ಜನರದ್ದಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಬಲಿದಾನ ನೀಡಿದ್ದಾರೆ. ಆದ್ದರಿಂದ ಆಮ್ ಆದ್ಮಿ ಪಕ್ಷ ಮತ್ತು ಭಾಜಪ ಇವರು ರಾಜಕೀಯ ಮಾಡುವುದನ್ನು ಬಿಟ್ಟು ಮಂದಿರ, ಮಸೀದಿ, ಗುರುದ್ವಾರ ಮತ್ತು ಚರ್ಚ್‌ಗಳಿಗೆ ಹೋಗಿ ದೇಶದ ಪ್ರಗತಿ ಮತ್ತು ಉದ್ಯೋಗಾವಕಾಶ ಇದಕ್ಕಾಗಿ ಪ್ರಾರ್ಥನೆ ಮಾಡಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಭಾರತದ ಹಿಂದೂ ರಾಷ್ಟ್ರದ ದಿಶೆಗೆ ನಡೆಯುತ್ತಿರುವ ನಾಗಾಲೋಟ ನೋಡಿ ದಂಗಾಗಿರುವ ಇಕ್ಬಾಲ್ ಮೆಹಮೂದ ಆಘಾತಗೊಳಗಾಗಿರುವ ಸ್ಥಿತಿಯಾಗಿದೆ, ಹೀಗೆ ಹೇಳಿದರೆ ಅದರಲ್ಲಿ ಅಯೋಗ್ಯವೇನು ಇಲ್ಲ !
  • ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಲ್ಲದೆ, ‘ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವ ಜಿಹಾದಿಗಳ ಕನಸು ಕನಸಾಗಿಯೇ ಉಳಿಯುವುದು’, ಇದನ್ನು ಇಕ್ಬಾಲ್ ಗಮನದಲ್ಲಿಟ್ಟುಕೊಳ್ಳಬೇಕು !