ಪಾಕಿಸ್ತಾನಿ ಭಯೋತ್ಪಾದಕರು ಕಳುಹಿಸಿದ ಶಸ್ತ್ರಾಸ್ತ್ರಗಳ ದೊಡ್ಡ ಸಂಗ್ರಹವನ್ನು ಸೈನಿಕರು ಪಂಜಾಬದಲ್ಲಿ ವಶಪಡಿಸಿಕೊಂಡರು !

೩ ಎಕೆ-೪೭, ೩ ಪಿಸ್ತೂಲುಗಳು, ೨೦೦ ಗುಂಡು ಇತ್ಯಾದಿ ಪತ್ತೆ !

ಫಿರೋಜಪುರ (ಪಂಜಾಬ) – ಇಲ್ಲಿ ಗಡಿ ಭದ್ರತಾ ಪಡೆಯು ಶಸ್ತ್ರಾಸ್ತ್ರಗಳು ತುಂಬಿದ್ದ ಚೀಲವನ್ನು ವಶಪಡಿಸಿಕೊಂಡಿದೆ. ಈ ಚೀಲವನ್ನು ಡ್ರೋನ್ ಮೂಲಕ ಇಲ್ಲಿಗೆ ತಲುಪಿಸಲಾಗಿರುವುದಾಗಿ ಹೇಳಲಾಗುತ್ತಿದೆ. ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಪ್ರಕಾರ, ಫಿರೋಜಪುರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆಯ ೧೩೬ ಬೆಟಾಲಿಯನ ವತಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು. ಭಾರತ-ಪಾಕಿಸ್ತಾನ ಗಡಿಯ ಬಳಿ ದೊಡ್ಡ ಚೀಲವು ಕಂಡಿತು. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಅಪಾರ ಪ್ರಮಾಣದ ಮದ್ದುಗುಂಡು ತುಂಬಿರುವುದು ಪತ್ತೆಯಾಗಿದೆ.

ಗಡಿ ಭದ್ರತಾ ಪಡೆಗೆ ದೊರಕಿದ ಈ ಚೀಲದಲ್ಲಿ ೩ ಎಕೆ-೪೭, ೫ ಎಂಪಿ-೫ (ಸಣ್ಣ ಎಕೆ-೪೭), ೩ ಪಿಸ್ತೂಲುಗಳು ಮತ್ತು ೧೭ ಖಾಲಿ ಮ್ಯಾಗಜೀನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ೩೦ ಬೋರ್‌ನ ೧೦೦ ಬುಲೆಟ್‌ಗಳು ಮತ್ತು ೫.೫೬ ಎಂಎಂನ ೧೦೦ ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೈನಿಕರ ಗಮನವನ್ನು ಬೇರೆಕಡೆ ತಿರುಗಿಸಲು ಡ್ರೋನ್‌ನ ಬಳಕೆ !

ಇಷ್ಟು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪಂಜಾಬಿಗೆ ರವಾನಿಸಿ ಅಲ್ಲಿನ ವಾತಾವರಣವನ್ನು ಹಾಳು ಮಾಡುವುದು ಪಾಕಿಸ್ತಾನದ ಉದ್ದೇಶವಾಗಿದೆ. ಪಾಕಿಸ್ತಾನದ ಭಯೋತ್ಪಾದಕರು, ಪಂಜಾಬಿನ ಮಾದಕ ಪದಾರ್ಥ ಸಾಗಣೆ ಮಾಡುವವರು (ಡ್ರಗ್ ಸ್ಮಗ್ಲರ್ಸ್) ಮತ್ತು ದರೋಡೆಕೋರರನ್ನು ಬಳಸಿಕೊಂಡು ಪಂಜಾಬಿನಲ್ಲಿ ಭಯೋತ್ಪಾದನೆಯನ್ನು ಹರಡಲು ಬಯಸುತ್ತಾರೆ. ಗಡಿ ಭದ್ರತಾ ಪಡೆಯ ಗಮನವನ್ನು ಬೇರೆಡೆ ತಿರುಗಿಸುವುದೇ ಈ ಹಿಂದೆ ಸತತವಾಗಿ ಕಳುಹಿಸಲಾಗುತ್ತಿದ್ದ ಡ್ರೋನ್‌ಗಳ ಉದ್ದೇಶವಾಗಿರಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಸೈನಿಕರ ಗಮನವನ್ನು ಬೇರೆಡೆ ತಿರುಗಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ, ಹೆರಾಯಿನ್ ಅನ್ನೂ ಪಂಜಾಬ ಕಡೆಗೆ ತಿರುಗಿಸಲು ಯತ್ನಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಈ ರೀತಿ ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳನ್ನು ಮಾಡುವುದಕ್ಕಿಂತ ‘ಸೌ ಸುನರ್ ಕಿ, ಏಕ್ ಲುಹಾರ್ ಕಿ’ (ಅಕ್ಕಸಾಲಿಗನ ನೂರು ಪೆಟ್ಟುಗಳಾದರೆ ಕಮ್ಮಾರನ ಒಂದು ಪೆಟ್ಟು) ಒಂದೇ ಬಾರಿ ಮುನ್ನುಗ್ಗಿ ಜಿಹಾದಿ ಭಯೋತ್ಪಾದನೆಯ ಪೋಷಕವಾಗಿರುವ ಪಾಕಿಸ್ತಾನವನ್ನು ನಾಶಪಡಿಸುವುದು ಹೆಚ್ಚು ಸೂಕ್ತ ಎಂಬುದನ್ನು ಸಕರಾರ ಯಾವಾಗ ಅರಿತುಕೊಳ್ಳುವರು ?