ತೈಲ ಟ್ಯಾಂಕರ್‌ಗಳಲ್ಲಿ ಗೋವುಗಳ ಕಳ್ಳಸಾಗಣೆ !

ಸಿಂಹಭೂಮ (ಜಾರ್ಖಂಡ) : ೨೩ ಗೋವುಗಳ ಬಿಡುಗಡೆ : ಎರಡು ಗೋವುಗಳ ಸಾವು

ಸಿಂಹಭೂಮ (ಜಾರ್ಖಂಡ) – ಪೊಲೀಸರು ಇಲ್ಲಿ ತೈಲ ಟ್ಯಾಂಕರ್‌ವೊಂದನ್ನು ಪರಿಶೀಲಿಸಿದಾಗ ಅದರಲ್ಲಿ ಗೋವುಗಳನ್ನು ತುಂಬಿರುವುದು ಪತ್ತೆಯಾಯಿತು. ಇದರಲ್ಲಿ ಒಟ್ಟು ೨೩ ಹಸುಗಳು ಪತ್ತೆಯಾಗಿವೆ. ಅದರಲ್ಲಿ ಎರಡು ಗೋವುಗಳು ಉಸಿರುಗಟ್ಟಿ ಸಾವನ್ನಪ್ಪಿದ್ದವು. ಈ ಟ್ಯಾಂಕರ್ ಬಂಗಾಲಕ್ಕೆ ಹೋಗುತ್ತಿತ್ತು. ಟ್ಯಾಂಕರ್ ಚಾಲಕ ಶೇಖ ಮೆರಾಜನನ್ನು ಪೊಲೀಸರು ಬಂಧಿಸಿದ್ದಾರೆ. ವಶಪಡಿಸಿಕೊಂಡ ಗೋವುಗಳನ್ನು ಪೊಲೀಸರು ಗೋಶಾಲೆಗೆ ಒಪ್ಪಿಸಿದ್ದಾರೆ. ಈ ತಪಾಸಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುತ್ತಿದೆ. ಈ ಟ್ಯಾಂಕರ್‌ನ ವಿನ್ಯಾಸವನ್ನು ಗೋವುಗಳ ಸಾಗಣೆಗೆ ಅನುಕೂಲವಾಗುವಂತೆ ಬದಲಾಯಿಸಲಾಗಿತ್ತು.

ಸಂಪಾದಕೀಯ ನಿಲುವು

ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ದಿನನಿತ್ಯ ಗೋವುಗಳ ಹತ್ಯೆ ಹಾಗೂ ಕಳ್ಳಸಾಗಣೆ ನಡೆಯುತ್ತಿರುವಾಗ ಕೇಂದ್ರ ಸರಕಾರವು ಗೋಹತ್ಯೆ ನಿಷೇಧಿಸುವ ಕಾನೂನನ್ನು ಜಾರಿಗೊಳಿಸಬೇಕು ಎಂಬುದು ಗೋಪ್ರೇಮಿ ಮತ್ತು ಧರ್ಮಪ್ರೇಮಿಗಳ ಅಪೇಕ್ಷೆ !