ಬಲಾತ್ಕಾರವನ್ನು ವಿರೋಧಿಸಿದ್ದರಿಂದ ನೌಶಾದನಿಂದ ಅಪ್ರಾಪ್ತ ಹಿಂದೂ ಯುವತಿಯ ಮೂಳೆ ಮುರಿದು ಹತ್ಯೆ !

  • ಬಲಿಯಾ (ಉತ್ತರಪ್ರದೇಶ)ದ ಘಟನೆ

  • ಕೈಯ ನರವನ್ನು ಕತ್ತರಿಸಿದ್ದಾರೆ, ಹಾಗೂ ಕಾಲು ಕತ್ತರಿಸಲೂ ಪ್ರಯತ್ನ !

  • ನೌಶಾದನನ್ನು ಸಂತ್ರಸ್ಥೆಯ ತಂದೆ ಮಗನಂತೆ ಕಾಣುತ್ತಿದ್ದರು !

ಬಲಿಯಾ (ಉತ್ತರಪ್ರದೇಶ) – ಇಲ್ಲಿ ಅಕ್ಟೋಬರ ೧೪ರಂದು ಓರ್ವ ೧೩ ವರ್ಷದ ಹಿಂದೂ ಯುವತಿಯ ಮೇಲೆ ನೌಶಾದ ಎಂಬ ಹೆಸರಿನ ನರಾಧಮನು ಬಲಾತ್ಕಾರ ಮಾಡಲು ಪ್ರಯತ್ನಿಸಿದ್ದನು. ಆಕೆಯು ಇದನ್ನು ವಿರೋಧಿಸಿದಾಗ ನೌಶಾದನು ಆಕೆಯ ಕುತ್ತಿಗೆ ಹಿಚುಕಿದನು, ಹಾಗೆಯೇ ಆಕೆಯನ್ನು ಅಮಾನುಷವಾಗಿ ಥಳಿಸಿದ್ದಾನೆ. ಇಷ್ಟೇ ಅಲ್ಲ, ಆಕೆಯ ಎಲುಬುಗಳನ್ನು ಮುರಿದಿದ್ದಾನೆ ಹಾಗೂ ಆಕೆಯ ಕೈಯ ನರವನ್ನು ಕತ್ತರಿಸಿದ್ದಾನೆ. ಈ ಸಮಯದಲ್ಲಿ ಅವನು ಆಕೆಯ ಕಾಲನ್ನು ಕತ್ತರಿಸಲು ಪ್ರಯತ್ನಿಸಿದ್ದಾನೆ, ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಮರಣೋನ್ಮುಖ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕೊನೆಗೆ ಅಕ್ಟೋಬರ್‌ ೨೨ರಂದು ಆಕೆಯು ಮೃತಳಾದಳು. ಪೊಲೀಸರು ನೌಶಾದನನ್ನು ಬಂಧಿಸಿದ್ದಾರೆ. ಮೃತ ಸಂತ್ರಸ್ಥೆಯ ಕುಟುಂಬದವರು ‘ನೌಶಾದನನ್ನು ನರಳಿಸಿ ಕೊಲ್ಲಬೇಕು, ಎಂದು ಮನವಿ ಮಾಡಿದ್ದಾರೆ.

ಈ ಘಟನೆಯ ಬಗ್ಗೆ ಸಂತ್ರಸ್ಥೆಯ ತಂದೆಗೆ ತಿಳಿದಾಗ ಅವರು, ತಾನು ನೌಶಾದನನ್ನು ಸ್ವಂತ ಮಗನಂತೆ ಭಾವಿಸುತ್ತಿದ್ದೆನು. ಅವನಿಗೆ ಮನೆಗೆ ಸಹಜವಾಗಿ ಬರುವ ಸ್ವಾತಂತ್ರ್ಯವಿತ್ತು. ಅವನು ನಮ್ಮ ಮನೆಯಿಂದ ಕೇವಲ ೧೦ ಮೀಟರ್‌ ಅಂತರದಲ್ಲಿದ್ದನು, ಎಂದು ಹೇಳಿದರು.