ಅಜ್ಮೀರ್ (ರಾಜಸ್ಥಾನ) – ಪಂಜಾಬ್ ಪೊಲೀಸರು ಅಜ್ಮೀರ್ ದರ್ಗಾದ ಸೇವಕರು ಮತ್ತು ಅಂಜುಮನ್ ಸಂಸ್ಥೆಯ ಪದಾಧಿಕಾರಿಯೊಬ್ಬರ ಮಗ ತೌಸೀಫ್ ಚಿಶ್ತಿಯನ್ನು ಬಂಧಿಸಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಚರತ್ ಸಿಂಗ್‌ಗೆ ಸಹಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನನ್ನು ಬಂಧಿಸಲಾಗಿದೆ. ಚರತ್ ಸಿಂಗ್ ತನ್ನ ಸಹಚರರೊಂದಿಗೆ ಪಂಜಾಬನ ಮೊಹಾಲಿಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ದಾಳಿಗಾಗಿ ತೌಸೀಫ್ ಚರತ್ ಸಿಂಗ್‌ಗೆ ಪಿಸ್ತೂಲ್ ನೀಡಿದ್ದ. ಚರತ್ ಸಿಂಗ್‌ನನ್ನು ಮುಂಬಯಿನಲ್ಲಿ ಬಂಧಿಸಲಾಗಿದೆ. ಆತ ನೀಡಿದ ಮಾಹಿತಿಯ ಪ್ರಕಾರ ಒಂದು ಎಕೆ ೪೭ ರೈಫಲ್ ಮತ್ತು ೧೦೦ ಕಾಟ್ರಿಡ್ಜ್‌ಗಳನ್ನು ಪಂಜಾಬ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಚರತ್ ಸಿಂಗ್ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯಾದ ‘ಬಬ್ಬರ್ ಖಾಲಸಾ’ದ ಭಯೋತ್ಪಾದಕನಾಗಿದ್ದಾನೆ.
ಸಂಪಾದಕೀಯ ನಿಲುವುರಾಜಸ್ಥಾನದಲ್ಲಿ ಕನ್ನಯ್ಯಾಲಾಲ್ ಹತ್ಯೆಗೆ ಸಂಬಂಧಿಸಿದಂತೆ ಅಜ್ಮೀರ್ ದರ್ಗಾದ ಸೇವಕನನ್ನು ಸಹ ಬಂಧಿಸಲಾಗಿತ್ತು. ಹಾಗೂ ಈ ದರ್ಗಾಕ್ಕೆ ಸಂಬಂಧಪಟ್ಟವರನ್ನೆಲ್ಲ ಕೂಲಂಕಷವಾಗಿ ತನಿಖೆ ನಡೆಸಬೇಕು ! |