ಪ್ರಧಾನಿ ಮೋದಿ ಇವರಿಂದ ಕಾರ್ಗಿಲ್ ನಲ್ಲಿ ದೀಪಾವಳಿ ಆಚರಣೆ !

ದೀಪಾವಳಿ ಎಂದರೆ ಭಯೋತ್ಪಾದನೆ ಮುಗಿಸುವ ಉತ್ಸವ ! – ಪ್ರಧಾನಿ ಮೋದಿ

ಕಾರ್ಗಿಲ್ (ಲಡಾಕ್) – ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ ೨೪ ರಂದು ಲಡಾಖನ ಕಾರ್ಗಿಲ್‌ಗೆ ಹೋಗಿ ಭಾರತೀಯ ಸೈನ್ಯದ ಸೈನಿಕರ ಜೊತೆ ದೀಪಾವಳಿಯ ಆಚರಿಸಿದರು. ಮೋದಿ ಪ್ರಧಾನಿಯಾದ ನಂತರ ಪ್ರತಿವರ್ಷ ಸೈನಿಕರ ಜೊತೆ ದೀಪಾವಳಿಯನ್ನು ಆಚರಿಸುತ್ತಾರೆ. ೨೦೧೪ ರಲ್ಲಿ ಅವರು ಮೊದಲು ಬಾರಿ ಸಿಯಾಚಿನ್‌ನಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ್ದರು. ದೀಪಾವಳಿಯಲ್ಲಿ ಮೋದಿಯವರು ಸೈನಿಕರ ಜೊತೆ ಇರುವುದು ಇದು ೯ ನೇ ವರ್ಷವಾಗಿದೆ.

ಪ್ರಧಾನಿ ಮೋದಿಯವರು, ದೀಪಾವಳಿ ಎಂದರೆ ಭಯೋತ್ಪಾದನೆ ಮುಗಿಸುವ ಉತ್ಸವವಾಗಿದೆ. ಕಾರ್ಗಿಲ್ ಕೂಡ ಅದನ್ನೇ ಮಾಡಿದೆ. ಕಾರ್ಗಿಲ್‌ನಲ್ಲಿ ನಮ್ಮ ಸೈನ್ಯ ಭಯೋತ್ಪಾದನೆಯ ಕಂಟಕ ಮುಗಿಸಿದರು ಮತ್ತು ದೇಶದಲ್ಲಿ ವಿಜಯದ ದೀಪಾವಳಿ ಆಚರಿಸಲಾಗಿತ್ತು ಅದು ಇಂದಿಗೂ ಜನರ ನೆನಪಿನಲ್ಲಿ ಉಳಿದಿದೆ. ವಿಜಯದ ಸಾಕ್ಷಿ ಆಗುವ ಭಾಗ್ಯ ನನಗೆ ದೊರೆತಿದೆ ಮತ್ತು ಆ ಯುದ್ಧ ಹತ್ತಿರದಿಂದ ನೋಡಿದ್ದೇನೆ. ೨೩ ವರ್ಷದ ಹಳೆಯ ಚಿತ್ರಗಳನ್ನು ತೋರಿಸಿ ಆ ಕ್ಷಣದ ನೆನಪು ಮಾಡಿಕೊಟ್ಟಿರುವುದರಿಂದ ನಾನು ಇಲ್ಲಿಯ ಅಧಿಕಾರಿಗಳಿಗೆ ಆಭಾರಿಯಾಗಿದ್ದೇನೆ. ದೇಶದ ಒಬ್ಬ ಸಾಮಾನ್ಯ ನಾಗರೀಕನೆಂದು ನನ್ನ ಕರ್ತವ್ಯ ನನ್ನನ್ನು ರಣಾಂಗಣಕ್ಕೆ ಕರೆದುಕೊಂಡು ಬಂದಿದೆ. ನಮಗೆ ಏನೆಲ್ಲಾ ಸಹಾಯ ಮಾಡಲು ಸಾಧ್ಯವಾಗುತ್ತದೆ, ಅದನ್ನು ಮಾಡುವುದಕ್ಕಾಗಿ ನಾವು ಇಲ್ಲಿ ಇದ್ದೆವು.