ಇಸ್ರೋದಿಂದ ಎಲ್ಲಕ್ಕಿಂತ ಭಾರವಾದ ರಾಕೇಟ್ ‘ಎಲ್.ವಿ.ಎಮ್. ೩’ ಯಶಸ್ವೀ ಪ್ರಕ್ಷೇಪಣೆ !

ಬೆಂಗಳೂರು– ಭಾರತೀಯ ಅಂತರಿಕ್ಷ ಸಂಶೋಧನ ಸಂಸ್ಥೆ, ಎಂದರೆ ‘ಇಸ್ರೋ’ ದೀಪಾವಳಿಯ ಮುಹೂರ್ತದಲ್ಲಿ ಐತಿಹಾಸಿಕ ಕಾರ್ಯವನ್ನು ಮಾಡಿದೆ. ಅಕ್ಟೋಬರ ೨೩ ರ ರಾತ್ರಿ ೧೨ ಗಂಟೆ ೭ ನಿಮಿಷಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಎಲ್ಲಕ್ಕಿಂತ ಭಾರವಾದ ರಾಕೇಟ್ ‘ಎಲ್.ವಿ.ಎಮ್. ೩’ ರ ಮೂಲಕ ಅದು ಮೊದಲ ವಾಣಿಜ್ಯ ಪ್ರಕ್ಷೇಪಣೆಯನ್ನು ಮಾಡಿತು. ಇದರ ಮೂಲಕ ‘ವನ್ ವೆಬ್’ ಈ ಕಂಪನಿಯ ೩೬ ಉಪಗ್ರಹಗಳನ್ನು ಅಂತರಿಕ್ಷದಲ್ಲಿ ಬಿಡಲಾಯಿತು.

೧. ‘ವನ್ ವೆಬ್’ ಇದೊಂದು ಬ್ರಿಟಿಷ ಖಾಸಗಿ ಉಪಗ್ರಹ ಕಂಪನಿಯಾಗಿದ್ದು ಅದರ ೩೬ ಉಪಗ್ರಹಗಳನ್ನು ಪ್ರಕ್ಷೇಪಣೆ ಮಾಡಲಾಗಿದೆ. ಈ ಕೌಶಲ್ಯದ ಮೂಲಕ ಇಸ್ರೋ ‘ಜಾಗತಿಕ ವಾನಿಜ್ಯ ಪ್ರಕ್ಷೇಪಣ ಸೇವೆ’ಯನ್ನು ನೀಡುವ ಸ್ಫರ್ಧೆಯಲ್ಲಿ ಪ್ರವೇಶಿಸಿದೆ.

೨. ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ ಇವರು ನೀಡಿರುವ ಮಾಹಿತಿಗನುಸಾರ ‘ಎಲ್.ವಿ.ಎಮ್. ೩’ ಈ ರಾಕೇಟ್ ೪೩.೫ ಮೀಟರ್ ಉದ್ದವಾಗಿದ್ದು ಅದರಲ್ಲಿ ೮ ಸಾವಿರ ಕಿಲೋಮೀಟರ್‌ವರೆಗೆ ಉಪಗ್ರಹವನ್ನು ಸಾಗಿಸುವ ಕ್ಷಮತೆ ಇದೆ. ೨೦೨೩ ರಲ್ಲಿಯೂ ‘ಎಲ್.ವಿ.ಎಮ್. ೩’ರ ಮೂಲಕ ‘ವನ್ ವೆಬ್’ನ ಇನ್ನೂ ೩೬ ಉಪಗ್ರಹಗಳನ್ನು ಅಂತರಿಕ್ಷದಲ್ಲಿ ಬಿಡಲಾಗುವುದು.

೩. ಬ್ರಿಟನ್‌ನ ಜೊತೆಗೆ ಮಾಡಿರುವ ೧೦೮ ಉಪಗ್ರಹಗಳ ಒಪ್ಪಂದಕ್ಕನುಸಾರ ಮೊದಲ ಹಂತದಲ್ಲಿ ೩೬ ಉಪಗ್ರಹಗಳನ್ನು ಪ್ರಕ್ಷೇಪಣೆ ಮಾಡಲಾಯಿತು.