ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರ ಗಂಭೀರ ಆರೋಪ
ತಿರುವನಂತಪುರಂ – ಕೇರಳ ರಾಜ್ಯದಲ್ಲಿ ಮಾದಕ ವಸ್ತುಗಳ ವ್ಯಾಪಾರ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಅದು ಪಂಜಾಬನ್ನು ಹಿಂದಿಕ್ಕಿ ‘ಡ್ರಗ್ಸ್ ಕ್ಯಾಪಿಟಲ್’ (ಮಾದಕ ವಸ್ತುಗಳ ರಾಜಧಾನಿ) ಆಗುವ ದಿಶೆಯತ್ತ ವೇಗವಾಗಿ ಸಾಗುತ್ತಿದೆ, ಎಂದು ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ಗಂಭೀರವಾಗಿ ಆರೋಪಿಸಿದ್ದಾರೆ. ಅವರು ಒಂದು ಪುಸ್ತಕದ ಬಿಡುಗಡೆಯ ಸಮಾರಂಭದ ಸಮಯದಲ್ಲಿ ಮಾತನಾಡುತ್ತಿದ್ದರು.
ಖಾನ್ ಮಾತು ಮುಂದುವರಿಸುತ್ತಾ
೧. ಲಾಟರಿ ಮತ್ತು ಸಾರಾಯಿ ಇದು ಈ ದಕ್ಷಿಣ ಭಾರತದ ರಾಜ್ಯಗಳ ಆದಾಯದ ಎರಡು ಮುಖ್ಯ ಮಾಧ್ಯಮಗಳಾಗಿವೆ. ಶೇಕಡಾ ೧೦೦ ರಷ್ಟು ಸಾಕ್ಷರರಿರುವ ಕೇರಳಕ್ಕೆ ಇದು ಲಜ್ಜಾಸ್ಪದವಾಗಿದೆ.
೨. ಇತರ ರಾಜ್ಯಗಳು ಸಾರಾಯಿ ನಿಷೇಧಕ್ಕೆ ಪ್ರಯತ್ನಿಸುತ್ತಿರುವಾಗ ಕೇರಳ ಸರಕಾರ ಅದಕ್ಕೆ ಪ್ರೋತ್ಸಾಹ ನೀಡುವುದರಲ್ಲಿ ತೊಡಗಿದೆ.
೩. ಕೇವಲ ಬಡವರು ಲಾಟರಿ ಟಿಕೆಟ್‌ಖರೀದಿಸುತ್ತಾರೆ, ಕೇರಳ ಸರಕಾರ ಅವರನ್ನು ಲೂಟಿ ಮಾಡುತ್ತಿದೆ, ಸರಕಾರ ಜನರನ್ನು ಸಾರಾಯಿಗೆ ತುತ್ತಾಗುವಂತೆ ಮಾಡುತ್ತಿದೆ.
Kerala replacing Punjab as drugs capital; Alcohol, lottery main sources of state’s revenue: Guv Khan 🔗 https://t.co/hZbADn83f5 pic.twitter.com/ysM90A94A4
— Economic Times (@EconomicTimes) October 23, 2022
ಸಂಪಾದಕರ ನಿಲುವು
|