‘ಎಲ್ಲಿ ಹಿಂದೂಗಳ ಮತಾಂತರ ಆಗುತ್ತಿದೆ ?’ (ಅಂತೆ)

ಅಸದುದ್ದೀನ್ ಓವೈಸಿ ಇವರಿಂದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇ ಹೊಸಬಾಳೆ ಇವರ ಹೇಳಿಕೆಯ ಬಗ್ಗೆ ಟೀಕೆ

ಭಾಗ್ಯನಗರ (ತೆಲಂಗಾಣ) – ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳುತ್ತದೆ, ಭಾರತದ ಜನಸಂಖ್ಯೆ ಹೆಚ್ಚುತ್ತಿದೆ. ಹಿಂದೂಗಳ ಮತಾಂತರ ಆಗುತ್ತಿದೆ ? ಎಲ್ಲಿ ಮತಾಂತರ ಆಗುತ್ತಿದೆ ?(ಲವ್ ಜಿಹಾದ್ ಮೂಲಕ ಹಿಂದೂ ಹುಡುಗಿಯರನ್ನು ಯಾರು ಮತಾಂತರಗೊಳಿಸುತ್ತಿದ್ದಾರೆ, ಇದು ಓವೈಸಿ ಇವರಿಗೆ ತಿಳಿದಿಲ್ಲವೇ ? – ಸಂಪಾದಕರು) ನಿಮಗೆ ಇಷ್ಟು ಭಯ ಏಕೆ ಆಗುತ್ತಿದೆ ? ಬಾಂಗ್ಲಾದೇಶದವರು ಒಳಗೆ ಬರುತ್ತಿದ್ದಾರೆ ಎಂದರೆ ಗಡಿ ಸುರಕ್ಷಾ ದಳ ಬಿರಿಯಾನಿ ತಿಂದು ಮಲಗಿದ್ದಾರೆಯೇ ? ಗಡಿಯಲ್ಲಿ ಅವರು ಏನು ಮಾಡುತ್ತಿದ್ದಾರೆ ?, ಎಂದು ಎಂ.ಐ.ಎಂ. ನ ಅಧ್ಯಕ್ಷ ಮತ್ತು ಸಂಸದ ಅಸದ್ದುದ್ದೀನ್ ಓವೈಸಿ ಟೀಕಿಸಿದ್ದಾರೆ. ಅವರು ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಇವರ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಹೊಸಬಾಳೆಯವರು ಭಾರತೀಯ ಜನಸಂಖ್ಯೆ ಹೆಚ್ಚಳದ ಹಿಂದೆ ಬಾಂಗ್ಲಾದೇಶದ ನುಸುಳುಕೋರರ ಸಹಭಾಗ ಕೂಡ ಇದೆ ಎಂದು ಹೇಳಿದ್ದರು.

ಓವೈಸಿ ಮಾತು ಮುಂದುವರಿಸಿ, ಬಾಂಗ್ಲಾದೇಶದ ಅರ್ಥ ವ್ಯವಸ್ಥೆ ಭಾರತದಕ್ಕಿಂತಲೂ ಚೆನ್ನಾಗಿ ಇದೆ. ಅಲ್ಲಿಯ ಎಲ್ಲಾ ರಾಷ್ಟ್ರೀಯ ಉತ್ಪನ್ನಗಳು ಚೆನ್ನಾಗಿ ಇವೆ. ಭಾರತಕ್ಕಿಂತಲೂ ಹೆಚ್ಚಿನ ಉದ್ಯೋಗಾವಕಾಶ ಅಲ್ಲಿ ಇದೆ, ಹಾಗಾದರೆ ಬಾಂಗ್ಲಾದೇಶಿಯರು ಅಲ್ಲಿಂದ ಭಾರತಕ್ಕೆ ಏಕೆ ಬರುವರು ? ಎಂಬ ಪ್ರಶ್ನೆ ಕೂಡ ಕೇಳಿದ್ದಾರೆ. (ಬಾಂಗ್ಲಾದೇಶದ ಆರ್ಥಿಕ ಪರಿಸ್ಥಿತಿ ಭಾರತದಕ್ಕಿಂತ ಒಳ್ಳೆಯದಾಗಿದ್ದರೆ, ಇಲ್ಲಿಯ ಓವೈಸಿ ಅವರ ನುಸುಳುಕೊರರು ಬಾಂಗ್ಲಾದೇಶದ ಧರ್ಮಬಾಂಧವ ಬಾಂಗ್ಲಾದೇಶಕ್ಕೆ ಏಕೆ ಮರಳಿ ಹೋಗುತ್ತಿಲ್ಲ ?, ಹೀಗೆ ಯಾರಾದರೂ ಪ್ರಶ್ನೆ ಕೇಳಿದರೆ, ಆಗ ಓವೈಸಿ ಉತ್ತರ ನೀಡುವರೆ ? – ಸಂಪಾದಕರು)