ವಾರಣಾಸಿಯ ಆಸ್ಪತ್ರೆಯಲ್ಲಿ ವೈದ್ಯ ಮತ್ತು ನೌಕರರಿಗೆ ಥಳಿತ ! – ಸಲಕರಣೆ ಧ್ವಂಸ

ವಾರಣಾಸಿ – ಇಲ್ಲಿಯ ಭಿಖಾರೀಪುರದ ‘ಏಪೇಕ್ಸ ಹಾಸ್ಪಿಟಲ್’ನ ತೀವ್ರ ನಿಗಾಘಟಕ ವಿಭಾಗದಲ್ಲಿ ನುಗ್ಗಿ ಒಬ್ಬ ರೋಗಿಯ ಸುಮಾರು ೧೭ ರಿಂದ ೧೮ ಸಂಬಂಧಿಕರು ವೈದ್ಯರನ್ನು ಮತ್ತು ನೌಕರರನ್ನು ಥಳಿಸಿದರು. ಅಲ್ಲದೇ ಈ ದಾಳಿಕೋರರು ಅಲ್ಲಿಯ ಸಲಕರಣೆಗಳನ್ನು ಧ್ವಂಸಗೊಳಿಸಿದರು. ಆಸ್ಪತ್ರೆಯ ವೈದ್ಯಕೀಯ ಸೇವೆಯ ನಿರ್ದೇಶಕಿ ಅನುಪಮಾ ಸಿಂಹ ಇವರು ಈ ಪ್ರಕರಣಕ್ಕೆ ಸಂಬಂಧಿಸಿದ ‘ಸಿಸಿಟಿವಿ ಫುಟೇಜ’ಅನ್ನು ಚಿತಾಯಿಪುರ ಪೊಲೀಸ ಠಾಣೆಯ ಅಧಿಕಾರಿಗೆ ಒಪ್ಪಿಸಿದ್ದು, ೧೭ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ ಯೋಗ್ಯ ಕ್ರಮ ಜರುಗಿಸುವ ಆಶ್ವಾಸನೆ ನೀಡಿದ್ದಾರೆ.

೧. ಆಸ್ಪತ್ರೆಯ ನಿರ್ದೇಶಕರು ನೀಡಿದ ಮಾಹಿತಿಯನುಸಾರ ಅಕ್ಟೋಬರ ೭ ರಂದು ಪ್ರತಾಪಪಟ್ಟಿ(ಬಾರಾಗಾವ) ನಿವಾಸಿ ಸೌರಭಚಂದ್ರ ಮಿಶ್ರಾ ಇವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಭರ್ತಿ ಮಾಡಲಾಗಿತ್ತು.

೨. ಅಕ್ಟೋಬರ ೧೦ ರಂದು ರೋಗಿಯನ್ನು ಅವನ ಸಂಬಂಧಿಕರ ಮನೆಗೆ ಕರೆದೊಯ್ಯಲಾಯಿತು. ಅದೇ ದಿನ ಸಾಯಂಕಾಲ ಸಂಬಂಧಿಕರು ಅವನನ್ನು ಪುನಃ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿದೆಯೆಂದು ಹೇಳಲಾಗಿತ್ತು.

೩. ಸಂಬಂಧಿಕರ ಅನುಮತಿಯೊಂದಿಗೆ ರೋಗಿಯನ್ನು ತೀವ್ರನಿಗಾಘಟಕ ವಿಭಾಗದಲ್ಲಿ ಭರ್ತಿ ಮಾಡಿ ಅವರ ಮೇಲೆ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ತಡರಾತ್ರಿ ರೋಗಿಯ ಆರೋಗ್ಯ ಕ್ಷೀಣಿಸಿ ಅವನು ಮರಣ ಹೊಂದಿದನು. ಈ ಸಂದರ್ಭದಲ್ಲಿ ರೋಗಿಯ ೧೬-೧೭ ಸಂಬಂಧಿಕರು ತೀವ್ರ ನಿಗಾ ಘಟಕವನ್ನು ಪ್ರವೇಶಿಸಿ, ವೈದ್ಯರನ್ನು ಮತ್ತು ನೌಕರರನ್ನು ಥಳಿಸಿದರು. ತದನಂತರ ಎಲ್ಲರೂ ಬಲವಂತದಿಂದ ರೋಗಿಯ ಮೃತದೇಹವನ್ನು ವಶಕ್ಕೆ ಪಡೆದುಕೊಂಡರು ಮತ್ತು ಅಲ್ಲಿಂದ ಹೊರಟು ಹೋದರು. ಅಲ್ಲಿಯ ರಕ್ಷಣಾ ದಳ ನೌಕರನಿಗೆ ಜೀವ ಬೆದರಿಕೆಯನ್ನು ನೀಡಲಾಯಿತು.

ಸಂಪಾದಕೀಯ ನಿಲುವು

ಇತ್ತೀಚೆಗೆ ರೋಗಿಗಳ ಸಂಬಂಧಿಕರಿಂದ ವೈದ್ಯರ ಮೇಲೆ ದಾಳಿಗಳಾಗುವ ಪ್ರಮಾಣ ಹೆಚ್ಚಾಗಿದೆ. ಇದನ್ನು ತಡೆಯಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವುದು ಆವಶ್ಯಕ !