ಅಲವರ (ರಾಜಸ್ತಾನ)ದಲ್ಲಿ ಮಗ-ಸೊಸೆಯ ಮೇಲೆ ಕ್ರೈಸ್ತಧರ್ಮವನ್ನು ಸ್ವೀಕರಿಸುವಂತೆ ತಂದೆ-ತಾಯಿಯಿಂದ ಒತ್ತಡ !

ದೇವತೆಗಳ ಮೂರ್ತಿಗಳನ್ನು ಒಡೆದುಹಾಕಿದ್ದಾರೆ, ಪೂಜೆ ಮಾಡಿದರೆ ಹೊಡೆಯುತ್ತಾರೆ !

ಅಲವರ (ರಾಜಸ್ತಾನ) – ಇಲ್ಲಿನ ಓರ್ವ ಹಿಂದೂ ಪತಿ-ಪತ್ನಿಯ ಮೇಲೆ ಪತಿಯ ತಂದೆ-ತಾಯಿಯಿಂದ ಮತಾಂತರ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಸಂತ್ರಸ್ತ ದಂಪತಿಗಳಾದ ಸೋನು ಹಾಗೂ ರಜನಿಯವರಿಗೆ ಇವರಿಂದ ಎಷ್ಟೊಂದು ತೊಂದರೆ ಆಗುತ್ತಿದೆ ಅಂದರೆ ಕೊನೆಗೆ ಅವರು ತಂದೆ-ತಾಯಿಯ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ. ಅವರು ದೂರಿನಲ್ಲಿ ಈ ರೀತಿಯಲ್ಲಿ ಹೇಳಿದ್ದಾರೆ, ‘ನಮ್ಮ ತಂದೆ-ತಾಯಿ ಮನೆಯಲ್ಲಿರುವ ದೇವತೆಗಳ ಮೂರ್ತಿಗಳನ್ನು ಒಡೆಯುತ್ತಿದ್ದಾರೆ, ಹಾಗೆಯೇ ದೇವತೆಗಳ ಚಿತ್ರಗಳನ್ನೂ ಹರಿದುಹಾಕಿದ್ದಾರೆ. ಅವರು ನಮ್ಮ ಮೇಲೆ ಸತತವಾಗಿ ಮತಾಂತರ ಮಾಡುವಂತೆ ಒತ್ತಡ ಹೇರುತ್ತಿರುತ್ತಾರೆ’. ಪೊಲೀಸರು ಈ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಿ ತನಿಖೆಯನ್ನು ಆರಂಭಿಸಿದ್ದಾರೆ.

೧. ಈ ದಂಪತಿಗಳು ಹೇಳುವಂತೆ ‘ನಮ್ಮ ತಂದೆ-ತಾಯಿ ಹಾಗೂ ಕುಟುಂಬದಲ್ಲಿನ ಕೆಲವು ಸದಸ್ಯರು ಕ್ರೈಸ್ತಧರ್ಮವನ್ನು ಸ್ವೀಕರಿಸಿದ್ದಾರೆ. ನಾವು ಹಿಂದೂ ದೇವತೆಗಳ ಪೂಜೆ ಮಾಡಿದರೆ ತಂದೆ-ತಾಯಿಯರು ಅದನ್ನು ವಿರೋಧಿಸುತ್ತಾರೆ. ನಮ್ಮ ತಂದೆ-ತಾಯಿ ನಮಗೆ ಯಾವಾಗಲೂ ಹಿಂದೂ ಧರ್ಮದಲ್ಲಿನ ರೂಢಿ-ಪರಂಪರೆಗಳಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳುತ್ತಿರುತ್ತಾರೆ.

೨. ಅವರು ತಮಗೆ ಜೀವನಪರ್ಯಂತ ಹಿಂದೂ ಧರ್ಮದಲ್ಲಿಯೇ ಇರುವ ಇಚ್ಛೆಯಿರುವುದಾಗಿಯೂ ದೂರಿನಲ್ಲಿ ಹೇಳಿದ್ದಾರೆ.

೩. ದೂರನ್ನು ನೋಂದಾಯಿಸಲು ಸಂತ್ರಸ್ತ ದಂಪತಿಗಳು ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಸಹಾಯ ಪಡೆದಿದ್ದಾರೆ.

೪. ಈ ಪ್ರಕರಣದಲ್ಲಿ ಪೊಲೀಸ ಅಧೀಕ್ಷಕರಾದ ತೇಜಸ್ವಿನಿ ಗೌತಮರವರು, ಮೊದಲನೇ ನೋಟದಲ್ಲಿ ಈ ಪ್ರಕರಣವು ಕೌಟುಂಬಿಕ ಮಟ್ಟದಲ್ಲಿರುವುದು ಗಮನಕ್ಕೆ ಬರುತ್ತದೆ, ತನಿಖೆ ನಡೆಸಿ ಯೋಗ್ಯ ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಘಟನೆಗಳಿಂದ ಕ್ರೈಸ್ತರ ಚರ್ಚಗಳಿಂದ ಮತಾಂತರವಾದವರಿಗೆ ತಮ್ಮ ಕುಟುಂಬದವರ ಮೇಲೆ ಈ ರೀತಿಯಲ್ಲಿ ಒತ್ತಡ ಹೇರಲು ಹಾಗೂ ಅವರನ್ನೂ ಮತಾಂತರ ಮಾಡಿಸಲು ಯಾವ ರೀತಿಯಲ್ಲಿ ಪುಸಲಾಯಿಸಲಾಗುತ್ತಿದೆ ?
ಹಿಂದೂಗಳ ಮತಾಂತರದ ವಿರುದ್ಧ ರಾಜಸ್ತಾನದಲ್ಲಿರುವ ಕ್ರೈಸ್ತಪ್ರೇಮಿ ಕಾಂಗ್ರೆಸ್‌ ಸರಕಾರವು ಏನೂ ಮಾಡುವುದಿಲ್ಲ, ಎಂಬುದು ಸತ್ಯವಾಗಿದೆ. ಆದುದರಿಂದ ಈಗ ಕೇಂದ್ರ ಸರಕಾರವೇ ಮತಾಂತರ ವಿರೋಧಿ ಕಾನೂನನ್ನು ರಾಷ್ಟ್ರವ್ಯಾಪಿ ಜ್ಯಾರಿಗೊಳಿಸುವುದು ಆವಶ್ಯಕವಾಗಿದೆ !