ಕಾಂಗ್ರೆಸ್‌ನ ಹಿರಿಯ ನಾಯಕ ಶಿವರಾಜ ಪಾಟೀಲರ ಖೇದರಕ ಹೇಳಿಕೆ !
ಎಲ್ಲ ಕಡೆಗಳಿಂದ ವಿರೋಧವಾಗಲು ಆರಂಭಿಸಿದಾಗ ಹಾಸ್ಯಾಸ್ಪದ ಸ್ಪಷ್ಟೀಕರಣ !
ನವದೆಹಲಿ – ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರೀಯ ಗೃಹ ಸಚಿವ ಶಿವರಾಜ ಪಾಟೀಲರು ‘ಜಿಹಾದ್ ಕೇವಲ ಇಸ್ಲಾಮ್‌ನಲ್ಲಿಯೆ ಅಲ್ಲ, ಅದು ಭಗವದ್ಗೀತೆ ಮತ್ತು ಕ್ರೈಸ್ತ ಧರ್ಮದಲ್ಲಿಯೂ ಇದೆ’, ಎಂಬ ಖೇದಕರ ಹೇಳಿಕೆಯನ್ನು ನೀಡಿದ್ದಾರೆ. ಗೀತೆಯ ಒಂದು ಭಾಗದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜಿಹಾದ್ ಕಲಿಸಿದ್ದಾನೆ ಎಂದು ಅವರು ಹೇಳಿದರು. ಇದರಿಂದ ಭಾಜಪ ಸಹಿತ ಅನೇಕರಿಂದ ನಿಷೇಧವನ್ನು ನೊಂದಾಯಿಸಲು ಆರಂಭವಾದಾಗ ಪಾಟೀಲರು ಖೇದಕರ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದರು.
೧. ದೆಹಲಿಯಲ್ಲಿ ಅಕ್ಟೋಬರ ೨೦ ರಂದು ಮಾಜಿ ಕೇಂದ್ರ ಸಚಿವ ಮೊಹಸಿನಾ ಕಿಡ್ವಾಯಿ ಇವರ ಆತ್ಮಚರಿತ್ರೆಯ ಪ್ರಕಾಶನದ ಸಂದರ್ಭದಲ್ಲಿ ಶಿವರಾಜ ಪಾಟೀಲರು, “ಇಸ್ಲಾಂ ಧರ್ಮದಲ್ಲಿರುವ ಜಿಹಾದ್‌ನ ಸಂಕಲ್ಪನೆಯ ವಿಷಯದಲ್ಲಿ ಅನೇಕ ಜನರು ಮಾತನಾಡುತ್ತಾರೆ. ಉದ್ದೇಶ ಚೆನ್ನಾಗಿದ್ದರೆ, ಏನಾದರೂ ಒಳ್ಳೆಯದನ್ನು ಮಾಡಲಿಕ್ಕಿದ್ದರೆ ಹಾಗೂ ಅದನ್ನು ಯಾರೂ ಒಪ್ಪದಿದ್ದರೆ, ಅದನ್ನು ಬಲವಂತದಿಂದ ಮಾಡಬೇಕಾಗಬಹುದು, ಎಂಬುದು ಈ ಸಂಕಲ್ಪನೆಯಾಗಿದೆ. (ಹಾಗಾದರೆ ಇಸ್ಲಾಮಿಕ್ ಸ್ಟೇಟ್, ಬೋಕೋ ಹರಾಮ, ತಾಲೀಬಾನ, ಲಷ್ಕರ-ಎ-ತೊಯಬಾ ಇತ್ಯಾದಿ ಜಿಹಾದಿ ಉಗ್ರವಾದಿ ಸಂಘಟನೆಗಳಿಗೆ ಶಿವರಾಜ ಪಾಟೀಲ ಮತ್ತು ಕಾಂಗ್ರೆಸ್ಸಿನ ಬೆಂಬಲವಿದೆ, ಎಂಬುದು ಸಾಬೀತಾಗುವುದಿಲ್ಲವೆ ? – ಸಂಪಾದಕರು) ಕೇವಲ ಕುರಾನ ಮಾತ್ರವಲ್ಲ, ಮಹಾಭಾರತದ ಗೀತೆಯಲ್ಲಿ ಮತ್ತು ಕ್ರೈಸ್ತ ಧರ್ಮದಲ್ಲಿಯೂ ಇದನ್ನೆ ಹೇಳಲಾಗಿದೆ.”
೨. ಈ ಕಾರ್ಯಕ್ರಮದ ಸಂದರ್ಭದಲ್ಲಿ ಕಾಂಗ್ರೆಸ್‌ನ ಮುಖಂಡ ಶಶೀ ಥರೂರ, ಸುಶೀಲ ಕುಮಾರ ಶಿಂದೆ ಮತ್ತು ಮಣಿಶಂಕರ ಅಯ್ಯರ ಇವರು ಕೂಡ ಉಪಸ್ಥಿತರಿದ್ದರು.
೩. ಪಾಟೀಲರ ಹೇಳಿಕೆಗೆ ಎಲ್ಲ ಕಡೆಗಳಿಂದ ಟೀಕೆಯಾಗಲು ಆರಂಭವಾದಾಗ ಅವರು ಸ್ಪಷ್ಟೀಕರಣ ನೀಡುತ್ತಾ, ಶ್ರೀಕೃಷ್ಣನು ಅರ್ಜುನನಿಗೆ ನೀಡಿರುವ ಉಪದೇಶಗಳಿಗೆ ನೀವು ಜಿಹಾದ್ ಎಂದು ಹೇಳುವಿರಾ ? ಇಲ್ಲವಲ್ಲ ? ಅದನ್ನೇ ನಾನು ಹೇಳುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಹಿಂದೂ ದ್ವೇಷದ ಎಲ್ಲ ಮೇರೆಯನ್ನು ಮೀರಿದೆ ! -ಭಾಜಪ
ಪಾಟೀಲರ ಹೇಳಿಕೆಯಿಂದ ಭಾಜಪವು ಕಾಂಗ್ರೆಸ್ಸನ್ನು ಗುರಿಮಾಡಿದೆ. ‘ಕಾಂಗ್ರೆಸ್ ಹಿಂದೂದ್ವೇಷದ ಎಲ್ಲ ಮೇರೆಯನ್ನು ಮೀರಿದೆ. ಕಾಂಗ್ರೆಸ್ ತನ್ನನ್ನು ‘ಬ್ರಾಹ್ಮಣ ಹಿಂದೂಗಳ’ ಪಕ್ಷ ಎಂದು ದಾವೆ ಹೂಡುತ್ತಿದೆ; ಆದರೆ ರಾಮಮಂದಿರವನ್ನು ವಿರೋಧಿಸುವುದು, ರಾಮನ ಅಸ್ತಿತ್ವದ ಬಗ್ಗೆ ಪ್ರತಿಜ್ಞಾ ಪತ್ರವನ್ನು ದಾಖಲಿಸಿ ಪ್ರಶ್ನೆ ನಿರ್ಮಾಣ ಮಾಡುವುದು, ‘ಹಿಂದೂ ಭಯೋತ್ಪಾದನೆ’ ಎಂದು ಸಂಬೋಧಿಸುವುದು, ಹಿಂದುತ್ವವನ್ನು ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ತುಲನೆ ಮಾಡುವುದು, ಇದರಿಂದ ಕಾಂಗ್ರೆಸ್ಸಿನ ಹಿಂದೂದ್ವೇಷವು ಎದ್ದು ಕಾಣಿಸುತ್ತದೆ. ಇಂತಹ ಹೇಳಿಕೆಗಳನ್ನು ಗುಜರಾತದ ಚುನಾವಣೆಯನ್ನು ನೋಡಿ ನೀಡಲಾಗುತ್ತಿದೆ. ಗುಜರಾತದ ಜನರು ಅವರಿಗೆ ಚೆನ್ನಾಗಿ ಪಾಠ ಕಲಿಸುವರು.” ಎಂದು ಹೇಳಿದೆ.
ಸಂಪಾದಕೀಯ ನಿಲುವು
|