ಬಿಹಾರದಲ್ಲಿ ಏಳನೇ ತರಗತಿಯ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖ

ಕಿಶನಗಂಜ (ಬಿಹಾರ) – ಜಿಲ್ಲೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಪ್ರಕರಣ ಬೆಳಕಿಗೆ ಬಂದಿದೆ. ಏಳನೇ ತರಗತಿಯ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖಿಸಲಾಗಿದೆ. ಈ ಪ್ರಕರಣದಿಂದ ವಿವಾದ ಹೆಚ್ಚಾಗಿದೆ. ಇಲ್ಲಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ಎಸ.ಕೆ. ದಾಸ್ ಅವರು, ಇದು ಮನುಷ್ಯನ ತಪ್ಪಿನಿಂದಾಗಿ ಆಗಿದೆ ಎಂದು ಹೇಳಿದರು.
ಈ ತಪ್ಪನ್ನು ಬಿಹಾರ ಶಿಕ್ಷಣ ಮಂಡಳಿ ಗಮನಕ್ಕೆ ತಂದಿದೆ ಎಂದು ಅವರು ಹೇಳಿದರು. ‘ಕಾಶ್ಮೀರದ ಜನರನ್ನು ಏನೆಂದು ಕರೆಯುತ್ತಾರೆ ?’, ಎಂಬ ಪ್ರಶ್ನೆಯನ್ನು ಕೇಳುವುದಿತ್ತು; ಆದರೆ ತಪ್ಪಿ ಕಾಶ್ಮೀರ ದೇಶದ ಜನರನ್ನು ಏನೆಂದು ಕರೆಯುತ್ತಾರೆ ಎಂದು ಕೇಳಲಾಗಿದೆ. ಇದೊಂದು ಮನುಷ್ಯನ ತಪ್ಪಿನಿಂದಾಗಿ ಆಗಿದೆ ಎಂದರು. (ಮನುಷ್ಯನ ತಪ್ಪಿನಿಂದಾಗಿ ಆಗಿದೆ ಎಂದು ಹೇಳಿ ಇಂತಹ ಘಟನೆಗಳೆಡೆ ದುರ್ಲಕ್ಷ ಮಾಡದೇ ಈ ಪ್ರಶ್ನಪತ್ರಿಕೆಯನ್ನು ತಯಾರಿಸಿದ ಶಿಕ್ಷಕರ ಮಾನಸಿಕತೆಯ ತಪಾಸಣೆಯಾಗಬೇಕು ಎಂಬುದು ರಾಷ್ಟ್ರಪ್ರೇಮಿ ನಾಗರಿಕರ ಅಪೇಕ್ಷೆ ! – ಸಂಪಾದಕರು)

೧. ಬಿಹಾರ ಶಿಕ್ಷಣ ಪ್ರಕಲ್ಪ ಪರಿಷತ್ತು ನಡೆಸಿದ ಏಳನೇ ತರಗತಿಯ ಮಧ್ಯಂತರ ಪರೀಕ್ಷೆಯಲ್ಲಿ, ಈ ಕೆಳಗಿನ ದೇಶಗಳ ಜನರನ್ನು ಏನೆಂದು ಕರೆಯುತ್ತಾರೆ ಎಂದು ವಿವಾದಾತ್ಮಕ ಪ್ರಶ್ನೆಯನ್ನು ಕೇಳಲಾಗಿತ್ತು. ಕೆಳಗೆ ನೀಡಲಾದ ಆಯ್ಕೆಗಳಲ್ಲಿ ಚೀನಾ, ನೇಪಾಳ, ಇಂಗ್ಲೆಂಡ್, ಭಾರತ ಮತ್ತು ಕಾಶ್ಮೀರ ಸೇರಿದ್ದವು. (ಇಂತಹ ಪ್ರಶ್ನಪತ್ರಿಕೆಗಳನ್ನು ತಯಾರಿಸುವ ಶಿಕ್ಷಕರು ತರಗತಿಗಳಲ್ಲಿ ಮಕ್ಕಳಿಗೆ ಏನು ಕಲಿಸುತ್ತಿರುವರು, ಎಂಬುದರ ಬಗ್ಗೆ ಯೋಚಿಸದಿರುವುದೇ ಉತ್ತಮ ! – ಸಂಪಾದಕರು)

೨. ಕಿಶನಗಂಜನಲ್ಲಿ ಏಳನೇ ತರಗತಿಯ ಪ್ರಶ್ನೆಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖಿಸಿದ್ದಕ್ಕಾಗಿ ಭಾಜಪ, ರಾಜ್ಯ ಸರಕಾರವನ್ನು ಟೀಕಿಸಿದೆ. ‘ಬಿಹಾರ ಸರಕಾರ ಮತ್ತು ಬಿಹಾರ ಸರಕಾರದ ಅಧಿಕಾರಿಗಳು ಕಾಶ್ಮೀರವನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ, ಎಂಬುದು ಈ ಪ್ರಶ್ನೆಯಿಂದ ಸಾಬೀತಾಗುತ್ತದೆ’ ಎಂದು ಭಾಜಪದ ಪ್ರದೇಸಾಧ್ಯಕ್ಷ ಡಾ. ಸಂಜಯ ಜಯಸ್ವಾಲ ಹೇಳಿದರು.