ಶೋಪಿಯಾ (ಜಮ್ಮೂ-ಕಾಶ್ಮೀರ)ದಲ್ಲಿ ಭಯೋತ್ಪಾದಕರಿಂದ ಗ್ರನೇಡ ಎಸೆದು ೨ ಹಿಂದೂ ಕಾರ್ಮಿಕರ ಹತ್ಯೆ

ಶೋಪಿಯಾ (ಜಮ್ಮೂ-ಕಾಶ್ಮೀರ) – ಇಲ್ಲಿಯ ಹರಮನ ಪರಿಸರದಲ್ಲಿ ಜಿಹಾದಿ ಭಯೋತ್ಪಾದಕರು ಎಸೆದ ಗ್ರೆನೆಡನ ಸ್ಫೋಟದಿಂದ ೨ ಹೊರರಾಜ್ಯದ ಹಿಂದೂ ಕಾರ್ಮಿಕರು ಸಾವನ್ನಪ್ಪಿದ್ದರೇ, ಇನ್ನುಳಿದ ೩ ಗಾಯಗೊಂಡಿದ್ದಾರೆ. ಮನೀಷ ಕುಮಾರ ಮತ್ತು ರಾಮ ಸಾಗರ ಎಂದು ಈ ಇಬ್ಬರು ಕಾರ್ಮಿಕರ ಹೆಸರಾಗಿದೆ. ಇವರಿಬ್ಬರೂ ಉತ್ತರಪ್ರದೇಶದ ಕನೌಜ ಜಿಲ್ಲೆಯರಾಗಿದ್ದಾರೆ. ಈ ದಾಳಿಯ ಹೊಣೆಯನ್ನು ‘ದಿ ರೆಜಿಸ್ಟೆಂಟ ಫ್ರಂಟ’(ಟಿ.ರ್.ಎಫ್.) ಈ ಜಿಹಾದಿ ಭಯೋತ್ಪಾದಕ ಸಂಘಟನೆ ಹೊತ್ತಿದೆ. ದಾಳಿ ಮಾಡಿದ ಇಮ್ರಾನ್ ಬಶೀರ ಗನಿ ಈ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಇಲ್ಲಿಯ ಒಂದು ಶೆಡನಲ್ಲಿ ೫ ಕಾರ್ಮಿಕರು ಮಲಗಿದ್ದಾಗ ಅವರ ಮೇಲೆ ಗ್ರೆನೆಡ್ ಎಸೆಯಲಾಯಿತು.

ಭಯೋತ್ಪಾದಕರು ಶೋಪಿಯಾದಲ್ಲಿಯೇ ಅಕ್ಟೋಬರ ೧೫ ರಂದು ಪೂರಣ ಕೃಷ್ಣ ಭಟ ಹೆಸರಿನ ಕಾಶ್ಮೀರಿ ಹಿಂದೂವನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ತದನಂತರ ಕೂಡಲೇ ಈ ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಲಾಗಿದೆ.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕತೆ ಪ್ರಾರಂಭವಾಗಿ ೩೩ ವರ್ಷಗಳು ಕಳೆದರೂ ಅಲ್ಲಿ ಹಿಂದೂಗಳು ಇಂದಿಗೂ ಅಸುರಕ್ಷಿತರಾಗಿದ್ದಾರೆ. ಇದು ಇಲ್ಲಿಯವರೆಗೆ ಎಲ್ಲ ಪಕ್ಷಗಳ ಸರಕಾರಕ್ಕೆ ನಾಚಿಕೆಗೇಡು ! ಈ ಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !

ಕಾಶ್ಮೀರದಲ್ಲಿ ಪ್ರತಿದಿನ ೧-೨ ಜಿಹಾದಿ ಭಯೋತ್ಪಾದಕರನ್ನು ಹತ್ಯೆ ಮಾಡುತ್ತಿದ್ದರೂ, ಅಲ್ಲಿಯ ಜಿಹಾದಿ ಮಾನಸಿಕತೆ ನಷ್ಟಗೊಳ್ಳದೇ ಇದ್ದರಿಂದ ಮತ್ತು ಇಂತಹ ಮಾನಸಿಕತೆಯ ಜನರನ್ನು ಪಾಕಿಸ್ತಾನ ಪೋಷಣೆ ಮಾಡುತ್ತಿರುವುದರಿಂದ ಈ ಭಯೋತ್ಪಾದಕತೆಯನ್ನು ನಷ್ಟಗೊಳಿಸಲು ಪಾಕಿಸ್ತಾನಕ್ಕೆ ನಷ್ಟಗೊಳಿಸುವುದು ಅನಿವಾರ್ಯವಾಗಿದೆ, ಎನ್ನುವುದು ಸರಕಾರದ ಆಡಳಿತದ ಗಮನಕ್ಕೆ ಬರುವುದೇ ಸುದಿನ !