ರೈಲಿನ ಬೋಗಿಯಲ್ಲಿ ಸೂಚನಾ ಫಲಕಗಳ ದುರವಸ್ಥೆ ಪ್ರಯಾಣಿಕರ ಪರದಾಟ

ಮಂಗಳೂರು – ಭಾರತದಲ್ಲಿ ಹೆಚ್ಚಿನ ಪ್ರವಾಸಿಗರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ದೂರದ ಪ್ರಯಾಣಕ್ಕಾಗಿ ಕೆಳ ಮತ್ತು ಮಧ್ಯಮ ವರ್ಗದವರು ರೈಲನ್ನೇ ಅವಲಂಬಿಸಿದ್ದಾರೆ. ಅದಕ್ಕಾಗಿ ಕೇಂದ್ರವು ಹಲವಾರು ಯೋಜನೆಗಳನ್ನೂ ಹಾಗೂ ಬೇರೆ ಬೇರೆ ಮಾರ್ಗಗಳಿಗೆ ಹೊಸ ರೈಲುಗಳನ್ನು ಬಿಟ್ಟಿದೆ. ರೈಲಿನ ಪ್ರತಿಯೊಂದು ಬೋಗಿಯಲ್ಲಿ ಪ್ರಯಾಣಿಕರಿಗಾಗಿ ಪ್ರಯಾಣದಲ್ಲಿ ಯಾವುದೇ ಅಡಚಣೆ ಅಥವಾ ಇನ್ನಾವುದೇ ಕೊರತೆ ಬಾರದೇ ಇರಲಿ ಎಂದು ಕೇಂದ್ರವು ಸೂಚನಾ ಫಲಕಗಳನ್ನು ಅಳವಡಿಸಿದೆ. ಈಗ ಜನರಿಗೆ ಅನುಕೂಲವಾಗಲೆಂದು ಹಾಕಿರುವ ಇವೇ ಫಲಕಗಳು ಅನುಕೂಲಕ್ಕಿಂತ ಅನನುಕೂಲವೇ ಆಗುತ್ತಿವೆ ಎಂದು ಹೇಳಬಹುದು. ಏಕೆಂದರೆ ಬೋಗಿಗಳಲ್ಲಿ ಅಳವಡಿಸಲಾಗಿರುವ ಕೆಲ ಸೂಚನಾ ಫಲಕಗಳಲ್ಲಿನ ಸೂಚನೆಗಳು ಅಳಿಸಿ ಹೋಗಿರುವ ಸ್ಥಿತಿಯಲ್ಲಿ ಇದ್ದರೇ ಕೆಲವು ಸೂಚನೆಗಳು ಸ್ಥಳಿಯ ಭಾಷೆಯಲ್ಲಿ ಇಲ್ಲದ್ದರಿಂದ ಜನರಿಗೆ ಅವುಗಳನ್ನು ಅರ್ಥ ಮಾಡಿಕೊಳ್ಳಲು ಬೇರೆಯವರನ್ನು ಅವಲಂಬಿಸಿಬೇಕಾಗಿದೆ.
ಮಡಗಾವ್ ದಿಂದ ಮಂಗಳೂರು ಮೂಲಕವಾಗಿ ಕೊಯಂಬತ್ತೂರಿಗೆ ಹೋಗುವ ಪ್ಯಾಸೇಂಜರ್ ರೈಲು (06601) ಮಡಗಾವ್ ದಿಂದ 1.30 ಕ್ಕೆ ಹೊರಡುತ್ತದೆ. ಇದರ d1 ಈ ರಿಸರ್ವೇಷನ್ ಡಬ್ಬಿಯಲ್ಲಿ Mangaluru-Pallakad ಡ್ ವತಿಯಿಂದ ಹಾಕಿದ ಫಲಕದಲ್ಲಿ ಸೂಚನೆಯನ್ನು ಆಂಗ್ಲ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಹಾಕಲಾಗಿದೆ. ಆದರೆ ಸುಮಾರು 7-8 ಗಂಟೆಗಳ ಕಾಲ ಕರ್ನಾಟಕದಿಂದ ಸಾಗುವ ಈ ರೈಲಿನಲ್ಲಿ ಕನ್ನಡ ಭಾಷೆಯ ಫಲಕವೇ ಇಲ್ಲ. ಇದರಿಂದಾಗಿ ಸರ್ವಸಾಮಾನ್ಯರಿಗೆ ಸೂಚನೆಗಳು ಅರ್ಥವಾಗದ ಸ್ಥಿತಿಯಾಗಿದೆ. ಅದೇ ರೀತಿ ಇದರಲ್ಲಿ ಫಲಕಗಳು ಅಳಿಸದ್ದಿರಿಂದ ಓದಲು ಸಹ ತಿಳಿಯದಂತಾಗಿದೆ.

ಕೇಂದ್ರವು ರೈಲಿನ ಬೋಗಿಯಲ್ಲಿ ಅಳವಡಿಸಿರುವ ಫಲಕಗಳನ್ನು ಪರಿಶೀಲನೆ ಮಾಡಿ ಅದನ್ನು ಹೊಸದಾಗಿ ಅಳವಡಿಸುವಂತೆ ಪ್ರಯತ್ನಿಸಬೇಕು ಇದರ ಜೊತೆಗೆ ಸ್ಥಳಿಯ ಭಾಷೆಯನ್ನೂ ಗಣನೆಗೆ ತೆಗೆದುಕೊಂಡು ಅದರಲ್ಲಿ ಸುಧಾರಣೆ ಮಾಡಬೇಕು ಎಂದು ಪ್ರಯಾಣಿಕರ ಅಭಿಪ್ರಾಯವಾಗಿದೆ.

ಸಂಪಾದಕಿಯ ನಿಲುವು

ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷಗಳು ಕಳೆದರೂ ಈ ರೀತಿಯ ವ್ಯವಸ್ಥೆಯನ್ನು ಕಲ್ಪಿಸುವುದರಲ್ಲಿ ವಿಫಲವಾಗಿರುವ ಆಡಳಿತ.