ಮೌಲವಿಗೆ ಊರು ಬಿಟ್ಟು ಹೋಗುವಂತೆ ವಿಶ್ವ ಹಿಂದೂ ಪರಿಷತ್ತಿನ ಎಚ್ಚರಿಕೆ

ಗುರುಗ್ರಾಮದಲ್ಲಿನ ಭೋರಾ ಕಲಾನದ ಮಸೀದಿಯ ಕಟ್ಟಡ ಕಾಮಗಾರಿಯ ಹೆಸರಿನಲ್ಲಿ ‘ಲ್ಯಾಂಡ್ ಜಿಹಾದ್’ನ ಘಟನೆ !

ಮೌಲವಿ ಎಂದರೆ ‘ಇಸ್ಲಾಂನ ಧಾರ್ಮಿಕ ನಾಯಕ’

ವಿಶ್ವ ಹಿಂದೂ ಪರಿಷತ್ತಿನ ಮುಖ್ಯ ಕಾರ್ಯದರ್ಶಿ ಸುರೇಂದ್ರ ಜೈನ್

ಗುರುಗ್ರಾಮ (ಹರಿಯಾಣ) – ವಿಶ್ವ ಹಿಂದೂ ಪರಿಷತ್ತಿನ ಮುಖ್ಯ ಕಾರ್ಯದರ್ಶಿ ಸುರೇಂದ್ರ ಜೈನ್ ಇವರು ಅಕ್ಟೋಬರ್ ೧೬ ರಂದು ಹರಿಯಾಣದಲ್ಲಿನ ಮಾನೇಸರ ಇಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮೌಲ್ಯಗಳಿಗೆ ಊರು ಬಿಟ್ಟು ಹೋಗಲು ಎಚ್ಚರಿಕೆ ನೀಡಿದ್ದಾರೆ. ಗುರುಗ್ರಾಮದಲ್ಲಿನ ಭೋರಾ ಕಲಾನನಲ್ಲಿ ಮಸೀದಿಯ ಕಟ್ಟಡ ಕಾಮಗಾರಿ ಹೆಸರಿನಲ್ಲಿ ‘ಲ್ಯಾಂಡ್ ಜಿಹಾದ್’ನ ಘಟನೆ ಬೆಳಕಿಗೆ ಬಂದ ನಂತರ ಈ ಎಚ್ಚರಿಕೆ ನೀಡಲಾಗಿದೆ.

೧. ಪ್ರಸಾರ ಮಾಧ್ಯಮಗಳು ನೀಡಿದ ಮಾಹಿತಿಯ ಪ್ರಕಾರ ಮಾನೆಸರನಲ್ಲಿ ವಿಶ್ವ ಹಿಂದೂ ಪರಿಷತ್ತಿನ ‘ತ್ರಿಶೂಲ ದೀಕ್ಷೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು.

೨. ಈ ಕಾರ್ಯಕ್ರಮಕ್ಕೆ ಉದ್ದೇಶಿಸಿ ಮಾತನಾಡುವಾಗ ಸುರೇಂದ್ರ ಜೈನ್ ಇವರು, ಗುರುಗ್ರಾಮದಲ್ಲಿನ ಭೋರಾ ಕಲಾನ ಗ್ರಾಮದಲ್ಲಿ ಮುಸಲ್ಮಾನರು ಅಕ್ರಮವಾಗಿ ಜಮೀನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ೧೨-೧೩ ವರ್ಷಗಳ ಹಿಂದೆ ಭೋರಾ ಕಲನನಲ್ಲಿ ೩ ಮುಸಲ್ಮಾನ ಕುಟುಂಬಗಳು ಬಂದಿದ್ದವು. ಈ ಗ್ರಾಮದಲ್ಲಿ ಕುರಿ ಕಾಯುವ ಜಮೀನಿನಲ್ಲಿ ನಮಾಜ ಪಠೀಸಲು ಅವರು ಅನುಮತಿ ಕೋರಿದ್ದರು.

೩. ಆ ಸಮಯದಲ್ಲಿ ಹೊರಗೆನಿಂದ ಯಾವುದೇ ಮೌಲವಿ ಬರಬಾರದೆಂದು ನಿಶ್ಚಯಿಸಲಾಗಿತ್ತು; ಆದರೆ ಕ್ರಮೇಣವಾಗಿ ಹೊರಗಿನಿಂದ ಮೌಲವಿ ಬರುತ್ತಿದ್ದರು. ಅವರಿಗೆ ಸಂಪೂರ್ಣ ದೇಶವನ್ನೇ ಮತಾಂತರಗೊಳಿಸುವುದಿದೆ.

೪. ಗುರುಗ್ರಾಮದ ಭೋರಾ ಕಲಾನ ಗ್ರಾಮದಲ್ಲಿ ಅಕ್ಟೋಬರ್ ೧೨ ರಂದು ಕೆಲವು ಜನರು ಮಸೀದಿಗೆ ನುಗ್ಗಿ ನಮಾಜ ಮಾಡುವವರಿಗೆ ಹಿಗ್ಗಾಮುಗ್ಗ ಥಳಿಸಿದ್ದರು ಮತ್ತು ಊರು ಬಿಟ್ಟು ಹೋಗಲು ಎಚ್ಚರಿಸಿದ್ದರು.