‘ಎಲ್ಲಿಯವರೆಗೆ ಜಮ್ಮು ಕಾಶ್ಮೀರಕ್ಕೆ ನ್ಯಾಯ ದೊರಕುವುದಿಲ್ಲ, ಅಲ್ಲಿಯವರೆಗೆ ಕಾಶ್ಮೀರಿ ಹಿಂದೂಗಳ ಹತ್ಯೆ ನಡೆಯುತ್ತಲೇ ಇರುತ್ತದೆ !’ (ಅಂತೆ) – ಫಾರೂಖ್ ಅಬ್ದುಲ್ಲಾ

ನ್ಯಾಷನಲ್ ಕಾನ್ಫರೆನ್ಸ್‌ನ ಮುಖಂಡ ಡಾ. ಫಾರೂಕ್ ಅಬ್ದುಲ್ಲ

ಜಮ್ಮು – ಎಲ್ಲಿಯವರೆಗೆ ಜಮ್ಮು ಕಾಶ್ಮೀರಕ್ಕೆ ನ್ಯಾಯ ದೊರೆಯುವುದಿಲ್ಲವೋ; ಅಲ್ಲಿಯವರೆಗೆ ಕಾಶ್ಮೀರಿ ಹಿಂದೂಗಳನ್ನು ಗುರಿ ಮಾಡಲಾಗುವುದು. ಅದು ನಿಲ್ಲುವುದಿಲ್ಲ. ಹಿಂದೆ ಇದೇ ಜನರು, ಇದು ಕಲಂ ೩೭೦ ಇರುವುದರಿಂದ ಈ ರೀತಿ ನಡೆಯುತ್ತದೆ ಎಂದು ಹೇಳುತ್ತಿದ್ದರು; ಆದರೆ ಈಗ ಕಲಂ ೩೭೦ ರದ್ದು ಪಡಿಸಿ ೩ ವರ್ಷ ಕಳೆದಿದೆ, ಆದರೂ ಕೂಡ ಉದ್ದೇಶಿತ ಹಿಂಸಾಚಾರ ಏಕೆ ನಿಂತಿಲ್ಲ ?, ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಮುಖಂಡ ಡಾ. ಫಾರೂಕ್ ಅಬ್ದುಲ್ಲ ಇವರು ಪ್ರಶ್ನೆ ಕೇಳಿದ್ದಾರೆ. ಅವರು ಇಲ್ಲಿಯ ನ್ಯಾಷನಲ್ ಕಾನ್ಫರೆನ್ಸಿನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿನ ಹಿಂದೂಗಳ ನರಸಂಹಾರ ಮಾಡುವುದು, ಇದು ಜಿಹಾದಿ ಭಯೋತ್ಪಾದಕರ ಮತ್ತು ಕಾಶ್ಮೀರದಲ್ಲಿನ ಜಿಹಾದಿಗಳ ಗುರಿಯಾಗಿದೆ. ಇದರಿಂದ ಅವರು ಹಿಂದೂಗಳಿಗೆ ಕಳೆದ ೩೦ ವರ್ಷದಿಂದ ಗುರಿ ಮಾಡುತ್ತಿದ್ದಾರೆ. ಆದರೂ ಕೂಡ ಅದರ ಮೇಲಿನ ಗಮನ ಬೇರೆ ಕಡೆ ಹರಿಸಿ ಬೇರೆ ಬೇರೆ ಸೂತ್ರಗಳನ್ನು ಉಪಸ್ಥಿತಗೊಳಿಸುವ ಪ್ರಯತ್ನ ಅಬ್ದುಲ್ಲ ಅಂತಹವರು ಕಾಶ್ಮೀರಿ ಮುಸಲ್ಮಾನ ಮುಖಂಡರು ಮಾಡುತ್ತಿದ್ದಾರೆ ಇದೆ ಇದರಿಂದ ಗಮನಕ್ಕೆ ಬರುತ್ತದೆ !