ನೋಯ್ಡಾ (ಉತ್ತರ ಪ್ರದೇಶ) ಇಲ್ಲಿಯ ಬೀದಿ ನಾಯಿಯ ದಾಳಿಯಿಂದ ಏಳು ತಿಂಗಳ ಮಗುವಿನ ಸಾವು

ನೋಯ್ಡಾ (ಉತ್ತರಪ್ರದೇಶ) – ಇಲ್ಲಿಯ ಲೋಟಸ್ ಬುಲೆವಾರ್ಡ್ ಸೊಸೈಟಿಯಲ್ಲಿನ ನಾಯಿಯಿಂದ ಏಳು ತಿಂಗಳ ಅರವಿಂದ ಎಂಬ ಮಗುವಿನ ಮೇಲೆ ದಾಳಿ ನಡೆಸಿ ಹೊಟ್ಟೆ ಹರಿದಿದೆ. ಇದರಿಂದ ಅದರ ಕರುಳು ಹೊರಗೆ ಬಿದ್ದಿವೆ. ಸೊಸೈಟಿಯ ನಿವಾಸಿಗಳಿಂದ ತಕ್ಷಣ ಮಗುವನ್ನು ಆಸ್ಪತ್ರೆಗೆ ಸೇರಿಸಲಾಯಿತು; ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಈ ಘಟನೆಯ ನಂತರ ಸೊಸೈಟಿಯಲ್ಲಿನ ನಿವಾಸಿಗಳು ಹೊರಬಂದು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ಪ್ರದೇಶದಲ್ಲಿ ಯಾವಾಗಲೂ ನಾಯಿ ಕಚ್ಚಿರುವ ಘಟನೆ ಘಟಿಸುತ್ತಿರುತ್ತವೆ. ಆದ್ದರಿಂದ ಮಕ್ಕಳ ಸಹಿತ ನಾಗರೀಕರು ಕೂಡ ಕೆಳಗೆ ಹೋಗಲು ಹೆದರುತ್ತಾರೆ.

೧. ಇಲ್ಲಿಯ ಸೆಕ್ಟರ್ – ೧೧೦ ರಲ್ಲಿ ರಾಜೇಶ ಮತ್ತು ಸಪನಾ ದಂಪತಿಗಳು ವಾಸವಾಗಿದ್ದಾರೆ. ಸಪನಾ ಅವರ ಮಗುವಿನ ಜೊತೆ ಲೋಟಸ್ ಬುಲೆವಾರ್ಡ್ ಸೊಸೈಟಿಯ ಉದ್ಯಾನಕ್ಕೆ ಬಂದಿದ್ದರು. ಆ ಸಮಯದಲ್ಲಿ ಟವರ್ ೩೦ ಹತ್ತಿರ ನಾಯಿಗಳು ಮಗುವನ್ನು ಸುತ್ತುವರೆದವು. ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿದವು, ಆಗ ಸಪನಾ ಅಲ್ಲೇ ಇದ್ದರು. ಅವರು ಮಗುವನ್ನು ನಾಯಿಂದ ಕಾಪಾಡುವಷ್ಟು ಹೊತ್ತಿಗೆ ಅದಕ್ಕೆ ಅವುಗಳು ಅನೇಕ ಜಾಗದಲ್ಲಿ ಕಚ್ಚಿದ್ದವು. ಅದರ ನಂತರ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

೨. ಸೊಸೈಟಿಯ ನಿವಾಸಿಗಳು, ಕೆಲವು ದಿನಗಳ ಹಿಂದೆ ನಗರ ಪಾಲಿಕೆಯ ಶ್ವಾನಗಳಗೆ ಚುಚ್ಚುಮದ್ದು ನೀಡಿ ಮತ್ತೆ ತಂದು ಅಲ್ಲೇ ಬಿಡಲಾಯಿತು. ಇದರಿಂದ ಸಮಸ್ಯೆ ಬಗೆಹರಿದಿಲ್ಲ. ತದ್ವಿರುದ್ಧ ಈ ಮಗುವಿನ ಬಲಿಯಾಯಿತು. ನಾಯಿಯ ಭಯದಿಂದ ನಾವು ನಮ್ಮ ಮಕ್ಕಳನ್ನು ಮನೆಯ ಹೊರಗೆ ಆಡಲು ಬಿಡುವುದಿಲ್ಲ. ಕಳೆದ ೩ ವರ್ಷಗಳಿಂದ ನಾವು ಈ ನಾಯಿಗಳ ತೊಂದರೆ ಅನುಭವಿಸುತ್ತಿದ್ದೇವೆ. ಪ್ರತಿ ೨ ತಿಂಗಳು ಈ ನಾಯಿಗಳು ಯಾರಿಗಾದರೂ ಕಚ್ಚುತ್ತದೆ. ಅವುಗಳು ನರಭಕ್ಷಕ ಆಗಿದೆ. ನೋಯ್ಡಾದ ಪ್ರಾಧಿಕಾರಣದಿಂದ ನಾಯಿಗಳನ್ನು ಹಿಡಿದುಕೊಂಡು ಹೋಗಲು ಬರುವುದಿಲ್ಲ. ಕೆಲವು ದಿನಗಳ ಹಿಂದೆಯೇ ನಾಯಿಗಳ ಸಂತಾನ ಹರಣ ಚಿಕಿತ್ಸೆ ನೀಡಲಾಯಿತು; ಆದರೆ ಅವುಗಳನ್ನು ಮತ್ತೆ ಇಲ್ಲೇ ತಂದು ಬಿಡಲಾಯಿತು ಎಂದು ಹೇಳಿದರು.

ಸಂಪಾದಕೀಯ ನಿಲುವು

ಬೀದಿ ನಾಯಿಯಿಂದ ಅಷ್ಟೇ ಅಲ್ಲದೆ ಸಾಕಿರುವ ನಾಯಿಗಳಿಂದ ಕೂಡ ಜನರು ತೊಂದರೆ ಅನುಭವಿಸುತ್ತಾರೆ. ಇದರ ಬಗ್ಗೆ ಇನ್ನೂ ಶಾಶ್ವತ ಉಪಾಯ ಯೋಜನೆ ಮಾಡುವುದಕ್ಕೆ ಸರಕಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !