ಕಾಂಗ್ರೆಸ್ ನಾಯಕ ಆಶಿಕ ಪಟೇಲನಿಂದ ಯುವತಿಯ ಪ್ರಿಯಕರನ ಹತ್ಯೆ !

  • ಧಾರ (ಮಧ್ಯಪ್ರದೇಶ)ದಲ್ಲಿನ ಘಟನೆ

  • ಯುವತಿಯನ್ನು ಬಲೆಯಲ್ಲಿ ಸೆಳೆಯಲು ಪ್ರಯತ್ನಿಸಿದ್ದನು !

ಭೋಪಾಳ (ಮಧ್ಯಪ್ರದೇಶ) – ರಾಜ್ಯದ ಧಾರ ಜಿಲ್ಲೆಯಲ್ಲಿರುವ ಪೀಥಮಪುರದಲ್ಲಿ ಕಾಂಗ್ರೆಸ ನಾಯಕ ಆಶಿಕ ಪಟೇಲ ತಮ್ಮ ಪುತ್ರ ಮತ್ತು ಇತರೆ ಸಹಚರರ ಸಹಾಯದಿಂದ ೨೪ ವರ್ಷದ ರೂಪೇಶ ಬಿರ್ಲಾ ಹೆಸರಿನ ಯುವಕನ ಹತ್ಯೆ ಮಾಡಿದನು. ಸಾಧಾರಣ ೬ ತಿಂಗಳ ಹಿಂದೆ ಪಟೇಲನನ್ನು ‘ಅಸಂಘಟಿತ ಕಾರ್ಮಿಕರು ಮತ್ತು ನೌಕರರ ಕಾಂಗ್ರೆಸ್’ನ ಮಧ್ಯಪ್ರದೇಶ ರಾಜ್ಯದ ಉಪಾಧ್ಯಕ್ಷಹುದ್ದೆಯಲ್ಲಿ ನೇಮಿಸಲಾಗಿತ್ತು.

ಅ. ೫೦ ವರ್ಷದ ಆಶಿಕ ಪಟೇಲ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಓರ್ವ ೨೨ ವರ್ಷದ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆಯಲು ಪ್ರಯತ್ನಿಸಿದ್ದನು. ಆಕೆ ನಿರಾಕರಿಸಿದ್ದರಿಂದ ಅವನು ‘ನೀನು ನಿನ್ನ ಪ್ರಿಯಕರ ರೂಪೇಶನನ್ನು ಬಿಟ್ಟು ಬಿಡು, ಇಲ್ಲವಾದಲ್ಲಿ ನಾನು ರೂಪೇಶ ಮತ್ತು ಅವನ ಕುಟುಂಬದವರ ಹತ್ಯೆ ಮಾಡುತ್ತೇನೆ’, ಎಂದು ಬೆದರಿಕೆಯನ್ನು ಹಾಕಿದ್ದನು.

ಆ. ತದನಂತರ ಆಕಸ್ಮಿಕವಾಗಿ ಅಕ್ಟೋಬರ ೧೨ ರಂದು ರೂಪೇಶ ಕಣ್ಮರೆಯಾದನು. ರೂಪೇಶನ ಕುಟುಂಬದವರು ಪೊಲೀಸರಲ್ಲಿ ದೂರು ದಾಖಲಿಸಿ ಪಟೇಲ ಮೇಲೆ ಸಂಶಯವಿರುವುದಾಗಿ ಹೇಳಿದರು. ಪಟೇಲನನ್ನು ಬಂಧಿಸಿ ಅವನನ್ನು ಬಿಗಿಯಾಗಿ ವಿಚಾರಣೆ ನಡೆಸಿದಾಗ ಅವನು ಎಲ್ಲ ಘಟನಾವಳಿಗಳನ್ನು ಹೇಳಿದನು.

ಈ. ಧಾರ ಜಿಲ್ಲೆಯ ಹೆಚ್ಚುವರಿ ಪೊಲೀಸ ಅಧೀಕ್ಷಕ ದೇವೇಂದ್ರ ಪಾಟೀದಾರ ಇವರು ನೀಡಿದ ಮಾಹಿತಿಯನುಸಾರ ಒಟ್ಟು ೮ ಜನರು ಸೇರಿ ರೂಪೇಶನ ಹತ್ಯೆ ಮಾಡಿದ್ದು, ಹತ್ಯೆಯ ಬಳಿಕ ಅಜರುದ್ದೀನ ಮತ್ತು ಅಸ್ಲಂ ಇವರಿಬ್ಬರೂ ಪರಾರಿಯಾಗಿದ್ದು, ಆಶಿಕ ಪಟೇಲರೊಂದಿಗೆ ಇತರೆ ೬ ಜನರನ್ನು ಬಂಧಿಸಲಾಗಿದೆ.

ಆಶಿಕ ಪಟೇಲನ ಮನೆಯ ಮೇಲೆ ಬುಲ್ಡೋಜರ !

ರೂಪೇಶನ ಹತ್ಯೆಯ ಕುರಿತು ಹಿಂದುತ್ವನಿಷ್ಠ ಸಂಘಟನೆಗಳು ಆಂದೋಲನ ನಡೆಸಿ ಪಟೇಲ ವಿರುದ್ಧ ಕಠಿಣ ಕ್ರಮ ಜರುಗಿಸಲು ಮನವಿ ಮಾಡಿದರು. ಸರಕಾರ ಪಟೇಲನ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ ಹಾಯಿಸಿ ಅವುಗಳನ್ನು ಕೆಡವಿದ್ದಾರೆ.

ಸಂಪಾದಕೀಯ ನಿಲುವು

ಅಪರಾಧಗಳಿಂದ ತುಂಬಿರುವ ಕಾಂಗ್ರೆಸ್ ! ಇಂತಹ ಕಾಮುಕ ಮುಸಲ್ಮಾನ ನಾಯಕರ ಮೇಲೆ ಅತ್ಯಂತ ಕಠಿಣ ಕ್ರಮ ಜರುಗಿಸಲು ಪ್ರಯತ್ನಗಳಾಗುವುದು ಆವಶ್ಯಕವಾಗಿದೆ !