ಭಾರತದ ಪ್ರತಿಷ್ಠೆಯನ್ನು ಮಲಿನಗೊಳಿಸುವ ಪ್ರಯತ್ನ ! – ಭಾರತ ಸರಕಾರದಿಂದ ಟೀಕೆ

‘ವಿಶ್ವ ಹಸಿವಿನ ಸೂಚ್ಯಂಕ’ದಲ್ಲಿ ಭಾರತವನ್ನು ಪಾಕಿಸ್ತಾನ ಮತ್ತು ಶ್ರೀಲಂಕಾಗಿಂತ ಕೆಳಗೆ ತೋರಿಸಿದ ಪ್ರಕರಣ

ನವದೆಹಲಿ – ವಿಶ್ವ ಹಸಿವಿನ ಸೂಚ್ಯಾಂಕದ ವರದಿಯು ಹಸಿವಿನ ಯೋಗ್ಯವಾದ ಮೂಲ್ಯಮಾಪನ ಮಾಡುವುದಿಲ್ಲ. ವರದಿಗಾಗಿ ತಪ್ಪು ಪದ್ಧತಿಯನ್ನು ಅವಲಂಬಿಸಲಾಗುತ್ತದೆ. ಎಂದು ಕೇಂದ್ರ ಸರಕಾರ ಟೀಕೆ ಮಾಡಿದೆ. ‘ಭಾರತ ತನ್ನ ನಾಗರಿಕರಿಗೆ ಬೇಕಾಗುವಷ್ಟು ಹಾಗೂ ಯೋಗ್ಯ ರೀತಿಯಲ್ಲಿ ಅನ್ನವನ್ನು ಪೂರೈಸುವುದಿಲ್ಲ’, ಎಂಬುದನ್ನು ತೋರಿಸಿ ದೇಶದ ಪ್ರತಿಷ್ಠೆಯನ್ನು ಮಲಿನಗೊಳಿಸುವ ಪ್ರಯತ್ನಗಳ ಒಂದು ಭಾಗ ಇದಾಗಿದೆ’, ಎಂದು ಕೂಡ ಭಾರತ ಹೇಳಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಈ ವಿಷಯದಲ್ಲಿ ಮನವಿಪತ್ರವನ್ನು ಜ್ಯಾರಿಗೊಳಿಸಿದ್ದು ದೇಶದಲ್ಲಿ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿರ್ಮೂಲನ ಮಾಡಲು ಹೆಜ್ಜೆ ಇಡಲಾಗಿದೆಯೆಂದು ಹೇಳಿದೆ. ವಿಶ್ವ ಹಸಿವು ಸೂಚ್ಯಾಂಕದಲ್ಲಿ ಭಾರತದ ಸ್ಥಾನವು ೧೦೧ ರಿಂದ ೧೦೭ ಆಗಿದೆಯೆಂದು ಹೇಳಲಾಗಿದೆ. ಇದರಲ್ಲಿ ಭಾರತ ಪಾಕಿಸ್ತಾನ ಮತ್ತು ಶ್ರೀಲಂಕೆಗಿಂತಲೂ ಕೆಳಗಿದೆ ಎಂದು ಹೇಳಿದೆ. ಅದರಿಂದ ಭಾರತವು ಈ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ.

೧. ಸರಕಾರ, ವರದಿಯು ಸತ್ಯಪರಿಸ್ಥಿತಿಯನ್ನು ತೋರಿಸಿಲ್ಲ. ಭಾರತವು ಅನ್ನಸುರಕ್ಷೆಗಾಗಿ, ಅದರಲ್ಲಿಯೂ ವಿಶೇಷವಾಗಿ ಕೋವಿಡ್‌ನ ಸಮಯದಲ್ಲಿ ಮಾಡಿದ ಕಾರ್ಯವನ್ನು ಉದ್ದೇಶಪೂರ್ವಕ ನಿರ್ಲಕ್ಷಿಸಲಾಗಿದೆ. ವರದಿಗಾಗಿ ಉಪಯೋಗಿಸಿರುವ ೪ ರ ಪೈಕಿ ೩ ಸೂಚ್ಯಾಂಕವು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿವೆ ಮತ್ತು ಅದು ಸಂಪೂರ್ಣ ಜನಸಂಖ್ಯೆಯನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

೨. ಸರಕಾರ, ವರದಿಗಾಗಿ ಆಯ್ದುಕೊಂಡಿರುವ ಜನಸಂಖ್ಯೆಯ ಬಗ್ಗೆಯೂ ಕೇಂದ್ರ ಸರಕಾರ ಪ್ರಶ್ನಿಸಿದೆ. ಅಪೌಷ್ಟಿಕ ಜನಸಂಖ್ಯೆಯ ನಾಲ್ಕನೆ ಮತ್ತು ಎಲ್ಲಕ್ಕಿಂತ ಮಹತ್ವದ ಸೂಚಕವನ್ನು ನಿರ್ಧರಿಸಲು ಕೇವಲ ೩ ಸಾವಿರ ಜನರನ್ನು ಸೇರಿಸಲಾಗಿತ್ತು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮೀಕ್ಷೆ ಮಾಡುವ ವಿವಿಧ ಸಂಘಟನೆಗಳು ಭಾರತದ್ವೇಷಿಯಾಗಿವೆ, ಎಂಬುದು ಇಲ್ಲಿಯವರೆಗೆ ಅನೇಕ ಬಾರಿ ಸಾಬಿತಾಗಿದೆ. ಆದ್ದರಿಂದ ಇಂತವರಿಗೆ ಅವರ ಸ್ಥಾನವನ್ನು ತೋರಿಸಲು ಭಾರತ ಸರಕಾರವು ಪ್ರಯತ್ನಿಸಬೇಕಾಗಿದೆ !