ಜ್ಞಾನವಾಪಿಯಲ್ಲಿನ ಶಿವಲಿಂಗದ ‘ಕಾರ್ಬನ್ ಡೆಟಿಂಗ’ ಮಾಡಲು ನ್ಯಾಯಾಲಯದಿಂದ ನಿರಾಕರಣೆ !

(‘ಕಾರ್ಬನ ಡೇಟಿಂಗ’ ಎಂದರೆ ವಸ್ತುವಿನ ಆಯುರ್ಮಾನ ಕಂಡುಹಿಡಿಯುವುದು)

ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ‘ಕಾರ್ಬನ ಡೇಟಿಂಗ’ ಮಾಡಲು ಜಿಲ್ಲಾ ನ್ಯಾಯಾಲಯ ನಿರಾಕರಿಸಿದೆ. ಅಕ್ಟೋಬರ್ ೧೪ ರಂದು ನ್ಯಾಯಾಲಯವು ಈ ನಿರ್ಣಯ ನೀಡಿದೆ. ‘ಸರ್ವೋಚ್ಚ ನ್ಯಾಯಾಲಯವು ಶಿವಲಿಂಗ ದೊರೆತಿರುವ ಸ್ಥಳ ಸುರಕ್ಷಿತವಾಗಿರಿಸಲು ಹೇಳಿರುವಾಗ ‘ಕಾರ್ಬನ ಡೇಟಿಂಗ’ ನಂತಹ ಪರೀಕ್ಷಣೆ ಮಾಡುವುದರಿಂದ ಆದೇಶದ ಉಲ್ಲಂಘನೆ ಆಗುವುದು. ಹಾಗೂ ಸರ್ವೋಚ್ಚ ನ್ಯಾಯಾಲಯವು ಶಿವಲಿಂಗದ ಸುರಕ್ಷೆ ಮಾಡಲು ಹೇಳಿರುವಾಗ ಅದಕ್ಕೆ ಯಾವುದೇ ರೀತಿಯ ಹಾನಿ ಆದರೆ, ಆಗ ಅದು ಕೂಡ ಆದೇಶದ ಉಲ್ಲಂಘನೆ ಆಗುವುದು. ಶಿವಲಿಂಗ ಹಾನಿಯಾದರೆ ಧಾರ್ಮಿಕ ಭಾವನೆಗೆ ನೋವು ಉಂಟಾಗುವುದು ಮತ್ತು ಅದರ ನಂತರ ನಿರ್ಮಾಣವಾಗುವ ವಾದ ವಿವಾದಗಳ ಮೇಲೆ ಕಾನೂನಿನ ಪ್ರಕಾರ ಪರಿಹಾರ ಸಿಗುವುದಿಲ್ಲ’, ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಕ್ಟೋಬರ್ ೧೧ ರಂದು ಎರಡು ಕಡೆಯ ಪಕ್ಷದ ವಾದ ವಿವಾದ ಮುಗಿದ ನಂತರ ನ್ಯಾಯಾಲಯವು ತೀರ್ಪು ಕಾಯ್ದಿರಿಸಿ ಅಕ್ಟೋಬರ್ ೧೪ ರಂದು ತೀರ್ಪು ನೀಡಲು ನಿಶ್ಚಯಗೊಳಿಸಿದೆ.

೧. ಶಿವಲಿಂಗದ ಆಯುರ್ಮಾನ, ಉದ್ದ ಮತ್ತು ಅಗಲ ಕಂಡುಹಿಡಿಯಲು ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಯಿಂದ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಲಾಗಿತ್ತು. ಈ ನಿರ್ಣಯದ ನಂತರ ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ಈ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಆಹ್ವಾನೆ ನೀಡುವ ಸಮಯದಲ್ಲಿ ಸ್ಪಷ್ಟಪಡಿಸಿದರು.

೨. ಹಿಂದೂ ಪಕ್ಷದ ಬೇಡಿಕೆಗೆ ಮುಸಲ್ಮಾನ ಪಕ್ಷದಿಂದ ವಿರೋಧ ವ್ಯಕ್ತಪಡಿಸಲಾಯಿತು. ಮಸೀದಿ ಸಮಿತಿಯು, ತಥಾಕಥಿತ ಶಿವಲಿಂಗದ ವೈಜ್ಞಾನಿಕ ಪರಿಶೀಲನೆ ಮಾಡುವ ಅವಶ್ಯಕತೆ ಇಲ್ಲ. ಹಿಂದೂ ಪಕ್ಷವು ಈ ಪ್ರಕರಣದಲ್ಲಿ ಜ್ಞಾನವಾಪಿಯಲ್ಲಿ ಪ್ರತ್ಯಕ್ಷ ಮತ್ತು ಅಪ್ಪ್ರತ್ಯಕ್ಷ ರೀತಿಯಲ್ಲಿ ದೇವರ ಪೂಜೆ ಮಾಡಲು ಬೇಡಿಕೆ ಸಲ್ಲಿಸಿದೆ; ಆದರೆ ಶಿವಲಿಂಗದ ಪರಿಶೀಲನೆ ಏಕೆ ಮಾಡಬೇಕು ? ಜ್ಞಾನವಾಪಿಯಲ್ಲಿ ಆಯೋಗದ ವತಿಯಿಂದ ಸಾಕ್ಷಿಗಳು ಕಲೆಹಾಕುಲು ಹಿಂದೂ ಪಕ್ಷ ಒತ್ತಾಯಿಸುತ್ತಿದೆ. ದಿವಾಣಿ ಪ್ರಕ್ರಿಯೆ ಸಂಹಿತೆಯಲ್ಲಿ ಈ ರೀತಿ ಯಾವುದೇ ನಿಬಂಧನೆ ಇಲ್ಲ.

೩. ಅರ್ಜಿದಾರ ಮಹಿಳೆಯರ ಪೈಕಿ ರಾಖಿ ಸಿಂಹ ಇವರು ಈ ಬೇಡಿಕೆಗೆ ವಿರೋಧಿಸಿದ್ದರು. ಆದ್ದರಿಂದ ಈ ಸಮಯದಲ್ಲಿ ನ್ಯಾಯಾಲಯದಲ್ಲಿ ಉಪಸ್ಥಿತರಾಗಿರಲಿಲ್ಲ. ಹಾಗೂ ಇತರ ೪ ಅರ್ಜಿದಾರ ಸೀತಾ ಸಾಹೂ, ಮಂಜು ವ್ಯಾಸ, ರೇಖಾ ಪಾಠಕ, ಮತ್ತು ಲಕ್ಷ್ಮಿ ದೇವಿ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.

ಪುರಾತತ್ವ ಇಲಾಖೆ ಸಲಹೆ ಪಡೆಯುವ ಬದಲು ಬೇಡಿಕೆ ತಳ್ಳಿ ಹಾಕಿರುವುದು ಅಯೋಗ್ಯ ! – ನ್ಯಾಯವಾದಿ

ಜಿಲ್ಲಾ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗುವುದು, ಎಂದು ಹೇಳಿ ಕಾರ್ಬನ್ ಡೇಟಿಂಗ್‌ಗೆ ನಿರಾಕರಿಸುವುದು ಅಯೋಗ್ಯವಾಗಿದೆ. ಮುಲತಃ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣ ಜಿಲ್ಲಾ ನ್ಯಾಯಾಲಯದ ಹತ್ತಿರ ವಿಚಾರಣೆಗಾಗಿ ಕಳುಹಿಸಿತ್ತು. ಅಂದರೆ ಇದರ ಬಗ್ಗೆ ಜಿಲ್ಲಾ ನ್ಯಾಯಾಲಯವೇ ನಿರ್ಣಯ ಕೇಳಿಕೊಳ್ಳುವುದು ಅವಶ್ಯಕವಾಗಿದೆ. ಇದೇ ಸೂತ್ರದ ಬಗ್ಗೆ ನಾವು ಮತ್ತೊಮ್ಮೆ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವೆವು ಮತ್ತು ನ್ಯಾಯಾಲಯಕ್ಕೆ ಈ ಸಂದರ್ಭದಲ್ಲಿ ದೃಷ್ಟಿಕೋನ ಸ್ಪಷ್ಟಪಡಿಸಲು ಹೇಳುವವರಿದ್ದೇವೆ. ಮೂಲತಃ ‘ಕಾರ್ಬನ್ ಡೇಟಿಂಗ್’ ನಿಂದ ಸ್ಪರ್ಶ ಮಾಡದೆ ಆಯುರ್ಮನ ತೆಗೆಯಬಹುದು. ಪುರಾತತ್ವ ಇಲಾಖೆಯ ಹತ್ತಿರ ಇತರ ಕೆಲವು ವ್ಯವಸ್ಥೆ ಇರುವುದು, ಅದರ ಮೂಲಕ ವಸ್ತುವಿನ ಆಯುರ್ಮಾನ ಯಾವುದೇ ಹಾನಿ ಮಾಡದೆ ಹೇಳಬಹುದು; ಆದರೆ ನ್ಯಾಯಾಲಯವು ಈ ವಿಷಯವಾಗಿ ಪುರಾತತ್ವ ಇಲಾಖೆಯ ಹತ್ತಿರ ಸಲಹೆ ಕೇಳದೆ ಈ ರೀತಿಯ ಮಾನದಂಡ ಉಪಯೋಗಿಸಿ ನಿರ್ಣಯ ನೀಡಿದೆ. ನ್ಯಾಯಾಲಯವು ಈ ವಿಷಯವಾಗಿ ಪುರಾತತ್ವ ಇಲಾಖೆಗೆ ಕೇಳುವುದು ಅವಶ್ಯಕವಾಗಿತ್ತು. ಈ ಪ್ರಕರಣದಲ್ಲಿ ಈಗ ನಾವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ಇದರ ವಿಷಯವಾಗಿ ನ್ಯಾಯ ಕೇಳುವೆವು ಎಂದು ಹೇಳಿದರು.