ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾದ ಮೇಲೆ ಕ್ಷಿಪಣಿ ಮತ್ತು ೧೭೦ ಫಿರಂಗಿಗಳನ್ನು ದಾಳಿ !

ಪ್ಯೊಂಗ್ಯಾಂಗ್ (ಉತ್ತರ ಕೊರಿಯಾ) – ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯಲ್ಲಿ ಕ್ಷಿಪಣಿ ಮತ್ತು ೧೭೦ ಫಿರಂಗಿ ಶೆಲ್‌ಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಆರೋಪಿಸಿದೆ. ಈ ಪ್ರದೇಶದಲ್ಲಿ ಉತ್ತರ ಕೊರಿಯಾ ಫೈಟರ್ ಜೆಟ್ ಹಾರಿಸಿದೆ ಎಂದೂ ದಕ್ಷಿಣ ಕೊರಿಯಾ ಹೇಳಿದೆ. ೨೦೧೮ ರಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವಿನ ಮಿಲಿಟರಿ ಒಪ್ಪಂದದಿಂದ ಸ್ಥಾಪಿಸಲಾದ ‘ಸಮುದ್ರೀಯ ಬಫರ್ ವಲಯ’ ಒಳಗೆ ಫಿರಂಗಿಗಳು ಬಿದ್ದಿವೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಇದು ಸೇನಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಹೇಳಿದ್ದಾರೆ.