ಪಂಜಾಬನ ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಕೆಡವಲಾಯಿತು !

ಗುರುದಾಸಪುರ (ಪಂಜಾಬ) – ಪಂಜಾಬಗೆ ಅಂಟಿಕೊಂಡಿರುವ ಪಾಕಿಸ್ತಾನದ ಗಡಿಯ ಮೇಲೆ ರಮದಾಸದಲ್ಲಿ ಪಾಕಿಸ್ತಾನದ ಒಂದು ಡ್ರೋನ್ ಗಡಿ ಭ್ದರತಾ ಪಡೆಯ ಸೈನಿಕರು ಹೊಡೆದುರುಳಿಸಿದ್ದಾರೆ. ಬಾಂಬ್ ಮತ್ತು ಗುಂಡಿನ ಸುರಿಮಳೆ ನಡೆಸಿ ಈ ಡ್ರೋನ್ ಉರುಳಿಸಲಾಯಿತು. ಈ ಡ್ರೋನ್ ಮೂಲಕ ಪಾಕಿಸ್ತಾನವು ಮಾದಕ ವಸ್ತುಗಳು ಭಾರತಕ್ಕೆ ಕಳಿಸಿರುವ ಅನುಮಾನವಿದೆ. ಈಗ ಪೊಲೀಸರು ಇದನ್ನು ಹುಡುಕುತ್ತಿದ್ದಾರೆ. (ಇದರ ಅರ್ಥ ಈ ಡ್ರೋನ್ ತನ್ನ ಕೆಲಸ ಪೂರ್ಣಗೊಳಿಸಿದೆ ಮತ್ತು ಹಿಂತಿರುಗುವಾಗ ಅದನ್ನು ಕೆಡವಲಾಗಿದೆ. ಅಂದರೆ ಇದು ಡ್ರೋನ್ ಭಾರತದಲ್ಲಿ ನುಸುಳಿದೆ, ಆಗ ಅದು ಹೇಗೆ ಕಾಣಲಿಲ್ಲ ? ಎಂಬ ಪ್ರಶ್ನೆ ಉದ್ಭವಿಸಿದೆ ! – ಸಂಪಾದಕರು)