ಬೇಟ ದ್ವಾರಕಾದಲ್ಲಿನ ಅಕ್ರಮ ಗೋರಿ, ಮಸೀದಿ ಮುಂತಾದವು ಕಟ್ಟುವುದರ ಹಿಂದೆ ಭಾರತದ ಭದ್ರತೆಗೆ ಅಪಾಯ ನಿರ್ಮಾಣ ಮಾಡುವ ಷಡ್ಯಂತ್ರವಾಗಿತ್ತು !

ದ್ವಾರಕಾ (ಗುಜರಾತ) – ಗುಜರಾತದಲ್ಲಿನ ಪಾಕಿಸ್ತಾನದ ಗಡಿಯ ಹತ್ತಿರ ಇರುವ ದ್ವಾರಕಾದಲ್ಲಿನ ಬೇಟ ದ್ವಾರಕದ ಮೇಲೆ ಅತಿಕ್ರಮಣ ನಡೆಸಿ ಭಾರತದ ಭದ್ರತೆಗೆ ಅಪಾಯ ನಿರ್ಮಾಣ ಮಾಡುವ ದೊಡ್ಡ ಷಡ್ಯಂತ್ರ ಬೆಳಕಿಗೆ ಬಂದ ನಂತರ ಇಲ್ಲಿಯ ಮುಸಲ್ಮಾನರು ಅಕ್ರಮವಾಗಿ ಕಟ್ಟಿರುವ ಗೋರಿ, ಮಸೀದಿ ಮುಂತಾದವುಗಳನ್ನು ಇತ್ತಿಚೆಗೆ ಕೆಡವಲಾಗಿದೆ. ಈ ಬೇಟದ ಮೇಲೆ ಹೋಗುವುದಕ್ಕಾಗಿ ನೌಕೆಯ ಸಹಾಯ ಪಡೆಯಬೇಕಾಗುತ್ತದೆ. ಬೇಟ ದ್ವಾರಕ ಇದು ಭಗವಾನ್ ಶ್ರೀ ಕೃಷ್ಣನ ದ್ವಾರಕೆ ಇರುವುದಾಗಿ ಹೇಳಲಾಗುತ್ತದೆ. ಇಲ್ಲಿ ಶ್ರೀ ಕೃಷ್ಣನ ಮನೆ ಇತ್ತು. ಸುಧಾಮ ಇದೆ ಬೇಟದ ಮೇಲೆ ಭಗವಾನ್ ಶ್ರೀ ಕೃಷ್ಣನನ್ನು ಭೇಟಿ ಮಾಡಲು ಹೋಗಿದ್ದನು’, ಎಂದು ಹೇಳಲಾಗುತ್ತದೆ.

ಬೇಟ ದ್ವಾರಕ ಮತ್ತು ಕರಾಚಿ ಇದರಲ್ಲಿನ ಅಂತರ ಸುಮಾರು ೧೮೫ ‘ನೋಟಿಕಲ್ ಮೈಲ್’, ಎಂದರೆ ಸುಮಾರು ೩೪೨ ಕಿಲೋಮೀಟರ್ ಇದೆ. ‘ಇಲ್ಲಿ ಮುಸಲ್ಮಾನರಿಂದ ಅಕ್ರಮವಾಗಿ ಕಟ್ಟಲಾದ ಧಾರ್ಮಿಕ ಸ್ಥಳಗಳು ಜಿಹಾದಿ ಭಯೋತ್ಪಾದಕರಿಗಾಗಿ ಆಶ್ರಯ ಸ್ಥಳಗಳಾಗನಹುದಿತ್ತು. ಅವಕಾಶ ದೊರೆಯುತ್ತಲೇ ಈ ಭಯೋತ್ಪಾದಕರು ಭಾರತದಲ್ಲಿನ ವಿವಿಧ ಭಾಗದಲ್ಲಿ ದಾಳಿ ಕೂಡ ಮಾಡಬಹುದು,’ ಈ ರೀತಿಯ ಭಯ ಸುರಕ್ಷಾ ವ್ಯವಸ್ಥೆಗೆ ಇತ್ತು. ಗಡಿ ರಕ್ಷಕ ದಳದ ಠಾಣೆಯ ಎದುರು ಅನೇಕ ಅಕ್ರಮ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಅಲ್ಲಿಯ ನಿವಾಸಿಗಳು ಭಾರತೀಯ ಸೈನ್ಯದ ಕಾರ್ಯ ಚಟುವಟಿಕೆಯ ಮೇಲೆ ಗಮನ ಇರಿಸಿದ್ದರು. ಆದ್ದರಿಂದ ಸರಕಾರದಿಂದ ಇಲ್ಲಿಯ ಕಾಮಗಾರಿಯ ಮೇಲೆ ಕ್ರಮ ಕೈಗೊಳ್ಳಲಾಯಿತು. ಈಗ ಗುಪ್ತಚರ ವ್ಯವಸ್ಥೆ ಈ ಕಾಮಗಾರಿಯ ಹಿಂದೆ ಯಾರು ಇದ್ದಾರೆ ? ಎಂಬುದನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿರುವ ಬೇಟ ದ್ವಾರಕಾದಲ್ಲಿ ಈ ರೀತಿಯ ಅಕ್ರಮ ಕಟ್ಟಡಗಳ ಕಾಮಗಾರಿ ನಡೆಯುವವರೆಗೂ ಗುಪ್ತಚರ ಇಲಾಖೆ ಮತ್ತು ಪೊಲೀಸರು ನಿದ್ದೆ ಮಾಡುತ್ತಿದ್ದರೇ ? ಆ ಸಮಯದಲ್ಲಿ ನಿಜವಾಗಲೂ ಏನಾದರೂ ಘಟನೆ ನಡೆದಿದ್ದರೆ, ಆಗ ಅದಕ್ಕೆ ಯಾರು ಜವಾಬ್ದಾರರಾಗುವರು ? ಎಲ್ಲಾ ಘಟನೆಯ ವಿಚಾರಣೆ ನಡೆಯಬೇಕು !