ದೀಪಾವಳಿಯ ದಿನದಂದು ಆಡುವ ಜೂಜಾಟದ ಸೂಕ್ಷ್ಮದಲ್ಲಿನ ದುಷ್ಪರಿಣಾಮ !

ಶ್ರೀ. ನಿಷಾದ ದೇಶಮುಖ

೧. ದೀಪಾವಳಿಯ ದಿನದಂದು ಜೂಜಾಡುವುದರಿಂದ ಸಮಾಜದ ಮೇಲೆ ಪ್ರಕ್ಷೇಪಿತವಾಗುವ ಶ್ರೀ ಲಕ್ಷ್ಮಿತತ್ತ್ವಕ್ಕೆ ನಿರ್ಬಂಧಿಸುವುದು ಮತ್ತು ದೊಡ್ಡ ಕೆಟ್ಟ ಶಕ್ತಿಗಳು ಆ ಮಾಧ್ಯಮದಿಂದ ಸಂಪೂರ್ಣ ಸಮಾಜದ ಮೇಲೆ ಅಲಕ್ಷ್ಮಿಯ ಸುರಿಮಳೆಯನ್ನು ಸುರಿಸುವುದು

೨. ದೀಪಾವಳಿಯ ದಿನದಂದು ಸಮಷ್ಟಿಯ ಇಚ್ಛಾಶಕ್ತಿಯ ನಿರ್ಗುಣ ಶಕ್ತಿಯಿಂದ ಮಾಡಲಾಗುವ ಸಗುಣ ಪೂಜೆಯಿಂದ ಕಾರ್ಯನಿರತವಾಗುವ ಸೂಕ್ಷ್ಮ ಕ್ರಿಯಾಕ್ಷೇತ್ರದಿಂದ ಧನದ ದೇವಿಯಾಗಿರುವ ಶ್ರೀ ಮಹಾಲಕ್ಷ್ಮಿಯು ಆಕರ್ಷಿತಳಾಗಿ ಸಾಧನೆಯನ್ನು ಮಾಡುವ ಜೀವಗಳ ಸೂಕ್ಷ್ಮದೇಹದ ಮೇಲೆ ಈಶ್ವರಪ್ರಾಪ್ತಿಯನ್ನು ಮಾಡಿಕೊಡುವ ಧನದ, ಅಂದರೆ ಗುಣಗಳ ಸಂಸ್ಕಾರವನ್ನು ಮಾಡುತ್ತಾಳೆ. ಸಮಷ್ಟಿ ಸ್ತರದಲ್ಲಿ ಜೂಜಾಡುವುದರಿಂದ ಪೂಜೆ ಮಾಡಿದ ನಂತರ ನಿರ್ಮಾಣವಾಗುವ ಸೂಕ್ಷ್ಮ ಕ್ರಿಯಾಕ್ಷೇತ್ರದ ಧನತ್ವವು ಆಕುಂಚನವಾಗಿ ಸಮಾಜದ ಮೇಲೆ ಪ್ರಕ್ಷೇಪಿಸುವ ಲಕ್ಷ್ಮಿತತ್ತ್ವಕ್ಕೆ ತಡೆಯೊಡ್ಡುತ್ತದೆ. ಜೂಜುಗಳಂತಹ ತಮವರ್ಧಕ ಆಟಗಳನ್ನು ದೀಪಾವಳಿ ಹಬ್ಬದಲ್ಲಿ ಆಡುವುದರಿಂದ ದೊಡ್ಡ ಕೆಟ್ಟ ಶಕ್ತಿಯು ಅಲ್ಲಿಗೆ ಬಂದು ಜೀವಗಳನ್ನು ತನ್ನ ಮಾಯಾಜಾಲದಲ್ಲಿ ಸಿಲುಕಿಸಿ ಅವರ ಮೇಲೆ ಮತ್ತು ಅವರ ಮಾಧ್ಯಮದಿಂದ ಸಮಾಜದ ಮೇಲೆ ಅಲಕ್ಷ್ಮಿಯನ್ನು ಸುರಿಸಿ ಸಮಾಜದಲ್ಲಿನ ಸಮೃದ್ಧಿಯನ್ನು ನಷ್ಟಗೊಳಿಸುತ್ತವೆ. ಸ್ಥೂಲ ಸ್ತರದಲ್ಲಿ ಆಡಲಾಗುವ ಈ ಆಟ ಸೂಕ್ಷ್ಮ ಸ್ತರದಲ್ಲಿ ಮಹಾಭಯಂಕರ ಪರಿಣಾಮ ಬೀರುತ್ತದೆ.’

– ಶ್ರೀ. ನಿಷಾದ ದೇಶಮುಖ, ರಾಮನಾಥಿ, ಗೋವಾ (೮.೧೦.೨೦೦೬)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.