ಆಧ್ಯಾತ್ಮಿಕ ದೀಪಾವಳಿ ಆಚರಿಸಿ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಪೂ. ರಮಾನಂದ ಗೌಡ

ಮಂಗಳೂರು – ದೀಪಾವಳಿಯ ಹಬ್ಬಗಳನ್ನು ಆಧ್ಯಾತ್ಮಿಕವಾಗಿ ಆಚರಣೆ ಮಾಡೊಣ. ಪ್ರತಿಯೊಂದು ಕೃತಿಯಿಂದ ಆನಂದ ಪಡೆಯೋಣ. ಮನೆಯ ಸ್ವಚ್ಛತೆಯನ್ನು ಮಾಡುವುದರಿಂದ ಚೈತನ್ಯ ಸಿಗುತ್ತದೆ. ಹಾಗಾಗಿ ಈ ವರ್ಷ ದೀಪಾವಳಿಯ ಮುನ್ನ ಮನೆಯ ಸ್ವಚ್ಛತೆಯನ್ನು ಮಾಡೊಣ. ಅದೇ ರೀತಿ ನಮ್ಮಲ್ಲಿರುವ ದೋಷ-ಅಹಂ ನಿರ್ಮೂಲನೆ ಮಾಡಲು ಹಾಗೂ ಗುಣ ಸಂವರ್ಧನೆ ಮಾಡಲು ಸಹ ಧ್ಯೇಯವಿಟ್ಟು ಪ್ರಯತ್ನಿಸೋಣ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ದೀಪಾವಳಿ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಅಯೋಜಿಸಿದ್ದ ಸತ್ಸಂಗ ಮಾರ್ಗದರ್ಶನ ಮಾಡಿದರು. ಸಾವಿರಕ್ಕೂ ಹೆಚ್ಚು ಸಾಧಕರು, ಧರ್ಮಪ್ರೇಮಿಗಳು ಇದರ ಲಾಭ ಪಡೆದರು.