ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆ ಮೆರವಣಿಗೆಯಲ್ಲಿ ದಾಳಿಯ ಹಿಂದೆ ಮದರಸಾದಲ್ಲಿನ ವಿದ್ಯಾರ್ಥಿಗಳ ಕೈವಾಡ !
ಲಕ್ಷ್ಮಣಪುರಿ (ಉತ್ತರಪ್ರದೇಶ) – ಪ್ರಸ್ತುತ ಉತ್ತರಪ್ರದೇಶದಲ್ಲಿನ ಮದರಸಾಗಳ ಸಮೀಕ್ಷೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ‘ಜಮಾತ್ ಉಲ್ ಮುಜಾವಿದ್ದಿನಿ ಬಾಂಗ್ಲಾದೇಶ’ (ಜೆ.ಎಮ್.ಬಿ.)’ ಈ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರು ನೇಪಾಳ ಗಡಿಯ ಹತ್ತಿರ ಇರುವ ಮದರಸಾಗಳ ಮೂಲಕ ಭಾರತದಲ್ಲಿ ನುಸುಳುವ ಸಿದ್ಧತೆಯಲ್ಲಿರುವ ಮಾಹಿತಿ ಬೆಳಕಿಗೆ ಬಂದಿದೆ.
ಇತ್ತಿಚೆಗೆ ರಾಜ್ಯದಲ್ಲಿನ ಸುಲ್ತಾನಪುರದ ಶ್ರೀ ದುರ್ಗಾ ದೇವಿ ಮೂರ್ತಿಯ ವಿಸರ್ಜನೆ ಮೆರವಣಿಗೆಯ ಸಮಯದಲ್ಲಿ ನಡೆದ ಹಿಂಸಾಚಾರದ ಹಿಂದೆ ಒಂದು ಮದರಸಾ ಸಹಭಾಗಿ ಇರುವ ಮಾಹಿತಿ ಬೆಳಕಿಗೆ ಬಂದಿದೆ. ‘ಮೆರವಣಿಗೆಯ ಮೇಲೆ ದಾಳಿ ನಡೆಸುವ ಮದರಸಾದಲ್ಲಿನ ವಿದ್ಯಾರ್ಥಿಗಳಾಗಿದ್ದಾರೆ’, ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ೩೨ ಜನರನ್ನು ಬಂಧಿಸಲಾಗಿದೆ. ಈ ದಾಳಿಯ ಪೂರ್ವಸಿದ್ಧತೆ ಮಾಡಲಾಗಿತ್ತು. ಅದಕ್ಕಾಗಿ ಕಲ್ಲು ಮತ್ತು ಇಟ್ಟಿಗೆ ಸಂಗ್ರಹಿಸಲಾಗಿತ್ತು. ಯೋಜನೆಯ ಪ್ರಕಾರ ದಾಳಿಯ ಮೊದಲು ವಿದ್ಯುತ್ ಕಡಿತ ಮಾಡಲಾಗಿತ್ತು. ಆ ಸಮಯದಲ್ಲಿ ಮದರಸಾದ ಮೌಲ್ವಿ (ಮುಸಲ್ಮಾನರ ಧಾರ್ಮಿಕ ನಾಯಕ) ಮುಸಲ್ಮಾನರಿಗೆ ದಾಳಿಗಾಗಿ ಪ್ರಚೋದಿಸಿರುವುದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಸಂಪಾದಕೀಯ ನಿಲುವುಈಗಲಾದರೂ ಸರಕಾರ ದೇಶದಲ್ಲಿನ ಮದರಸಾಗಳು ಮುಚ್ಚುವರೇ ? |