ಮುಸಲ್ಮಾನರು ಹಿಂದೂ ಮಹಿಳೆಯರ ಕೈಗೆ ಮೆಹಂದಿ ಹಾಕಿದರೆ ಪರಿಣಾಮವನ್ನು ಭೋಗಿಸಬೇಕಾಗಬಹುದು !

‘ಲವ್ ಜಿಹಾದ್’ನಿಂದಾಗಿ ಮುಝಫ್ಫರನಗರದಲ್ಲಿ (ಉತ್ತರ ಪ್ರದೇಶ) ಹಿಂದೂ ಮಹಾಸಭೆಯ ಎಚ್ಚರಿಕೆ!

ಮುಝಫ್ಫರನಗರ (ಉತ್ತರ ಪ್ರದೇಶ) – ಹಿಂದೂ ವಿವಾಹಿತ ಮಹಿಳೆಯರ ಹಬ್ಬವಾದ ‘ಕರವಾ ಚೌಥ’ ಹಿನ್ನೆಲೆಯಲ್ಲಿ ಮೆಹಂದಿ ಹಾಕುವ ಮುಸಲ್ಮಾನರಿಗೆ ಹಿಂದೂ ಮಹಾಸಭೆಯು ಎಚ್ಚರಿಕೆ ನೀಡಿದೆ. ‘ಮೆಹಂದಿ ಅಂಗಡಿಗಳನ್ನು ತೆರೆಯುವ ಮುಸಲ್ಮಾನ ಯುವಕರ ಉದ್ದೇಶ ಬೇರೆಯೇ ಆಗಿರುತ್ತದೆ. ಅವರ ತಲೆಯಲ್ಲಿ ‘ಲವ್ ಜಿಹಾದ್’ ಇದೆ. ಆದ್ದರಿಂದ ಮುಸಲ್ಮಾನರು ಹಿಂದೂ ಮಹಿಳೆಯರ ಕೈಗೆ ಮೇಹಂದಿ ಹಾಕಿದರೆ ಅದರ ಪರಿಣಾಮ ಭೋಗಿಸಬೇಕಾಗಬಹುದು’ ಎಂದು ಎಚ್ಚರಿಕೆ ನೀಡಿದೆ. ೨೦೨೧ ರಲ್ಲಿಯೂ ಮುಝಫ್ಫರನಗರದಲ್ಲಿ ಕೆಲವು ಸಾಮಾಘಟಕಗಳು ಮುಸಲ್ಮಾನರಿಗೆ ಮೆಹಂದಿ ಹಾಕದಂತೆ ತಡೆದಿದ್ದವು. ಈ ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

೧. ಹಿಂದೂ ಮಹಾಸಭಾ ಸದಸ್ಯರಾದ ಲೋಕೇಶ ಸೈನಿ ಇವರು ಮಾತನಾಡುತ್ತಾ, ‘ಲವ್ ಜಿಹಾದ್’ಗೆ ಬಲಿಯಾಗುತ್ತಿರುವ ನಮ್ಮ ಸಹೋದರಿಯರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಯಾವ ಅಂಗಡಿ ಮಾಲಿಕರಿಗೆ ಕರ್ವಾ ಚೌಥನ ಮಹತ್ವವು ತಿಳಿದಿದೆ ಅಂತಹವರಲ್ಲಿಯೇ ಹಿಂದೂ ಮಹಿಳೆಯರು ಮೆಹಂದಿ ಹಾಕಿಸಿಕೊಳ್ಳಲು ಹೋಗಬೇಕು ಎಂದು ಹೇಳಿದರು.

೨. ಖತೌಲಿ ಚುನಾವಣಾ ಕ್ಷೇತ್ರದ ಭಾಜಪ ಶಾಸಕ ವಿಕ್ರಮ ಸೈನಿ ಇವರು, ಮುಸಲ್ಮಾನ ಯುವಕರು ಮೆಹಂದಿಯ ಹೆಸರಿನಲ್ಲಿ ‘ಲವ್ ಜಿಹಾದ್’ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಹಲವು ಪ್ರಕರಣಗಳು ನಡೆದಿವೆ. ಹಿಂದೂ ಮಹಿಳೆಯರಲ್ಲಿ ನನ್ನ ವಿನಂತಿಯೆಂದರೆ, ಮನೆಯಲ್ಲಿಯೇ ಅಥವಾ ಬೇರೆ ಸಮುದಾಯಗಳಿಗೆ ಸೇರಿದ ಬ್ಯೂಟಿ ಪಾರ್ಲರ್‌ಗಳು ಅಥವಾ ಅಂಗಡಿಗಳಲ್ಲಿ ಮೆಹಂದಿ ಹಾಕಿಸಿಕೊಳ್ಳಬೇಕು.

೩. ವಿಶ್ವ ಹಿಂದೂ ಪರಿಷತ್ ಮುಝಫ್ಫರನಗರದಲ್ಲಿ ಮೆಹಂದಿ ಹಾಕುವ ೧೩ ಅಂಗಡಿಗಳನ್ನು ಸ್ಥಾಪಿಸಿದೆ. ಈ ಭಾಗದಲ್ಲಿ ಮುಸಲ್ಮಾನ ಯುವಕರು ಹಿಂದೂ ಮಹಿಳೆಯರ ಕೈಗೆ ಮೆಹಂದಿ ಹಾಕದಂತೆ ಕಾರ್ಯಕರ್ತರು ಮುಂಜಾಗ್ರತೆ ವಹಿಸುತ್ತಿದ್ದಾರೆ. ವಿಹಿಂಪದ ಕಾರ್ಯಕರ್ತರು ಆಧಾರ ಕಾರ್ಡ್ ಮೂಲಕ ಮೆಹಂದಿ ಹಾಕುವವರ ಗುರುತನ್ನು ಖಚಿತಪಡಿಸಿಕೊಳ್ಳಲೂ ಪ್ರಯತ್ನಿಸುತ್ತಿದ್ದಾರೆ.

‘ಕರವಾ ಚೌಥ’ ಎಂದರೇನು ?

‘ಕರವಾ ಚೌಥ’ ದಿನದಂದು ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರ್ಜಲ ಉಪವಾಸ ಮಾಡುತ್ತಾರೆ. ವಿವಾಹಿತ ಮಹಿಳೆಯರು ಈ ಹಬ್ಬಕ್ಕೆಂದು ಕೈಗೆ ಮೆಹಂದಿ ಹಚ್ಚಿಕೊಳ್ಳುತ್ತಾರೆ.