ಪಂಜಾಬನಲ್ಲಿ ಕೈದಿಗಳಿಗೆ ತಮ್ಮ ಮನೆಯವರೊಂದಿಗೆ ಏಕಾಂತದಲ್ಲಿ ಭೇಟಿಯಾಗಲು ಸಾಧ್ಯ !

ಅಮೃತಸರ (ಪಂಜಾಬ) – ಪಂಜಾಬ ಸರಕಾರದಿಂದ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಆದೇಶದ ನಂತರ ರಾಜ್ಯದ ಕಾರಾಗೃಹದಲ್ಲಿ ಇರುವ ಕೈದಿಗಳಿಗೆ ಅವರ ಮನೆಯವರ ಜೊತೆ ಎರಡು ಗಂಟೆ ಕಾಲ ಏಕಾಂತದಲ್ಲಿ ಕಳೆಯಲು ಸ್ವತಂತ್ರ ಕೋಠಡಿಯ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಸ್ವತಂತ್ರವಾಗಿ ಎರಡು ಮಂಚ, ಮೇಜು ಮತ್ತು ಶೌಚಾಲಯ ಇರಲಿದೆ. ಪ್ರಸ್ತುತ ಇಂದವಾಲ ಸಾಹಿಬ್, ನಾಭಾ, ಲೂಧಿಯಾನ ಮತ್ತು ಭಟಿಂಡಾ ಮಹಿಳಾ ಕಾರಾಗೃಹದಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಪಂಜಾಬ್ ಸರಕಾರವು, ಈ ಸೌಲಭ್ಯ ಕುಖ್ಯಾತ ರೌಡಿಗಳು ಮತ್ತು ಲೈಂಗಿಕ ಶೋಷಣೆಯ ಅಪರಾಧ ಸಂಬಂಧಿತ ಮೊಕದ್ದಮೆಯ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಿಗೆ ದೊರೆಯುವದಿಲ್ಲ. ಈ ಸೌಲಭ್ಯಕ್ಕಾಗಿ ಬಂಧಿತರು ಮೊದಲು ಕಾರಾಗೃಹ ಆಡಳಿತಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಮ್ಮತಿಸಿದರೆ ಒಳ್ಳೆಯ ವರ್ತನೆ ಇರುವ ಕೈದಿಗಳಿಗೆ ಅವರ ಮನೆಯವರ ಜೊತೆ ಎರಡು ಗಂಟೆಗಳ ಕಾಲ ಇರಲು ಅನುಮತಿ ನೀಡಲಾಗುತ್ತಿದೆ.

೧. ಪಂಜಾಬ ಸರಕಾರ ಕೆಲವು ನಿಯಮಗಳ ಪಟ್ಟಿ ತಯಾರಿಸಿದೆ. ಮೊಟ್ಟ ಮೊದಲು ಪತಿ-ಪತ್ನಿ ಇರುವ ವಿವಾಹ ಪ್ರಮಾಣ ಪತ್ರ ತೋರಿಸಬೇಕು. ಅದರ ನಂತರ ವೈದ್ಯಕೀಯ ಪ್ರಮಾಣ ಪತ್ರ ಅದರಲ್ಲಿ ಹೆಚ್.ಐ.ವಿ. (ಏಡ್ಸ್), ಲೈಂಗಿಕ ಸಾಂಕ್ರಾಮಿಕ ರೋಗ (ಎಸ್.ಟಿ.ಡಿ.), ಕೊರೊನಾ ಸೋಂಕು ಮತ್ತು ಇತರ ಯಾವುದೇ ಕಾಯಲೇ ಇರಬಾರದು.

೨. ಪತಿ-ಪತ್ನಿ ಅಲ್ಲದೆ ಪಂಜಾಬ್ ಸರಕಾರದಿಂದ ಪರಿವಾರದಲ್ಲಿನ ಇತರ ಸದಸ್ಯರಿಗೆ ಭೇಟಿಯ ಕಾರ್ಯಕ್ರಮ ನಡೆಯುತ್ತಿದೆ. ಅದರಲ್ಲಿ ಒಬ್ಬ ಕೈದಿಯು ಒಂದು ಸಭಾಗೃಹದಲ್ಲಿ ಅವನ ಪರಿವಾರದಲ್ಲಿನ ಐದು ಸದಸ್ಯರ ಜೊತೆ ಒಂದು ಗಂಟೆ ಕಾಲ ಭೇಟಿ ಮಾಡಬಹುದು. ಅವರು ಒಟ್ಟಾಗಿ ಕುಳಿತು ತಿಂದು ಕುಡಿದು ಮಾತನಾಡಬಹುದು.

೩. ಭಾರತದ ಹೊರಗಿನ ಅನೇಕ ದೇಶಗಳಲ್ಲಿ ಕಾರಾಗೃಹದಲ್ಲಿರುವ ಕೈದಿಗಳು ಅವರ ಮನೆಯವರ ಜೊತೆ ಬೇರೆ ಕೋಣೆಯಲ್ಲಿ ಭೇಟಿ ಆಗುತ್ತಾರೆ. ಕೆನಡಾ, ಅಮೇರಿಕಾ, ಜರ್ಮನಿ, ಫಿಲಿಪ್ಪೈನ್ಸ್, ಸೌದಿ ಅರೇಬಿಯಾ, ಆಸ್ಟ್ರೇಲಿಯಾ ಸಹಿತ ಅನೇಕ ದೇಶಗಳಲ್ಲಿ ಈ ಸೌಲಭ್ಯ ನೀಡಲಾಗುತ್ತದೆ.