|
ನವದೆಹಲಿ – ಇಲ್ಲಿಯ ಮೌಲಾನಾ ಆಜಾದ್ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ. ಈ ವಿಡಿಯೋದಲ್ಲಿ ಶ್ರೀ ಕೃಷ್ಣನ ಭಕ್ತ ಸುಧಾಮ ಇವನನ್ನು ಕುಡುಕನಂತೆ ತೋರಿಸಿ ಸುಧಾಮ ಮತ್ತು ಭಗವಂತ ಶ್ರೀ ಕೃಷ್ಣನನ್ನು ವ್ಯಂಗ್ಯವಾಗಿ ತೋರಿಸಲಾಗಿದೆ. ಈ ವಿಡಿಯೋದಲ್ಲಿ ಮಧ್ಯಪಾನದ ನಶೆಯಲ್ಲಿರುವ ಸುಧಾಮ ಶ್ರೀ ಕೃಷ್ಣನಿಗೆ ಸಾರಾಯಿ ನೀಡುತ್ತಿರುವ ಹಾಗೆ ತೋರಿಸಲಾಗಿದೆ. ಲೇಖಕ ಅನ್ಸುಲ್ ಇವನು ಪ್ರಸಾರ ಮಾಡಿರುವ ೪೪ ಸೆಕೆಂಡ್‌ನ ಈ ವಿಡಿಯೋದಲ್ಲಿ ‘ಹೇ ದ್ವಾರಪಾಲೋ, ಕನ್ಹೈಯಾ ಕೊ ಕಹ ದೊ’, ಈ ಹಾಡನ್ನು ಹಿನ್ನೆಲೆ ಸಂಗೀತವನ್ನೂ ನುಡಿಸಲಾಗಿದೆ. ಈ ವಿಡಿಯೋ ಅಕ್ಟೋಬರ್ ೯, ೨೦೨೨ ರಂದು ಈ ಮಹಾವಿದ್ಯಾಲಯದಲ್ಲಿ ನಡೆದಿರುವ ಕಾರ್ಯಕ್ರಮದ್ದಾಗಿದೆ. ಈ ವಿಡಿಯೋಗೆ ವಿರೋಧ ವ್ಯಕ್ತವಾಗುತ್ತಿರುವುದು ತಿಳಿಯುತ್ತಲೇ ಕಾರ್ಯಕ್ರಮ ಪ್ರಸ್ತುತಪಡಿಸುವವರು ಕ್ಷಮೆ ಕೋರಿದ್ದಾರೆ.
‘Drunk Sudama offering alcohol to Krishna’: Students of Maulana Azad Medical College mock Krishna and Sudama, apologise after uproarhttps://t.co/3rZ3EG1WNL
— OpIndia.com (@OpIndia_com) October 12, 2022
೧. ಈ ವಿಡಿಯೋದಲ್ಲಿ ವೇದಿಕೆಯ ಮೇಲೆ ಕಾರ್ಯಕ್ರಮ ಪ್ರಸ್ತುತಪಡಿಸುವ ಒಬ್ಬ ಹುಡುಗಿಯನ್ನು ಶ್ರೀ ಕೃಷ್ಣನ ರೂಪದಲ್ಲಿ ತೋರಿಸಲಾಗಿದೆ. ತೆರೆಯ ಬಲಗಡೆಯಿಂದ ಒಬ್ಬ ನಾಯಕ ಸುಧಾಮನ ಪಾತ್ರದಲ್ಲಿ ಮಧ್ಯಪಾನದ ನಶೆಯಲ್ಲಿ ಪ್ರವೇಶ ಮಾಡುತ್ತಾನೆ. ಅವನು ನೇರ ಬಾಟಲಿಯಿಂದ ಸಾರಾಯಿ ಕುಡಿಯುತ್ತಿರುವುದು ತೋರಿಸಲಾಗಿದೆ. ಅದರ ನಂತರ ಅವನು ಶ್ರೀ ಕೃಷ್ಣನ ಕಡೆಗೆ ಹೋಗುತ್ತಾನೆ ಮತ್ತು ಅವನಿಗೆ ತನ್ನ ಬಾಟಲಿಯಿಂದ ಸಾರಾಯಿ ನೀಡುತ್ತಾನೆ. ಈ ದೃಶ್ಯ ನೋಡುತ್ತಲೇ ಉಪಸ್ಥಿತ ಪ್ರೇಕ್ಷಕರು ಕುಣಿದು ಕೂಪ್ಪಳಿಸುತ್ತಿರುವುದು ತೋರಿಸಲಾಗಿದೆ.
೨. ಮೌಲಾನ ಆಜಾದ್ ವೈದ್ಯಕೀಯ ಮಹಾವಿದ್ಯಾಲಯದ ‘ನಿವಾಸಿ ಡಾಕ್ಟರ್ಸ್ ಅಸೋಸಿಯೇಷನ್’ ಈ ಕಾರ್ಯಕ್ರಮದ ಆಯೋಜನೆ ಮಾಡಿತ್ತು. ಈ ಪ್ರಕರಣದಿಂದ ಅವರು ಪ್ರಸಿದ್ಧಿ ಮಾಡಿರುವ ಕರಪತ್ರಗಳಲ್ಲಿ, ಈ ವಿಡಂಬನಾತ್ಮಕ ಕಾರ್ಯಕ್ರಮದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವಾಗಿರೋದು ಗಮನಕ್ಕೆ ಬಂದಿದೆ. ಅದರ ನಂತರ ಕಾರ್ಯಕ್ರಮ ಪ್ರಸ್ತುತಪಡಿಸಿರುವ ‘ಮಾಹೋಲ್ ಮೇಕರ್ಸ್’ ಇದರ ಸದಸ್ಯರನ್ನು ಕರೆಯಿಸಿ ಅವರಿಂದ ಲಿಖಿತ ಸ್ವರೂಪದಲ್ಲಿ ಕ್ಷಮಯಾಚನೆ ಬರೆಸಿಕೊಳ್ಳಲಾಗಿದೆ. ಹಾಗೂ ‘ಮಾಹೋಲ್ ಮೇಕರ್ಸ್’ ಇನ್ನು ಮುಂದೆ ಮಹಾವಿದ್ಯಾಲಯದ ಉತ್ಸವದ ಕಾರ್ಯಕ್ರಮದಲ್ಲಿ ಪ್ರಸ್ತುತಿಕರಣಕ್ಕೆ ನಿಷೇಧ ಹೇರಲಾಗಿದೆ.
ಸಂಪಾದಕೀಯ ನಿಲುವು
|