ಹಿಂದಿ ಭಾಷೆಯನ್ನು ಹೇರುವ ಮೂಲಕ ಕೇಂದ್ರವು ಭಾಷಾಯುದ್ಧವನ್ನು ಪ್ರಾರಂಭಿಸಬಾರದು !

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಇವರಿಂದ ಪ್ರಧಾನಿ ಮೋದಿಗೆ ಮನವಿ !

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್

ಚೆನ್ನೈ (ತಮಿಳುನಾಡು) – ಹಿಂದಿ ಭಾಷೆಯನ್ನು ಹೇರುವ ಮೂಲಕ ಕೇಂದ್ರವು ಒಂದು ರೀತಿ ಭಾಷಾಯುದ್ಧವನ್ನು ಪ್ರಾರಂಭಿಸಬಾರದು. ಸರಕಾರದಿಂದ ಇಂತಹ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಧ್ಯಮಗಳಿಂದ ತಿಳಿಯಿತು. ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಪ್ರಯತ್ನ ಕೈಬಿಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದರು. ಸಂಸತ್ತಿನ ಸಮಿತಿ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಭಾಷೆಯ ವರದಿಯನ್ನು ಸಲ್ಲಿಸಿದ್ದರು. ಇದರಲ್ಲಿ ಐ.ಐ.ಟಿ., ಐ.ಐ.ಎಂ., ಎಮ್ಸ್ ಹಾಗೂ ಕೇಂದ್ರೀಯ ವಿದ್ಯಾಪೀಠಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ಆಂಗ್ಲ ಭಾಷೆಯ ಬದಲು ಹಿಂದಿ ಭಾಷೆಯನ್ನು ಬಳಸಲು ಸಂಸತ್ತಿನ ಸಮಿತಿ ಶಿಫಾರಸು ಮಾಡಿದೆ. ಈ ಕುರಿತು ಸ್ಟಾಲಿನ್ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಸ್ಟಾಲಿನ್ ತಮ್ಮ ಮಾತನ್ನು ಮುಂದಯವರೆಸುತ್ತಾ, ಈ ವರದಿಯನ್ನು ಅನುಷ್ಠಾನಕ್ಕೆ ತಂದರೆ, ದೇಶದ ಇತರ ಭಾಷಾ ಸಮುದಾಯಗಳು ಎರಡನೆಯ ಸ್ಥಾನದಲ್ಲಿ ಉಳಿಯುವ ಸಮಯ ಬರುವುದು. ಈ ಮೊದಲು ತಮಿಳುನಾಡಿನಲ್ಲಿ ಇದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಹಿಂದಿಯನ್ನು ಹೇರುವುದು ಭಾರತದ ಅಖಂಡತೆಗೆ ಸವಾಲು ಹಾಕಿದಂತಾಗುತ್ತದೆ. ಭಾಜಪ ಸರಕಾರವು ಹಿಂದಿನ ಪ್ರತಿಭಟನೆಗಳಿಂದ ಪಾಠ ಕಲಿಯಬೇಕು. ನಾವು ದೇಶದ ವಿವಿಧ ಭಾಷೆಗಳನ್ನು ಕೇಂದ್ರದ ಅಧಿಕೃತ ಭಾಷೆಯನ್ನಾಗಿ ಮಾಡಲು ಪ್ರಯತ್ನಿಸಬೇಕು; ಆದ್ದರಿಂದಲೇ ಹಿಂದಿ ಭಾಷೆಗೆ ಈಗ ಇಂತಹ ಸ್ಥಾನ ನೀಡುವ ಅಗತ್ಯವೇನು ? ಕೇಂದ್ರೀಯ ಪರೀಕ್ಷೆಗಳಲ್ಲಿ ಆಂಗ್ಲ ಭಾಷೆಯ ಬದಲು ಹಿಂದಿ ಭಾಷೆಗೆ ಆದ್ಯತೆ ನೀಡಲು ಏಕೆ ಪ್ರಸ್ತಾಪಿಸಲಾಯಿತು? ಈ ವಿಷಯಗಳು ಸಂವಿಧಾನದ ಮೂಲಭೂತ ಹಕ್ಕಿಗೆ ವಿರುದ್ಧವಾಗಿವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆಗೆ ವ್ಯಕ್ತವಾಗುತ್ತಿರುವ ವಿರೋಧದ ಹಿನ್ನಲೆಯಲ್ಲಿ ಸರಕಾರವು ಈಗ ದೇಶದಲ್ಲಿ ಸಂಸ್ಕೃತ ಭಾಷೆಗೆ ಆದ್ಯತೆ ನೀಡಲು ಪ್ರಯತ್ನಿಸಬೇಕು ! ದೇವಭಾಷೆ ಸಂಸ್ಕೃತವು ಎಲ್ಲಾ ಪ್ರಾದೇಶಿಕ ಭಾಷೆಗಳ ಜನನಿಯಾಗಿದೆ !