ಕೋಝಿಕೊಡ (ಕೇರಳ) ಇಲ್ಲಿ ಶಾಲೆಯ ಹೊರಗೆ ಜಿಹಾದಿ ಸಂಘಟನೆಗಳ ಪ್ರತಿಭಟನೆ

ಕೊಝಿಕೊಡ – ಇಲ್ಲಿಯ ’ ಪ್ರೊವಿಡ್ಯನ್ಸ್ ಗರ್ಲ್ಸ್’, ಎಂಬ ಉಚ್ಚ ಮಾಧ್ಯಮಿಕ ಶಾಲೆಯಲ್ಲಿ ೧೧ ನೇ ತರಗತಿಯ ವಿದ್ಯಾರ್ಥಿನಿಗೆ ಹಿಜಾಬ್ ಧರಿಸಿ ಬರಲು ಅನುಮತಿ ನಿರಾಕರಿಸಿರುವುದರಿಂದ ಜಿಹಾದಿ ಸಂಘಟನೆಗಳು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದರು. ಹುಡುಗಿಯ ಪೋಷಕರ ಮಧ್ಯಸ್ಥಿಕೆಯ ನಂತರವೂ ಶಾಲೆಯ ಆಡಳಿತವು ಹಿಜಾಬ ವಿಷಯವಾಗಿ ಅಭಿಪ್ರಾಯ ಬದಲಿಸಲು ನಿರಾಕರಿಸಿದುದರಿಂದ ವಿದ್ಯಾರ್ಥಿನಿಗೆ ಶಾಲೆ ಬಿಡುವ ಪರಿಸ್ಥಿತಿ ಬಂದಿತು.ಶಾಲೆಯ ಪರಿಸರದಲ್ಲಿ ಆಂದೋಲನಕಾರರಿಂದ ಪೊಲೀಸರ ಜೊತೆಗೆ ಘರ್ಷಣೆ ನಡೆದಿರುವುದು ಮೂಲದಿಂದ ತಿಳಿದು ಬಂದಿದೆ. ಹುಡುಗಿಯು ಶಾಲೆಯ ಸಮವಸ್ತ್ರದ ನಿಯಮ ಪಾಲಿಸಬೇಕು, ಹಾಗೂ ಆಕೆಎ ಹಿಜಾಬ ಧರಿಸಿ ಬರಲು ಅನುಮತಿ ನೀಡಲಾಗುವುದಿಲ್ಲ, ಎಂದು ಶಾಲೆಯ ಅಧಿಕಾರಿಗಳು ಹುಡುಗಿಗೆ ತಿಳಿಸಿದ್ದರು.

ಈ ಶಾಲೆ ಸರಕಾರದ ಅನುದಾನದಿಂದ ನಡೆಯುವುದರಿಂದ ಹಿಜಾಬ್‌ಗೆ ಅನುಮತಿ ನೀಡಬೇಕೆಂದು ಜಿಹಾದಿ ವಿದ್ಯಾರ್ಥಿ ಸಂಘಟನೆಯಿಂದ ದಾವೆ ಮಾಡಲಾಯಿತು. ತಮ್ಮ ವರ ಶಿಕ್ಷಣ ಮತ್ತು ಧರ್ಮದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಮುಸಲ್ಮಾನ ವಿದ್ಯಾರ್ಥಿಗಳ ಪ್ರತಿಪಾದನೆಯಾಗಿದೆ ಇದಕ್ಕೆ ಪ್ರತ್ಯುತ್ತರವೆಂದು ಹಿಂದುತ್ವವಾದಿ ಸಂಘಟನೆಗಳು ಕೂಡ ಆಂದೋಲನ ನಡೆಸಿದವು.

ಸಂಪಾದಕೀಯ ನಿಲುವು

ಹಿಂದೂಗಳಿಗೆ ‘ಧರ್ಮ ನಾಲ್ಕುಗೋಡೆಯ ಒಳಗೆ ಇಟ್ಟುಕೊಳ್ಳಿ’, ಎಂಬ ಸಲಹೆ ನೀಡುವ ಪ್ರಗತಿಪರರು,ಜಾತ್ಯಾತೀತರು,ಕಾಂಗ್ರೆಸ್ಸಿಗರು ಈಗ ಮುಸಲ್ಮಾನರಿಗೆ ಈ ರೀತಿಯ ಸಲಹೆ ಏಕೆ ನೀಡುವುದಿಲ್ಲ? ಈ ವಿಷಯದಲ್ಲಿ ಈಗ ಅವರು ಮೌನವೇಕೆ?