ಮಾಸ್ಕೋ (ರಷ್ಯಾ) – ‘ಅಣುಯುದ್ಧದ ಸಾಧ್ಯತೆಯು ಶೀಘ್ರಗತಿಯಲ್ಲಿ ಹೆಚ್ಚುತ್ತಿದೆ’ ಎಂದು ಪ್ರಸಿದ್ಧ ಉದ್ಯೋಗಪತಿಯಾದ ಇಲಾನ ಮಸ್ಕರವರು ಟ್ವೀಟ್ ಮಾಡಿದ್ದಾರೆ. ಇದರಿಂದ ಪುನಃ ಇನ್ನೊಮ್ಮೆ ಜಗತ್ತಿನಲ್ಲಿ ಅಣುಯುದ್ಧದ ಚರ್ಚೆಗೆ ಬಲದೊರೆತಂತಾಗಿದೆ. ಮ್ಯಾಕ್ಸ್ ಟೆಗಮಾರ್ಕಎಂಬ ಟ್ವಿಟ್ಟರ್ ಖಾತೆಯಲ್ಲಿ ಮಾಡಲಾದ ಟ್ವೀಟ್‌ಗೆ ಉತ್ತರಿಸುವಾಗ ಮಸ್ಕರವರು ಈ ಹೇಳಿಕೆಯನ್ನು ನೀಡಿದ್ದಾರೆ.
BREAKING: Elon Musk warns that the probability of a nuclear war is rapidly rising 😳‼️ pic.twitter.com/LEWv27QKxn
— RapTV (@Rap) October 9, 2022
ಮ್ಯಾಕ್ಸ್ ಟೆಗಮಾರ್ಕರವರು ಹೀಗೆ ಬರೆದಿದ್ದಾರೆ, ‘ನನಗೆ ಜಗತ್ತಿನಲ್ಲಿ ಅಣುಯುದ್ಧದ ಸಾಧ್ಯತೆಯಿದೆ ಎಂದು ಅನಿಸುತ್ತದೆ’. ಈ ಸಂದರ್ಭದಲ್ಲಿ ಅವರು ಒಂದು ಸೂಚಿಯನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ರಷ್ಯಾ ಯುಕ್ರೇನಿನ ಮೇಲೆ ಅಣುಬಾಂಬ್ ಹಾಕುವ ಸಾಧ್ಯತೆಯು ಶೇ. ೩೦ರಷ್ಟು ಇರುವುದಾಗಿ ಹೇಳಲಾಗಿದೆ. ಹೀಗಾದರೆ ‘ನಾಟೋ’ ದೇಶಗಳು ರಷ್ಯಾದ ವಿರುದ್ಧ ಯುದ್ಧಕ್ಕೆ ಇಳಿಯುವ ಸಾಧ್ಯತೆಯು ಶೇ. ೮೦ರಷ್ಟಿದೆ. ಇದರಿಂದಲೇ ಮುಂದೆ ೩ನೇ ಮಹಾಯುದ್ಧ ನಡೆಯುವ ಸಾಧ್ಯತೆಯು ಶೇ. ೭೦ರಷ್ಟಿದೆ.