ಮೂಲತಃ ದುರ್ಗ (ಛತ್ತೀಸಗಡ)ದ ಮತ್ತು ಸದ್ಯ ಸನಾತನದ ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯದಲ್ಲಿದ್ದ ಪೂ. ಚತ್ತರಸಿಂಗ್ ಇಂಗಳೆ (೯೨ ವರ್ಷಗಳು) ಇವರು ಸೆಪ್ಟೆಂಬರ್ ೨೯ ರಂದು ರಾತ್ರಿ ೮ ಗಂಟೆಗೆ ದೇಹತ್ಯಾಗ ಮಾಡಿದರು. ಅವರ ನಂತರ ೩ ಗಂಡು ಮಕ್ಕಳು, ಸೊಸೆಯರು, ಮಗಳು, ಅಳಿಯ ಮತ್ತು ಮೊಮ್ಮಕ್ಕಳು, ಹೀಗೆ ಪರಿವಾರವಿದೆ. ಸನಾತನ ಪರಿವಾರವು ಇಂಗಳೆ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.
ಪೂ. ಚತ್ತರಸಿಂಗ್ ಇಂಗಳೆಯವರ ಕಿರು ಪರಿಚಯ
ಪೂ. ಚತ್ತರಸಿಂಗ್ ಇಂಗಳೆ ಅಜ್ಜನವರು ೨೦೦೧ ರಲ್ಲಿ ತಮ್ಮ ಮನೆಯ ೧ ಮಹಡಿಯನ್ನು ಸನಾತನದ ಕಾರ್ಯಕ್ಕಾಗಿ ಅರ್ಪಿಸಿದ್ದರು. ಅಲ್ಲಿಂದಲೇ ಛತ್ತೀಸಗಡ ರಾಜ್ಯದ ಸನಾತನದ ಪ್ರಸಾರಕಾರ್ಯವು ಆರಂಭವಾಯಿತು. ಪ್ರಸಾರದ ನಿಮಿತ್ತ ಬರುವ ಸಾಧಕರಿಗೆ ಅತ್ಯಂತ ಪ್ರೀತಿಯಿಂದ ಆದರಾತಿಥ್ಯವನ್ನು ಮಾಡಿದರು. ಇಳಿ ವಯಸ್ಸಿನಲ್ಲಿಯೂ ಅವರು ಉತ್ಸಾಹದಿಂದ ಎಲ್ಲೆಡೆ ತಿರುಗಾಡಿ ಅಧ್ಯಾತ್ಮ ಪ್ರಸಾರ ಮಾಡುತ್ತಿದ್ದರು. ಅವರು ಚಳಿ-ಬಿಸಿಲು ಏನಿದ್ದರೂ ಗ್ರಂಥ ಪ್ರದರ್ಶನದ ಸ್ಥಳದಲ್ಲಿ ಸೇವೆಯನ್ನು ಮಾಡುತ್ತಿದ್ದರು. ಅವರ ಉತ್ಸಾಹವನ್ನು ನೋಡಿ ಇತರ ಸಾಧಕರಿಗೂ ಸೇವೆಗೆ ಪ್ರೇರಣೆ ಸಿಗುತ್ತಿತ್ತು. ಅವರು ಸಮಾಜದಲ್ಲಿ ಅತ್ಯಂತ ಗಣ್ಯವ್ಯಕ್ತಿಗಳಾಗಿದ್ದರು.