ಅನಂತನಾಗ (ಜಮ್ಮು-ಕಾಶ್ಮೀರ) ಇಲ್ಲಿ ೨ ಭಯೋತ್ಪಾದಕರ ಹತ್ಯೆ !

ಶ್ರೀನಗರ – ಜಮ್ಮು ಕಾಶ್ಮೀರದಲ್ಲಿನ ಅನಂತನಾಗದಲ್ಲಿ ನಡೆದಿರುವ ಚಕಮಕಿಯಲ್ಲಿ ಭದ್ರತಾ ಪಡೆಯಿಂದ ಇಬ್ಬರೂ ಭಯೋತ್ಪಾದಕರ ಹತ್ಯೆ ಮಾಡಲಾಗಿದೆ. ಅಕ್ಟೋಬರ್ ೯ ರಂದು ತಡರಾತ್ರಿ ಅನಂತನಾಗದಲ್ಲಿ ತಂಗಪಾವ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿ ಕುಳಿತಿರುವ ಮಾಹಿತಿ ಭದ್ರತಾ ಪಡೆಯವರಿಗೆ ದೊರೆತಿತ್ತು. ಅದರ ನಂತರ ಅವರು ಆ ಸ್ಥಳದಲ್ಲಿ ಸುತ್ತುವರೆದು ಶೋಧ ಕಾರ್ಯ ಆರಂಭಿಸಿದರು. ಆ ಸಮಯದಲ್ಲಿ ತಕ್ಷಣ ಭಯೋತ್ಪಾದಕರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಚಕಮಕಿಯಲ್ಲಿ ಅಕ್ಟೋಬರ್ ೧೦ ರಂದು ಬೆಳಿಗ್ಗೆ ಇಬ್ಬರೂ ಭಯೋತ್ಪಾದಕರನ್ನು ಕೊಲ್ಲಲಾಯಿತು.

ಕಳೆದ ವಾರದಲ್ಲೇ ಜಮ್ಮು ಕಾಶ್ಮೀರದ ಶೋಪಿಯಾಂ ಜಿಲ್ಲೆಯಲ್ಲಿನ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ನಡೆಸಿರುವ ಜಂಟಿ ಕಾರ್ಯಾಚರಣೆಯಲ್ಲಿ ನಡೆದ ಬೇರೆಬೇರೆ ಚಕಮಕಿಯಲ್ಲಿ ೪ ಭಯೋತ್ಪಾದರು ಹತರಾಗಿದ್ದಾರೆ.

ಸಂಪಾದಕೀಯ ನಿಲುವು

ಭಯೋತ್ಪಾದಕರನ್ನು ನಿರ್ಮಾಣ ಮಾಡುವ ಪಾಕಿಸ್ತಾನವನ್ನು ಎಲ್ಲಿಯವರೆಗೆ ನಾಶ ಮಾಡಲಾಗುವುದಿಲ್ಲ ಅಲ್ಲಿಯವರೆಗೆ ದೇಶದಲ್ಲಿ ಭಯೋತ್ಪಾದನೆಯ ಸಮಸ್ಯೆ ಇರುವುದು ! ಅದಕ್ಕಾಗಿ ಪಾಕಿಸ್ತಾನವನ್ನು ನಾಶ ಮಾಡುವುದು ಅವಶ್ಯಕವಾಗಿದೆ, ಇದನ್ನು ಅರಿತುಕೊಳ್ಳಿ !