ಮೈನಪುರಿ(ಉತ್ತರಪ್ರದೇಶ)ಯಲ್ಲಿ ಬಲಾತ್ಕಾರದ ನಂತರ ಗರ್ಭಿಣಿಯಾದ ಅಪ್ರಾಪ್ತ ಯುವತಿಯನ್ನು ಜೀವಂತವಾಗಿ ಸುಡುವ ಪ್ರಯತ್ನ

ಮೈನಪುರಿ (ಉತ್ತರಪ್ರದೇಶ) – ಇಲ್ಲಿ ೩ ತಿಂಗಳ ಹಿಂದೆ ಬಲಾತ್ಕಾರವಾದ ನಂತರ ಗರ್ಭಿಣಿಯಾದ ಅಪ್ರಾಪ್ತ ಯುವತಿಯನ್ನು ಜೀವಂತವಾಗಿ ಸುಡುವ ಪ್ರಯತ್ನವು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ೩ ಜನರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ.

ಹುಡುಗಿಯ ಊರಿನಲ್ಲಿ ವಾಸಿಸುವ ಅಭಿಷೇಕ ಎಂಬ ಹೆಸರಿನ ಯುವಕನು ೩ ತಿಂಗಳ ಹಿಂದೆ ಈ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದನು; ಆದರೆ ಆಕೆಯು ಹೆದರಿ ಈ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಕೆಲವು ದಿನಗಳ ನಂತರ ಆಕೆಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತು, ಆಗ ಆಕೆಯ ತಪಾಸಣೆ ಮಾಡಿದಾಗ ಆಕೆ ಗರ್ಭಿಣಿಯಾಗಿರುವುದು ಗಮನಕ್ಕೆ ಬಂದಿತು. ಅನಂತರ ವಸ್ತುಸ್ಥಿತಿಯು ತಿಳಿದಾಗ ಪಂಚಾಯತ್ತಿನ ಸಭೆಯಲ್ಲಿ ಹುಡುಗಿ ಹಾಗೂ ಆರೋಪಿಗೆ ವಿವಾಹ ಮಾಡಿಸುವುದಾಗಿ ನಿಶ್ಚಯಿಸಲಾಯಿತು. ಅನಂತರ ಆರೋಪಿ ಅಭಿಷೇಕನ ತಾಯಿಯು ಸಂತ್ರಸ್ಥೆಯನ್ನು ಮನೆಗೆ ಕರೆದೊಯ್ದು ಆಕೆಯ ಮೇಲೆ ಪೆಟ್ರೋಲ್‌ ಸಿಂಪಡಿಸಿ ಆಕೆಯನ್ನು ಜೀವಂತವಾಗಿ ಸುಡಲು ಪ್ರಯತ್ನಿಸಿದಳು. ಇದರಲ್ಲಿ ಯುವತಿಯು ಗಂಭೀರವಾಗಿ ಸುಟ್ಟುಹೋಗಿದ್ದು ಆಕೆಯನ್ನು ಮೊದಲಿಗೆ ಮೈನಪುರಿಯ ಜಿಲ್ಲಾ ಆಸ್ಪತ್ರೆಗೆ ಹಾಗೂ ನಂತರ ಸೈಫಯಿ ಆಸ್ಪತ್ರೆಗೆ ಒಯ್ಯಲಾಯಿತು.

ಸಂಪಾದಕೀಯ ನಿಲುವು

ಇಂತಹವರಿಗೆ ಗಲ್ಲುಶಿಕ್ಷೆಯಾಗಲು ಉತ್ತರಪ್ರದೇಶದ ಭಾಜಪ ಸರಕಾರವು ಪ್ರಯತ್ನಿಸಬೇಕಿದೆ !