ಸಾಧಕರೇ, `ವ್ಯಷ್ಟಿ ಸಾಧನೆಯ ವರದಿ ಕೊಡುವುದು, ಇದು ಆತ್ಮನಿವೇದನ ಭಕ್ತಿಯಾಗಿದೆ’, ಎಂದರಿತು ನಿಯಮಿತವಾಗಿ ವರದಿಯನ್ನು ಕೊಟ್ಟು ಸಾಧನೆಯ ಫಲಶೃತಿಯನ್ನು ಹೆಚ್ಚಿಸಿ !

ಸದ್ಗುರು ಶ್ರೀ. ಸತ್ಯವಾನ ಕದಮ

ಸಾಧಕರು ಸಾಧನೆಯನ್ನು ಮಾಡುವಾಗ ಜವಾಬ್ದಾರ ಸಾಧಕರಿಗೆ ಸಾಧನೆಯ ವರದಿಯನ್ನು ಕೊಡುವುದು ತುಂಬಾ ಮಹತ್ವದ್ದಾಗಿದೆ. ಅನೇಕ ಸಾಧಕರು ವರದಿಯನ್ನು ಕೊಡುವ ಸಂದರ್ಭದಲ್ಲಿ ಜವಾಬ್ದಾರ ಸಾಧಕರು ಬರೆದಿರುವ ಚಿಂತನೆಯನ್ನು ಓದಿದ ನಂತರ ಗಮನಕ್ಕೆ ಬಂದ ಅಂಶವೆಂದರೆ, `ಹೆಚ್ಚಿನ ಸಾಧಕರು ಸಾಧನೆಯ ವರದಿಯನ್ನು ಕೊಡುವಲ್ಲಿ ಕಡಿಮೆ ಬೀಳುತ್ತಿದ್ದಾರೆ. ಕೆಲವರು ವರದಿ ಕೊಡುವುದನ್ನು ನಿಲ್ಲಿಸಿದ್ದಾರೆ.’

೧. `ವರದಿ ಕೊಡುವುದು’ ಇದು ಆತ್ಮನಿವೇದನ ಭಕ್ತಿಯಾಗಿದೆ !

ವರದಿ ಕೊಡುವುದು, ಎಂದರೆ ಸಾಧನೆಯ ಪ್ರಯತ್ನಗಳನ್ನು ಇದ್ದ ಹಾಗೆಯೇ ಪ್ರಾಮಾಣಿಕವಾಗಿ ಸಂತರಿಗೆ ಅಥವಾ ಜವಾಬ್ದಾರ ಸಾಧಕರಿಗೆ ನಿಯಮಿತವಾಗಿ ಆತ್ಮನಿವೇದನೆಯ ಸ್ವರೂಪದಲ್ಲಿ ಹೇಳುವುದು. `ವರದಿ ಕೊಡುವುದು’ ಇದು ಆತ್ಮನಿವೇದನೆಯ ಭಕ್ತಿಯೇ ಆಗಿದೆ. ವರದಿ ಕೊಡುವುದು, ಎಂದರೆ ಕೇವಲ ಒಳ್ಳೆಯ ಪ್ರಯತ್ನಗಳನ್ನು ಹೇಳುವುದಲ್ಲ, ಅದರ ಜೊತೆಗೆ `ನಾವು ಎಲ್ಲಿ ಕಡಿಮೆ ಬೀಳುತ್ತಿದ್ದೇವೆ ?’, ಈ ಕುರಿತು ಪ್ರಾಮಾಣಿಕವಾಗಿ ಹೇಳುವುದು. ವರದಿ ಕೊಡುವುದು ಎಂದರೆ ತನ್ನ ಮನಸ್ಸನ್ನು ಸಂಪೂರ್ಣವಾಗಿ ಹಗುರ ಮಾಡಿಕೊಳ್ಳುವುದು.

`ಸಾಧನೆಯ ವರದಿ’ಯು ಸಾಧಕರ ಸಾಧನಾರೂಪಿ ಸಸಿಗಳ ಒಂದು ರೀತಿಯ ಬೇಲಿಯೇ ಆಗಿರುತ್ತದೆ. ಈ ಬೇಲಿಯಲ್ಲಿಯೇ ಸಾಧಕರ ಸಾಧನಾರೂಪಿ ಸಸಿಗಳು ಸುರಕ್ಷಿತವಾಗಿರುತ್ತವೆ. ಸಸಿಗಳು ಮರವಾಗಿ ರೂಪಾಂತರವಾಗುವವರೆಗೆ ಸಾಧಕರು ಸಾಧನೆಯ ವರದಿಯನ್ನು ಕೊಡುವುದು ಅತ್ಯಂತ ಆವಶ್ಯಕವಾಗಿರುತ್ತದೆ. ಬೇಲಿ ಇಲ್ಲದಿದ್ದರೆ, ಆ ಸಸಿಗಳು ಒಣಗಬಹುದು.

೨. ವ್ಯಷ್ಟಿ ಸಾಧನೆಯ ವರದಿಯನ್ನು ಪ್ರಾಮಾಣಿಕವಾಗಿ ಕೊಡುವುದರಿಂದಾಗುವ ಲಾಭಗಳು

ಅ. ಸಾಧಕರಲ್ಲಿ ವ್ಯಷ್ಟಿ ಸಾಧನೆಯ ಗಾಂಭೀರ್ಯವಿರುತ್ತದೆ.

. ಪ್ರಾರಂಭದಲ್ಲಿ ಸಾಧಕರು ಪ್ರಾಮಾಣಿಕವಾಗಿ ಮತ್ತು ನಿಯಮಿತ ವಾಗಿ ವರದಿಯನ್ನು ಕೊಟ್ಟರೆ ಅವರು ವ್ಯಷ್ಟಿ ಸಾಧನೆಯನ್ನು ನಿರಂತರವಾಗಿ ಮಾಡುತ್ತಾರೆ.

ಇ. ವ್ಯಷ್ಟಿ ಸಾಧನೆಯ ವರದಿಯಲ್ಲಿ ಸಾಧಕರಿಗೆ ಸಂತರಿಂದ ಅಥವಾ ಜವಾಬ್ದಾರ ಸಾಧಕರಿಂದ ಸಾಧನೆಯ ಕುರಿತು ಯೋಗ್ಯ ದೃಷ್ಟಿಕೋನಗಳು ಸಿಗುತ್ತವೆ. ಸಾಧಕರಿಗೆ ವರದಿಯಿಂದ ಯಾವುದಾದರೂ ವಿಶಿಷ್ಟ ಪರಿಸ್ಥಿತಿಯಲ್ಲಿ `ಸಾಧನೆಯ ಕುರಿತು ಯೋಗ್ಯ ದೃಷ್ಟಿಕೋನವನ್ನು ಹೇಗಿಡಬೇಕು ?’, ಎಂಬ ಮಾರ್ಗದರ್ಶನ ಸಿಗುತ್ತದೆ.

. ವ್ಯಷ್ಟಿ ಸಾಧನೆಯ ವರದಿಯಲ್ಲಿ ಸಿಗುವ ಮಾರ್ಗದರ್ಶನದಿಂದ ಸಾಧಕರ ಮನಸ್ಸಿನಲ್ಲಿನ ಅಯೋಗ್ಯ ವಿಚಾರಗಳಿಗೆ ಯೋಗ್ಯ ದಿಶೆ ಸಿಗುತ್ತದೆ. ಆದುದರಿಂದ ಸಾಧಕರ ಮನಸ್ಸಿನಲ್ಲಿರುವ ಸಂದೇಹ, ದ್ವಂದ್ವ, ಹಾಗೆಯೇ ಅವರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಅಡಚಣೆಗಳು ದೂರವಾಗುತ್ತವೆ; ಅದರ ಪರಿಣಾಮದಿಂದ ಸಾಧಕರ ಉತ್ಸಾಹ ಹೆಚ್ಚಾಗಿ ಅವರಿಂದ ವ್ಯಷ್ಟಿ ಸಾಧನೆಯ ಪ್ರಯತ್ನಗಳು ಪರಿಣಾಮಕಾರಿಯಾಗಿ ಆಗುತ್ತವೆ ಮತ್ತು ಅವರ ಸಾಧನೆಯ ಫಲನಿಷ್ಪತ್ತಿ ಹೆಚ್ಚುತ್ತದೆ. ವ್ಯಷ್ಟಿ ಸಾಧನೆಯ ವರದಿಯಲ್ಲಿ ಯೋಗ್ಯ ಪ್ರಯತ್ನಗಳಾಗುವ ದೃಷ್ಟಿಯಿಂದ ಸಾಧಕರಿಗೆ ಊರ್ಜೆ ಸಿಗುತ್ತದೆ.

. ಸಾಧಕರ ಮನಸ್ಸಿನ ಒತ್ತಡವು ಕಡಿಮೆಯಾಗುತ್ತದೆ.

. ಸಾಧಕರು ವರದಿ ಕೊಡುವುದರಿಂದ ವ್ಯಷ್ಟಿ ಸಾಧನೆಯ ವರದಿಯನ್ನು ಕೊಡುವ ಇತರ ಸಾಧಕರಿಗೂ ಕಲಿಯಲು ಸಿಗುತ್ತದೆ, ಹಾಗೆಯೇ ಪ್ರೇರಣೆ ಸಿಗುತ್ತದೆ.

. ವರದಿಯನ್ನು ನಿಯಮಿತವಾಗಿ ಕೊಡುವುದರಿಂದ ದೇವರ ಸಹಾಯ ಮತ್ತು ಆಶೀರ್ವಾದವೂ ಸಿಗುತ್ತವೆ.

೩. ಸಾಧಕರು ವ್ಯಷ್ಟಿ ಸಾಧನೆಯ ವರದಿಯನ್ನು ಕೊಡದಿದ್ದರೆ ಅವರಿಗಾಗುವ ಹಾನಿ

೩ ಅ. ಯೋಗ್ಯ ದಿಶೆ ಸಿಗದಿರುವುದು : ಸಾಧಕರು ವರದಿಯನ್ನು ಕೊಡದಿದ್ದರೆ ಅವರ ಪ್ರಯತ್ನಗಳಿಗೆ ಯೋಗ್ಯ ದಿಶೆಯು ಸಿಗದಿರುವುದರಿಂದ ಅವರ ಪ್ರಯತ್ನಗಳು ಕಡಿಮೆ ಬೀಳುತ್ತವೆ, ಹಾಗೆಯೇ `ನಮ್ಮಿಂದ ಯಾವೆಲ್ಲ ಪ್ರಯತ್ನಗಳಾಗುತ್ತವೆಯೋ, ಅವು ಸರಿಯಾಗಿವೆ’, ಎಂದು ಅವರಿಗೆ ಅನಿಸತೊಡಗಿ ಅವರ ಸಾಧನೆಯಲ್ಲಿ ಅನೇಕ ಅಡಚಣೆಗಳು ಉದ್ಭವಿಸುತ್ತದೆ; ಅದರ ಪರಿಣಾಮದಿಂದ ಅವರ ಸಾಧನೆಯ ಪ್ರಯತ್ನಗಳು ಕಡಿಮೆಯಾಗುತ್ತವೆ.

೩ ಆ. ಅಲ್ಪಸಂತುಷ್ಟಿ ನಿರ್ಮಾಣವಾಗುವುದು : ಸಾಧಕರು ವರದಿಯನ್ನು ಕೊಡದಿದ್ದರೆ ಅವರ ಯಾವ ಪ್ರಯತ್ನಗಳಾಗುತ್ತವೆಯೋ, ಅದರಲ್ಲಿಯೇ ಅವರು ಸಮಾಧಾನದಿಂದಿರುತ್ತಾರೆ ಮತ್ತು ಅವರಲ್ಲಿ ಅಲ್ಪಸಂತುಷ್ಟಿ ನಿರ್ಮಾಣವಾಗುತ್ತದೆ.