ಅಮೇರಿಕಾದಲ್ಲಿ ೫ ತಿಂಗಳಲ್ಲಿ ೧೪ ಹಿಂದೂ ಮಹಿಳೆಯರ ಆಭರಣಗಳ ದರೋಡೆ ಮಾಡಿರುವ ವ್ಯಕ್ತಿಯ ಬಂಧನ !

೨೮ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಬೆಲೆ ಬಾಳುವ ಆಭರಣಗಳನ್ನು ಲೂಟಿಗೈದ !

ಸ್ಯಾಂನ್ ಫ್ರಾನ್ಸಿಸ್ಕೋ (ಅಮೇರಿಕಾ) – ಜೂನ್ ೨೦೨೨ ರಿಂದ ಸನ್ ಹಾಜೆ, ಮಲ್ಪೆಟಸ್, ಸನಿವೇಲ್ ಮತ್ತು ಸಾಂಟಾ ಕ್ಲಾರಾ ಈ ಕ್ಯಾಲಿಫೋರ್ನಿಯಾ ರಾಜ್ಯದ ನಗರದಲ್ಲಿನ ಕನಿಷ್ಠ ೧೪ ಹಿಂದೂ ಮಹಿಳೆಯರ ಆಭರಣಗಳನ್ನು ದೋಚಿರುವ ವ್ಯಕ್ತಿಗೆ ಬಂದಿಸಲಾಗಿದೆ. ಅವನನ್ನು ಇತ್ತಿಚೆಗೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಅವನ ವಿರುದ್ಧ ಆರೋಪ ಸಾಬೀದಾದರೆ ೬೩ ವರ್ಷ ಶಿಕ್ಷೆ ಆಗಬಹುದು. ಮುಂದಿನ ವಿಚಾರಣೆ ನವಂಬರ್ ೪ ರಂದು ನಡೆಯಲಿದೆ.
ಸಾಂಟಾ ಕ್ಲಾರಾ ಕೌಂಟಿಯ ಜಿಲ್ಲಾ ನ್ಯಾಯಾಧೀಕರಣ ಕಾರ್ಯಾಲಯದ ಪ್ರಕಾರ ಲೂಟಿ ಮಾಡುವವನ ಹೆಸರು ಲೆಥನ್ ಜಾನ್ಸನ್ ಎಂದಾಗಿದ್ದು ಅವನು ಮಂಗಳಸೂತ್ರ ಧರಿಸಿರುವ, ಟಿಕಲಿ ಹಚ್ಚಿರುವ ಮತ್ತು ಸೀರೆ ಉಟ್ಟಿರುವ ಹಿಂದೂ ಮಹಿಳೆಯರನ್ನು ಗುರಿ ಮಾಡುತ್ತಿದ್ದನು. ಫಾಲೋ ಆಲ್ಟೊದ ನಿವಾಸಿಯಾಗಿರುವ ೩೭ ವರ್ಷದ ಜಾನ್ಸನ್ ಇವನು ಹಿಂದೂ ಮಹಿಳೆಯರ ಕತ್ತಿನಲ್ಲಿನ ಸರ ಮತ್ತು ಮಂಗಳಸೂತ್ರ ಲೂಟಿ ಮಾಡಿ ಅವರಿಗೆ ಥಳಿಸಿ ನಾಲ್ಕು ಚಕ್ರವಾಹನದಿಂದ ಘಟನಾ ಸ್ಥಳದಿಂದ ಪರಾರಿ ಆಗುತ್ತಿದ್ದನು. ಅವನು ಮುಖ್ಯವಾಗಿ ೫೦ ರಿಂದ ೭೩ ವಯಸ್ಸಿನ ಹಿಂದೂ ಮಹಿಳೆಯರನ್ನು ಲೂಟಿ ಮಾಡುತ್ತಿದ್ದನು. ಅವನು ಇಲ್ಲಿಯವರೆಗೆ ಲೂಟಿ ಮಾಡಿರುವ ಆಭರಣಗಳ ಒಟ್ಟು ಮೌಲ್ಯ ೩೫ ಸಾವಿರ ಅಮೇರಿಕ ಡಾಲರ್ (೨೮ ಲಕ್ಷ ೭೭ ಸಾವಿರ ಭಾರತೀಯ ರೂಪಾಯಿ) ಆಗಿದೆ.

ಸಂಪಾದಕೀಯ ನಿಲುವು

ಇಸ್ಲಾಮಿ ದೇಶದ ನಂತರ ಈಗ ಅಮೆರಿಕದಲ್ಲಿ ಕೂಡ ಹಿಂದೂಗಳು ಅಸುರಕ್ಷಿತವಾಗುತ್ತಿದ್ದಾರೆ, ಇದೇ ಇದರಿಂದ ಗಮನಕ್ಕೆ ಬರುತ್ತದೆ ! ಹಿಂದೂಗಳು ಅಸಹಿಷ್ಣುಗಳೆಂದು ನಿರ್ಧರಿಸಿ ಅವರನ್ನು ತೇಗಳುವ ಅಮೆರಿಕಾದ ಕಿವಿ ಹಿಂಡಲು ಈಗ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇವರು ಮುಂದೆ ಬರಬೇಕೆಂದು ಭಾರತಸಹಿತ ಅಮೆರಿಕದಲ್ಲಿರುವ ಹಿಂದುಗಳಿಗೂ ಕೂಡ ಅನಿಸುತ್ತದೆ !