ದೆಹಲಿಯ ಶಾಲೆಯಲ್ಲಿ ಜುಲೈ ತಿಂಗಳಿನಲ್ಲಿ ೧೧ ವರ್ಷದ ವಿದ್ಯಾರ್ಥಿನಿಯ ಮೇಲೆ ಇಬ್ಬರು ವಿದ್ಯಾರ್ಥಿಗಳಿಂದ ಸಾಮೂಹಿಕ ಬಲಾತ್ಕಾರ !

  • ಶಾಲೆಯಿಂದ ಈ ಪ್ರಕರಣ ಮುಚ್ಚಿಡಲಾಗಿದೆ !

  • ಕ್ರಮ ಕೈಗೊಳ್ಳದೆ ಇರುವುದರಿಂದ ದೆಹಲಿ ಮಹಿಳಾ ಆಯೋಗದಿಂದ ಪೊಲೀಸರಿಗೆ ನೋಟಿಸ್ ಜಾರಿ

ನವ ದೆಹಲಿ – ಇಲ್ಲಿಯ ಕೇಂದ್ರೀಯ ವಿದ್ಯಾಲಯದಲ್ಲಿ ಜುಲೈ ತಿಂಗಳಿನಲ್ಲಿ ಇಬ್ಬರು ವಿದ್ಯಾರ್ಥಿಗಳಿಂದ ೧೧ ವರ್ಷದ ವಿದ್ಯಾರ್ಥಿನಿಯ ಮೇಲೆ ಶೌಚಾಲಯದಲ್ಲಿ ನಡೆದ ಸಾಮೂಹಿಕ ಬಲಾತ್ಕಾರದ ಪ್ರಕರಣದಲ್ಲಿ ದೆಹಲಿ ಮಹಿಳಾ ಆಯೋಗದಿಂದ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪೊಲೀಸರಿಂದ ಈ ಪ್ರಕರಣದ ವರದಿ ಕೇಳಲಾಗಿದೆ. ಅಪರಾಧ ದಾಖಲಿಸುವುದು ಮತ್ತು ಇಲ್ಲಿಯವರೆಗೆ ಮಾಡಲಾದ ಬಂಧನದ ಮಾಹಿತಿ ನೀಡಬೇಕು. ಈ ಪ್ರಕರಣ ಮುಚ್ಚಿಟ್ಟಿರುವ ಶಾಲೆಯ ಶಿಕ್ಷಕ ಮತ್ತು ಇತರ ಸಿಬ್ಬಂದಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ ? ಈ ವಿಷಯದ ಬಗ್ಗೆ ಕೂಡ ವಿಚಾರಣೆ ನಡೆಸಲಾಯಿತು. ಶಾಲೆಯಲ್ಲಿನ ಶಿಕ್ಷಕರು ಈ ಘಟನೆ ಮುಚ್ಚಿಡುವ ಪ್ರಯತ್ನ ಮಾಡಿರುವುದು ಎಂದು ಸಂತ್ರಸ್ತೇ ಹುಡುಗಿಯ ಆರೋಪಿಸಿದ್ದಾಳೆ. ಈ ಸಂತ್ರಸ್ತೆ ಅಕ್ಟೋಬರ್ ೪ ರಂದು ಪೊಲೀಸರಿಗೆ ಈ ವಿಷಯದ ಬಗ್ಗೆ ದೂರು ನೀಡಿದ್ದಳು. ಅದರ ನಂತರ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಸ್ಥಳೀಯ ಕಾರ್ಯಾಲಯದಿಂದ ಕೂಡ ಘಟನೆಯ ವಿಚಾರಣೆಯ ಆದೇಶ ನೀಡಲಾಗಿದೆ.

ಮಹಿಳಾ ಆಯೋಗದಿಂದ ನೀಡಿರುವ ಮಾಹಿತಿಯ ಪ್ರಕಾರ, ಜುಲೈ ತಿಂಗಳಿನಲ್ಲಿ ಸಂತ್ರಸ್ತೆ ಹುಡುಗಿ ಆಕೆಯ ತರಗತಿಗೆ ಹೋಗುವಾಗ ೧೧ ನೇ ಮತ್ತು ೧೨ ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳಿಗೆ ತಪ್ಪಿ ಅವರಿಗೆ ಡಿಕ್ಕಿ ಹೊಡೆದಿದ್ದಳು. ಆ ಹುಡುಗರ ಕ್ಷಮೆ ಕೂಡ ಕೇಳಿದ್ದಳು; ಆದರೆ ಅವರು ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ಅದರ ನಂತರ ಅವರು ಆಕೆಯನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಬಾಗಿಲಿಗೆ ಚಿಲಕ ಹಾಕಿ ಆಕೆಯ ಮೇಲೆ ಬಲಾತ್ಕಾರ ಮಾಡಿದರು. ಯಾವಾಗ ಆಕೆ ಇದನ್ನು ತರಗತಿಯ ಶಿಕ್ಷಕಿಗೆ ಈ ವಿಷಯವಾಗಿ ಹೇಳಿದಳು, ಆಗ ಅವರು ವಿದ್ಯಾರ್ಥಿಗಳಿಗೆ ಶಾಲೆಯಿಂದ ತೆಗೆದು ಹಾಕಲಾಗಿದೆ, ಎಂದು ಹೇಳುತ್ತಾ ಪ್ರಕರಣ ಮುಚ್ಚಿಡುವ ಪ್ರಯತ್ನ ಮಾಡಿದರು.

ಸಂಪಾದಕೀಯ ನಿಲುವು

ಇಷ್ಟೊಂದು ಗಂಭೀರ ಘಟನೆ ನಡೆದರು ಕೂಡ ಪೋಲಿಸ್ ಮತ್ತು ಶಾಲೆಯ ಆಡಳಿತ ಈ ವಿಷಯದ ಬಗ್ಗೆ ನಿಷ್ಕ್ರಿಯವಾಗಿದ್ದಾರೆ ಇದು ಖೇದಕರವಾಗಿದೆ. ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲೇಬೇಕು !