ದೆಹಲಿಯಲ್ಲಿನ ಆಪ್‌ನ ಸಚಿವ ರಾಜೇಂದ್ರ ಪಾಲ್ ಗೌತಮ ಅವರ ಉಪಸ್ಥಿತಿಯಲ್ಲಿ ಹಿಂದೂ ದೇವತೆಗಳನ್ನು ಪೂಜಿಸುವುದಿಲ್ಲ ಎಂದು ಪ್ರಮಾಣ !

ಆಮ್ ಆದ್ಮಿ ಪಕ್ಷದ ಸಚಿವರ ಹಿಂದುದ್ವೆಷೀ ಕೃತ್ಯ!

ನವದೆಹಲಿ – ಇಲ್ಲಿನ ಕರೋಲಬಾಗ ಪ್ರದೇಶದ ರಾಣಿ ಝಾನ್ಸಿ ಮಾರ್ಗದಲ್ಲಿರುವ ಅಂಬೇಡ್ಕರ ಭವನದಲ್ಲಿ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ ಗೌತಮ ಅವರ ಉಪಸ್ಥಿತಿಯಲ್ಲಿ ಒಂದು ಕಾರ್ಯಕ್ರಮ ನೆರವೇರಿತು. ಇದರಲ್ಲಿ ಜನರು ಕೇವಲ ಬೌದ್ಧ ಧರ್ಮದ ದೀಕ್ಷೆಯನ್ನು ತೆಗೆದುಕೊಂಡರು. ಈ ವೇಳೆ ಜನರು ‘ಹಿಂದೂ ದೇವತೆಗಳನ್ನು ಪೂಜಿಸುವುದಿಲ್ಲ ಮತ್ತು ಅವರನ್ನು ದೇವರೆಂದು ಪರಿಗಣಿಸುವುದಿಲ್ಲ’, ಎಂದು ಪ್ರಮಾಣ ವಚನ ನೀಡಲಾಯಿತು. ದೆಹಲಿಯಲ್ಲಿನ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ ಗೌತಮ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ನೆರವೇರಿತು.
ಸಚಿವರ ಸಮ್ಮುಖದಲ್ಲಿ ವಿಜಯದಶಮಿಯ ದಿನವೇ ಇಂತಹ ಹಿಂದೂ ಧರ್ಮದ್ವೇಷಪ್ರೇರಿತ ಪ್ರಮಾಣ ವಚನ ನೀಡಿದ್ದಕ್ಕಾಗಿ ಈ ಬಗ್ಗೆ ವಿರೋಧವಾಗುತ್ತಿದೆ. ಸಚಿವ ರಾಜೇಂದ್ರ ಗೌತಮ ಕೂಡ ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ ಎಂದು ಟೀಕಿಸಲಾಗುತ್ತಿದೆ. ‘ರಾಜೇಂದ್ರ ಗೌತಮ ಅವರು ಹಿಂದೂ ಸಮಾಜದ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಲಾಗುತ್ತಿದೆ.

ಈ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರಗೊಳ್ಳುತ್ತಿದೆ. ಈ ಕುರಿತು ಕರೋಲಬಾಗನ ಭಾಜಪ ನಗರಪಾಲಿಕೆ ಸದಸ್ಯ ಮತ್ತು ಮಾಜಿ ಮಹಾಪೌರ ಯೋಗೇಂದ್ರ ಚಂದೋಲಿಯಾ ಇವರು ಮಾತನಾಡಿ, ನಾಗರಿಕರು ಸ್ವೇಚ್ಛೆಯಿಂದ ಯಾವ ಧರ್ಮವನ್ನೂ ಸ್ವೀಕರಿಸಬಹುದು; ಆದರೆ ಹಿಂದೂ ಸಮಾಜದ ದೇವತೆಗಳನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ. ಇಂತಹ ಹಿಂದೂದ್ವೇಷಿ ಸಚಿವರನ್ನು ಅರವಿಂದ ಕೇಜ್ರಿವಾಲ ಇವರು ಸಂಪುಟದಿಂದ ತೆಗೆದುಹಾಕಬೇಕು’ ಎಂದು ಹೇಳಿದರು.

ಈ ಕುರಿತು ಮೇಜರ ಸುರೇಂದ್ರ ಪುನಿಯಾ ಇವರು ಟ್ವೀಟ್ ಮಾಡಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಇವರ ಸಂಪುಟದ ಸಚಿವ ರಾಜೇಂದ್ರ ಪಾಲ ಗೌತಮ ಅವರು ಸನಾತನ ಧರ್ಮ, ಭಗವಾನ ಶ್ರೀಕೃಷ್ಣ ಮತ್ತು ಭಗವಾನ ಶ್ರೀರಾಮನನ್ನು ಮುಕ್ತ ವೇದಿಕೆಯಿಂದ ನಿಂದಿಸಿದ್ದಾರೆ. ಅವರು ದೆಹಲಿಯಲ್ಲಿ ಬೃಹತ್ ಪ್ರಮಾಣದಲ್ಲಿ ಮತಾಂತರ ಮಾಡಿಸುತ್ತಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬನಿಗೂ ತನ್ನ ಧರ್ಮವನ್ನು ಪಾಲಿಸಲು ಸ್ವಾತಂತ್ರ್ಯವಿರುವಾಗ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇಂತಹ ಪ್ರಮಾಣ ವಚನ ಸ್ವೀಕಾರ ಮಾಡಿಸುವುದು ಸಂವಿಧಾನವಿರೋಧಿ ಕೃತ್ಯವಾಗಿದೆ. ಈ ರೀತಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಕ್ಕಾಗಿ ಅವರ ವಿರುದ್ಧ ದೂರನ್ನು ದಾಖಲಿಸಬೇಕು!